ಇನ್ನೂ ಹೆಚ್ಚಿನ ಸಾಮಾಜಿಕ, ಕೋರೊನಾ ಜಾಗೃತಿ ಕಾರ್ಯಗಳು ನಡೆಯಲಿ : ಪ್ರೊ. ಯಶವಂತರಾಯ ಅಷ್ಠಗಿ 

0
185

ಕಲಬುರಗಿ: ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯ ಸಾಮಾಜಿಕ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಸಾರ್ವಜನಿಕರಿಗೆ ಅಗತ್ಯ ಪರಿಹಾರ ಕಲ್ಪಿಸಲು ಶ್ರಮಿಸುತ್ತಿರುವ ಖಾಸಗಿ ದಿನ ಪತ್ರಿಕೆಯ ಪತ್ರಕರ್ತ ಸುರೇಶ ಲೇಂಗಟಿ ಅವರಿಂದ ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯಗಳು ಹಾಗೂ ಕೊರೊನಾ ಜಾಗೃತಿ ಮೂಡಿಸುವ ಕಾರ್ಯಗಳು ನಡೆಯಲಿ ಎಂದು ಬಿಜೆಪಿ ಯುವ ಮುಖಂಡ ಪ್ರೊ.ಯಶವಂತರಾಯ್ ಅಷ್ಟಗಿ ನುಡಿದರು.

ಮಹಾಗಾಂವ ಕ್ರಾಸ್ ನ ಯುವಕರ ಬಳಗದ ವತಿಯಿಂದ ಮಹಾಮಾರಿ ಕರೋನಾ ವೈರಸ್ ಅಟ್ಟಹಾಸದ ಮಧ್ಯೆಯೂ ನಿರಂತರ ಸುದ್ದಿಗಳನ್ನು ಬಿತ್ತಿರಿಸಿದ್ದಕ್ಕಾಗಿ ಹಾಗೂ ಲೇಂಗಟಿ ಯವರ ಹುಟ್ಟುಹಬ್ಬದ ನಿಮಿತ್ಯ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಮಾಡಿ ಮಾತನಾಡಿದ, ಅಷ್ಠಗಿ ಮುಂಬರುವ ದಿನಗಳಲ್ಲಿ ಈ ಭಾಗದಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವರದಿಗಳು ಬಿತ್ತರಿಸುವ ಮೂಲಕ ಜನರ ಕಣ್ಣು ಹಾಗೂ ಕಿವಿಯಾಗುವ ಕೆಲಸ ಮಾಡಬೇಕು , ಕರೋನಾ ನಿಯಂತ್ರಣಕ್ಕೆ ಮಾಸ್ಕ್, ಸ್ಯಾನಿಟೈಜರ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು,ಹಾಗೂ ಸ್ವಯಂ ಜಾಗೃತಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

Contact Your\'s Advertisement; 9902492681

ತದ ನಂತರ ಪತ್ರಕರ್ತ ಸುರೇಶ ಲೇಂಗಟಿ ಹಾಗೂ ಬಿಜೆಪಿ ಯುವ ಮುಖಂಡ ಅಜರ ಪಟೇಲ ಮಾಲಿ ಪಾಟೀಲ್ ಕುರಿಕೋಟಾ ಅವರ ಹುಟ್ಟು ಹಬ್ಬದ ನಿಮಿತ್ಯ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಲಾಲಬಹದ್ದೂರ್ ಶಾಸ್ತ್ರಿ ಇಂಡೆ, ಉಮೇಶ್ ಸಾಗರ್ ಯಕ್ಕಂಚಿ, ಸುಧಾಕರ್ ಲೇಂಗಟಿ, ರವಿ ಪಂಚಾಳ, ಮಡಿವಾಳ ಉಚ್ಚದ, ಸಾಗರ ಕಲ್ಯಾಣ,ಮಿಲಿಂದ, ಶಂಕರ ಭಾಗೋಡಿ ಹಾಗೂ ಇತರರಿದ್ದರು..

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here