“ಮೈ ಮೊನಾಲಿಸಾ ಇನ್ ಡಕ್ಕನಿ ಟಚ್”: ಪೇಂಟಿಂಗ್ ಗೆ ಕಲಬುರಗಿ ರಹಮಾನ್ ಪಟೇಲ್ ಗೆ ಬೆಳ್ಳಿ ಪ್ರಶಸ್ತಿ

0
81
  • ಸಾಜಿದ್ ಅಲಿ

ಕಲಬುರಗಿ: ವಿಶ್ವವನ್ನೆ ಬೆರಗು ಗೊಳಿಸಿದ ಮೊನಾಲಿಸಾ ಪೇಂಟಿಗ್ ನ್ನು ಕಲಬುರಗಿ ಕಲಾವಿದರೊಬ್ಬರು ತನ್ನ ಕಲಾಕೃತಿಯ ಮೂಲಕ ಹೊಸ ಬಣ್ಣವನ್ನು ಬಳೆಯುವ ಮೂಲಕ ತನ್ನ ಪ್ರತಿಭೆಯಿಂದ ಭಾರತದ “ಮೈ ಮೊನಾಲಿಸಾ ಇನ್ ಡಕ್ಕನಿ ಟಚ್” ಬೆಳ್ಳಿ ಪ್ರಶಸ್ತಿ ಪಡೆದಿದ್ದಾರೆ.

ಹರಿಯಾಣದ ಗುರಗಾಂವ್ ನ ಉಚಾನ್ ಫೌಂಡೇಶನ್ ಆಯೋಜಿಸಿದ ಆನ್ ಲೈನ್ ಕಲಾಪ್ರದರ್ಶನದಲ್ಲಿ ಕಲಬುರಗಿಯ ಚಿತ್ರಕಲಾವಿದ ರಹಮಾನ್ ಪಟೇಲ್ ಸೇರಿ ಮೂವರು ಕಲಾವಿದರು ಭಾಗವಹಿಸಿದರು, ವಿಶ್ವದಾದ್ಯಂತ ತನ್ನದೆ ಛಾಪು ಮೂಡಿಸಿದ ಮೊನಾಲಿಸಾ ಅವರ 30 ಅತ್ಯುತ್ತಮ ಕಲಾಕೃತಿಗಳು ಅಗಸ್ಟ್ 02 ರಿಂದ 10 ರವರೆಗೆ www.uchaanarts.com ವೆಬ್ ಸೈಟ್ ನಲ್ಲಿ ಆನ್ ಲೈನ್ ಕಲಾ ಪ್ರದರ್ಶನಕ್ಕಿಡಲಾಗಿದೆ, ದೇಶ, ವಿದೇಶದ ವಿವಿಧ ಕಾಲಾವಿದರು ಇದರಲ್ಲಿ ಭಾಗವಹಿಸಿದ್ದಾರೆ.

Contact Your\'s Advertisement; 9902492681

ಒಂದು ವೇಳೆ ಮೊನಾಲಿಸ ಭಾರತದವರಾಗಿದ್ದರೆ ಹೇಗಿರತ್ತಿತು ಮತ್ತು ಅವರ ಪೇಂಟಿಂಗ್ ಹೇಗೆ ಕಾಣುತ್ತಿತ್ತು ಕುತುಹಲ ಇರಬಹುದೆಂಬ ಭಾವದೊಂದಿಗೆ ಈ ಕಲಾ ಕೃತಿ ಮಾಡಲಾಗಿದೆ ಎಂದು ರಹೆಮಾನ್ ಪಟೇಲ್ ಮಾತನಾಡಿ ತಿಳಿಸಿದ್ದಾರೆ.

ಮೊನಾಲಿಸಾ ಟೈಮ್ ಲ್ಲಿ ಭಾರತದಲ್ಲಿ ಇದ್ದರೆ ಅವರ ಪೇಂಟಿಂಗ್ ಬ್ಯಾಗ್ ರೌಂಡ್ ನಲ್ಲಿ ಗೋಡೆ, ಪರ್ವತ, ಕೆಲವು ಗ್ರಾಮಗಳು, ಮತ್ತು ರಾಣಿ ವಿಹಾರದಲ್ಲಿ ಪ್ರಣಿಗಳ ದರ್ಶನ ಸೇರಿದಂತೆ ಇತರೆ ಸ್ವಂತಿಕೆಯನ್ನು ಇಟ್ಟುಕೊಂಡು ಅದನ್ನು ಡೆಕ್ಕನಿ ಚಿಕಣಿ ಚಿತ್ರಕಲೆಯೊಂದಿಗೆ ವಿಲೀನಗೊಳಿಸಲಾಗಿದೆ.  ಭಾರತದಲ್ಲಿ ಈ ಕಲಾಕೃತಿಗಳಲ್ಲಿ ರಾಜ,ಮಹಾರಜರ ವಂಶಸ್ಥರ ಹಾಗೂ ಕ್ವೀನ್  ಕಲಾಕೃತಿಗಳ ಪ್ರಕಾರ ಮೊನಾಲಿಸಾಳ ಕೈಯಲ್ಲಿ ಒಂದು ಫಾಲ್ಕನ್ ಇರುತ್ತಿತ್ತು ಎಂಬುದನ್ನು ತೊರಿಸಲಾಗಿದ್ದು, ಇದು ಭಾರತ ದೇಶದ ಮೊನಾಲಿಸ ಕಲಾಕೃತಿಯಾಗಿ ಪ್ರತಿನಿಧಿಸಲಿದೆ. – ರಹಮಾನ್ ಪಟೇಲ್, ಚಿತ್ರ ಕಲಾವಿದ ಕಲಬುರಗಿ.

ಖ್ಯಾತ ಕಲಾವಿದ ಲಿಯೊನರ್ಡೊ ಡಾ. ವಿನ್ಸಿಯ ಮೊನಾಲಿಸಾವನ್ನು ತಮ್ಮದೆ ಆದ ಶೈಲಿಯಲ್ಲಿ ರಚಿಸಲು ಕಲಾವಿದರಿಗೆ ಸ್ವಾತಂತ್ರ ನೀಡಿರುವುದು ಈ ಕೃತಿಯಲ್ಲಿ ಕಂಡುಬಂದಿದೆ.  ರಹೆಮಾನ್ ಪಟೇಲ್ ಅವರು ವಿಭಿನ್ನವಾದಿ ಅಮೂಘ 52 ಮೊನಾಲಿಸ ವಿವಿಧ ರೀತಿಯ ಕಲಾಕೃತಿಗಳನ್ನು ರಚಿಸಿದ್ದಾರೆ.

ರಹೆಮಾನ್ ಪಟೇಲ್ ಅವರ ಇನ್ನೂ ಹೆಚ್ಚಿನ ಕಲಾಕೃತಿಗಳಿಗೆ ಇಲ್ಲಿ ಕ್ಲೀಕ್ ಮಾಡಿMy Monalisa Catalgue

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here