ಶಹಾಪುರ: ಕೃಷ್ಣಾ ನದಿ ಒಳಹರಿವು ಜಾಸ್ತಿಯಾಗಿರುವುದರಿಂದ ಶಹಾಪುರ – ದೇವದುರ್ಗ ಸಂಪರ್ಕ ಕಲ್ಪಿಸುವ ಕೋಳೂರು ಗ್ರಾಮದ ಹತ್ತಿರವಿರುವ ಕೃಷ್ಣಾ ನದಿ ಸೇತುವೆ ಮುಳುಗಡೆ ಭೀತಿಯಲ್ಲಿದೆ.
ದಿನಂಪ್ರತಿ ನಾರಾಯಣಪುರ ಜಲಾಶಯದಿಂದ 70 ಸಾವಿರ ಕ್ಯೂಸೆಕ್ ಅಧಿಕ ಪ್ರಮಾಣದ ನೀರು ಕೃಷ್ಣಾ ನದಿಗೆ ಬಿಡಲಾಗುತ್ತಿದ್ದು ನದಿಯ ತಟದಲ್ಲಿರುವ ಗ್ರಾಮಗಳು ಜಲಾವೃತ ಭೀತಿಯಲ್ಲಿದ್ದು ಗ್ರಾಮದ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.
ಪ್ರತಿ ಬಾರಿ ಪ್ರವಾಹ ಬಂದಾಗ ನದಿ ಉಕ್ಕಿ ಹರಿದು ಸೇತುವೆ ಸಂಪೂರ್ಣ ಮುಳುಗಡೆಯಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ ಆದ್ದರಿಂದ ಸರ್ಕಾರ ಈ ಸೇತುವೆಯನ್ನು ಮೇಲ್ದರ್ಜೆಗೆ ಏರಿಸಿ ಎತ್ತರಕ್ಕೆ ಹೊಸದಾಗಿ ನಿರ್ಮಿಸಬೇಕು ಎಂದು ಶಿವರೆಡ್ಡಿ ಪಾಟೀಲ್ ಕೋಳೂರು ಮನವಿ ಮಾಡಿಕೊಂಡಿದ್ದಾರೆ