ಕೊರೋನಾ ವಾರಿಯರ್ಷಗಳಿಗೆ ಪಾದಪೂಜೆ ಜಾಗೃತಿಯಿಂದ ಜೀವನ ಸಾಗಿಸಿ: ಬಡಿಗೇರ

0
33

ಕಲಬುರಗಿ: ಕೊರೋನಾ ಹಾವಳಿಯಿಂದ ದೂರ ಉಳಿಯಬೇಕಾದರೆ ಮುನ್ನೆಚ್ಚರಿಕೆ ಮತ್ತು ಜಾಗೃತಿಯಿಂದ ಜೀವನ ಸಾಗಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಹೇಳಿದರು.

ನಗರದ ಅಂಭುಬಾಯಿ ಅಂಧ ಬಾಲಕರ ಶಾಲೆಯಲ್ಲಿ ರುದ್ರ ಸಾಮಾಜಿಕ ಸೇವಾ ಸಂಸ್ಥೆಯ ಕಾರ್ಯಕರ್ತರು ಆಯೋಜಿಸಿದ್ದ “ಕೊರೊನಾ ವರಿಯರ್ಷಗಳಿಗೆ ಪಾದಪೂಜೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕೊರೊನಾ ತಡೆಗಟ್ಟುವಲ್ಲಿ ಪೌರ ಕಾರ್ಮಿಕರ ಸೇವೆ ಅನನ್ಯ ಎಂದು ಹೇಳಿದ ಅವರು, ಪ್ರತಿಯೊಬ್ಬರು ಅರಿತು ಜೀವನ ನಡೆಸಿದರೆ ಯಾವ ರೋಗವು ನಮ್ಮ ಸುತ್ತ ಸುಳಿವುದಲ್ಲ ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಮಾಜಿಕ ಕಾರ್ಯಕತ೯ ಶರಣು ಪಪ್ಪಾ, ಸರಿಯಾದ ಸಮಯಕ್ಕೆ ನೊಂದವರ ನೋವಿಗೆ ಸ್ಪಂದಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪೋಲೀಸ್ ಅಧಿಕಾರಿಗಳಾದ ಭಾರತಿ ಧನ್ನಿ ಹಾಗು ಯೆಶೊಧಾ ಕಟಕೆ ಮಾತನಾಡಿ, ನಮ್ಮ ಜೀವನದ ಹಂಗು ಮರೆತು ಜನರ ರಕ್ಷಣೆ ಮಾಡುತ್ತಿರುವ ಪೊಲೀಸರಿಗೆ ಜನರ ಸಹಕಾರ ಅತೀ ಅಗತ್ಯ ಎಂದು ಹೇಳಿದರು. ಇದೆ ಸಂಧರ್ಭದಲ್ಲಿ ರುದ್ರ ಸೇನಾ ಸಂಘಟನೆಯ ಸಮಾಜ ಚಿಂತಕ ವಿನೋದಕುಮಾರ್ ಅವರು ಎಲ್ಲಾ ಕೊರೊನಾ ವಾರಿಯಷ೯ಗಳಿಗೆ ಪಾದ ಪೂಜೆ ಮಾಡಿ ಸನ್ಮಾ ನಿಸಿದರು.
ಕಾರ್ಯಕ್ರಮದಲ್ಲಿ ದತ್ತು ಅಗರವಾಲ್ ಸ್ವಾಗತಿಸಿದರು ಕಾರ್ಯಕ್ರಮ ನಿರೂಪಣೆಯನ್ನು ಧನಂಜಯ ಸ್ವಾಮಿ ಮಾಡಿದರು.

ಈ ಸಂಧರ್ಭದಲ್ಲಿ ಜೆಸ್ಕಾಂ ಸಿಬ್ಬಂದಿಗಳಾದ ರಾಜುಕುಮಾರ ಇಂಡಿ, ಯಲ್ಲಾಲಿಂಗ ಬಿ ಪೂಜಾರಿ, ಮಹೇಶ ಅಗರ್ಕರ್, ಮಹಾನಗರ ಪಾಲಿಕೆ ಸಿಬ್ಬಂದಿಗಳಾದ ನಾಗೇಶ ಧುತ್ತೆ,ಸಂತೋಷ್ ತೇಲ್ಕರ್, ಅಬ್ದುಲ್, ಶಕರೆಮ್ಮ, ರಾಹುಲ ಹಾಗೂ ಸಾಮಾಜಿಕ ಕಾರ್ಯಕರ್ತರಾದ ನಿಜಲಿಂಗಪ್ಪ ಅಗ್ಗಿಮಟ್ಟ, ಲೋಕನಾಥ್ ಕುಲಕರ್ಣಿ ಅವರಿಗೆ ಪಾದ ಪೂಜೆ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here