ಶಹಾಬಾದ:ಸರಕಾರದ ಯೋಜನೆಗಳು ಸಿಗಬೇಕಾದರೆ ಪ್ರತಿಯೊಬ್ಬ ಹಿಡುವಳಿದಾರರು ತಮ,ಮ ಹೊಲದಲ್ಲಿರುವ ಬೆಳೆಯ ಫೋಟೋ ತೆಗೆದು ಆಪ್ಲೋಡ್ ಮಾಡುವ ಮೂಲಕ ಸರಕಾರದ ಬೆಳೆ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕೆಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕಾಶಿನಾಥ ದಂಡೋತಿ ಹೇಳಿದರು.
ಅವರು ಬೆಳೆ ಸಮೀಕ್ಷೆ ಮಾಹಿತಿ ಕುರಿತು ಮುತ್ತಗಾ ಗ್ರಾಮದಲ್ಲಿ ಆಯೋಜಿಸಲಾದ ಬೆಳೆ ಸಮೀಕ್ಷೆ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಹಿಂದೆ ಎಲ್ಲಿಯೋ ಕುಳಿತು ಬೆಳೆ ಸಮೀಕ್ಷೆ ನಡೆಯುತ್ತಿತ್ತು.ಇದರಿಂದ ರೈತರು ಬೆಳೆದ ಬೆಳೆ ಒಂದು, ಅಧಿಕಾರಿಗಳು ದಾಖಲಿಸಿರುವುದು ಮತ್ತೊಂದು ಆಗುತ್ತಿತ್ತು. ಈ ಯಡವಟ್ಟಿನಿಂದ ಸರಕಾರದ ಯೋಜನೆಗಳ ಲಾಭ ರೈತರಿಗೆ ಸಿಗುತ್ತಿರಲಿಲ್ಲ.ಆದ್ದರಿಂದ ರೈತರೇ ತಮ್ಮ ಜಮೀನಿನಲ್ಲಿರುವ ಬೆಳೆಯನ್ನು ಸಮೀಕ್ಷೆ ನಡೆಸುವ ಉತ್ತಮ ಕಾರ್ಯಕ್ರಮ ತಂದಿದ್ದಾರೆ.ಇದರ ಲಾಭ ಪಡೆಯಲು ರೈತರು
ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆ,24ರವರೆಗೆ ಅಪ್ಲೋಡ್ ಮಾಡಲು ಕಾಲಾವಧಿ ನಿಗದಿ ಮಾಡಲಾಗಿದೆ.ಆದ್ದರಿಂದ ರೈತರು ಮೊಬೈಲನಲ್ಲಿ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ರೈತರ ಬೆಳೆ ಸಮೀಕ್ಷೆ ಆ್ಯಪ್-21 ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.ತಮ್ಮ ಬೆಳೆಯ ಸಮೀಕ್ಷೆಯನ್ನು ತಾವೇ ನಡೆಸಿ ಅಪ್ಲೋಡ್ ಮಾಡಿ ಸ್ವ ದೃಢೀಕರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.ಪ್ರತಿಯೊಬ್ಬ ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.ಸಹಾಯಕ ಕೃಷಿ ಅಧಿಕಾರಿ ಶಶಿಕಾಂತ ಭರಣಿ ಸಂಚಾರ ವಾಹನಕ್ಕೆ ಚಾಲನೆ ನೀಡಿ, ಬೆಳೆ ಸಮೀಕ್ಷೆ ಕರಪತ್ರ ಹಾಗೂ ಪೋಸ್ಟರ್ ಬಿಡುಗಡೆ ಮಾಡಿದರು.ಮುತ್ತಗಾ ಗ್ರಾಮದ ರೈತರು ಹಾಜರಿದ್ದರು.
ರೈತ ಬಾಂಧವರಿಗೆ ತಿಳಿಸುವುದೆನೆಂದರೇ ಯೂರಿಯಾ ರಸಗೊಬ್ಬರವೂ ಕೆಳಗಿನ ಪರಿಕರ ಮಳಿಗೆಗಳಲ್ಲಿ ದಾಸ್ತಾನು ಇದ್ದು, ಅಲ್ಲದೇ ದಪ್ಪ ಕಾಲು ಮತ್ತು ಸಣ್ಣ ಕಾಳು ಯೂರಿಯಾದಲ್ಲಿ ಸಾರಜನಕ ಒಂದೇ ಪ್ರಮಾಣದಲ್ಲಿರುತ್ತದೆ.ಇದರಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಆದ್ದರಿಂದ ಈ ಕೆಳಗಿನ ಮಳಿಗೆಗಳಲ್ಲಿ ಅವಶ್ಯವಿರುವ ನಿಗದಿತ ದರದಲ್ಲಿ ಪಡೆದುಕೊಳ್ಳಬೇಕು. ನಮ್ಮ ಗ್ರೋಮರ್ ಸೆಂಟರ್-ಚಿತ್ತಾಪೂರ, ರೇವಣಸಿದ್ಧೇಶ್ವರ ಆಗ್ರೋ ಕೇಂದ್ರ- ಕಾಳಗಿ,ಮಲ್ಲಿಕಾಜರ್ುನ ಆಗ್ರೋ ಸೆಂಟರ್-ಶಹಾಬಾದ,ಕಿಸಾನ್ ಟ್ರೇಡರ್ಸ್-ಕೊಲ್ಲೂರ್, ಲಕ್ಷ ವೆಂಕಟೇಶ್ವರ ಆಗ್ರೋ-ನಾಲವಾರ, ಬಂದಳ್ಳಿ ಟ್ರೇಡರ್ಸ -ಶಹಾಬಾದನಲ್ಲಿ ಪಡೆದುಕೊಳ್ಳಬಹುದು- ಸಂಜುಕುಮಾರ ಮಾನಕರ್ ಸಹಾಯಕ ಕೃಷಿ ನಿರ್ದೇಶಕರು ಚಿತ್ತಾಪೂರ.