ವಿಜಯಪುರ: ನಾಡಿನ ಚಿಂತಕ ಪ್ರಗತಿಪರ ಬರಹಗಾರ ವಿಶ್ವಾರಾಧ್ಯ ಸತ್ಯಂಪೇಟೆಯವರಿಗೆ ಕಿರುಕುಳ ನೀಡಲೆಂದೆ ದಾವಣಗೆರೆಯ ಹೊನ್ನಾಳಿಯಲ್ಲಿ ಹಾಕಿದ ಕೇಸ್ ಹಿಂಪಡೆಯಬೇಕೆಂದು ನಾಲತವಾಡ ಸ್ಥಳೀಯ ಬಸವ ಕೇಂದ್ರ ತಹಶೀಲ್ದಾರರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿತು.
ವಿಶ್ವಾರಾಧ್ಯ ನಾಡಿನ ಬಹುದೊಡ್ಡ ಚಿಂತಕ. ಶ್ರೇಷ್ಠ ಶರಣ ಸಾಹಿತಿ. ಬಸವ ತತ್ವದ ಅನುಷ್ಠಾನಕ್ಕಾಗಿ ನಾಡಿನಾದ್ಯಂತ ಓಡಾಡುತ್ತಿದ್ದಾರೆ. ಶರಣರ ಜಾತಿರಹಿತ, ವರ್ಗರಹಿತ ವರ್ಣರಹಿತ, ಹೆಣ್ಣು ಗಂಡು ಎಂಬ ಭೇದವಿಲ್ಲದ ಸವi ಸಮಾಜವನ್ನು ಕಟ್ಟಬೇಕೆಂಬ ಕನಸುಗಳನ್ನು ಕಟ್ಟಿಕೊಡುತ್ತಿದ್ದಾರೆ.
ಆದರೆ ಮೂಲಭೂತವಾದಿಗಳಿಗೆ ಬುದ್ಧ ಬಸವ ಅಂಬೇಡ್ಕರ ತತ್ವಗಳನ್ನು ಹೇಳುವ ಸಾಹಿತಿಗಳ ಮೇಲಿನ ಅಸಹನೆಗೆ ಕಾರಣವಾಗಿದೆ. ಟೀಕೆ ಟಿಪ್ಪಣೆಗಳು ಸಕಾರಣವಾಗಿದ್ದಾಗ ಅವನ್ನು ಸ್ವೀಕರಿಸಿ ಗುರುಗಳಾದವರು, ಭಕ್ತರಾದವರು ತಿದ್ದಿಕೊಳ್ಳಬೇಕು.
ಸಂವಿಧಾನಾತ್ಮವಲ್ಲದ ಪದ ಪ್ರಯೋಗ ಮಾಡಿಲ್ಲದಿದ್ದರೂ ಸಹ ಅವರ ಮೇಲೆ ವಿನಾಕಾರಣ ಮಾನಸಿಕ ಅತ್ಯಾಚಾರ ಮಾಡಬೇಕೆಂದು ದಾವಣಗೆರೆಯ ಹೊನ್ನಾಳಿಯ ಗುಂಪು ಮಾಡಿದೆ ಎಂದು ಕೇಂದ್ರ ಬಲವಾಗಿ ಆಪಾದಿಸಿತು. ಸತ್ಯಂಪೇಟೆಯವರ ಮೇಲೆ ಹಾಕಿರುವ ಕೇಸು ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ನಡೆದ ದಬ್ಬಾಳಿಕೆ. ಇದನ್ನು ಕೂಡಲೇ ಕೈಬಿಡಬೇಕೆಂದು ಅದು ಮುಖ್ಯ ಮಂತ್ರಿಗಳನ್ನು ಮನವಿ ಪತ್ರದ ಮೂಲಕ ಒತ್ತಾಯಿಸಿತು.
ಮನವಿ ಪತ್ರ ನೀಡುವಾಗ ನಾಲತ್ವಾಡ ಬಸವ ಕೇಂದ್ರದ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸಮಸ್ತ ಸದಸ್ಯರು ಹಾಜರಿದ್ದರು.