ತಳವಾರ, ಪರಿವಾರಕ್ಕೆ ಎಸ್.ಸಿ/ಎಸ್.ಟಿ ಪ್ರಮಾಣ ಪತ್ರಕ್ಕೆ ಒತ್ತಾಯಿಸಿ ಸರತಿ ಉಪವಾಸ ಆರಂಭ

0
300

ಕಲಬುರಗಿ: ತಳವಾರ, ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಕಳೆದ 17ದಿನಳಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು, ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇಂದಿನಿ ಸರತಿ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ ಎಂದು ಶರಣ ಕೊತಲಪ್ಪ ಮುತ್ಯಾ ತೊನಸನಹಳ್ಳಿ ಅವರು ಹೇಳಿದರು.

ತಳವಾರ, ಪರಿವಾರ ಎಸ್.ಟಿ ಹೋರಾಟ ಸಮಿತಿ ಹಮ್ಮೀಕೊಂಡಿರುವ ಸರತಿ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ತಳವಾರ, ಪರಿವಾರ ಸಮುದಾಯಗಳಿಗೆ ಪರಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡಬೇಕು, ಇಲ್ಲದಿದ್ದರೆ ಅಮರಣಾಂತ ಉಪವಾಸ ಮಾಡುತ್ತೇವೆ. ಇದಕ್ಕೂ ಸ್ಪಂದಿಸದಿದ್ದರೆ ಉಗ್ರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

Contact Your\'s Advertisement; 9902492681

ಹಾಗೇ ಈ ಸರತಿ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಮಾತನಾಡಿದ ಉಮೇಶ ಮುದ್ನಾಳ ಅವರು ತಳವಾರ, ಪರಿವಾರ ಸಮುದಾಯಗಳು ಹಿಂದುಳಿದಿವೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿದೆ. ಆದರೆ ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಈ ಸಮುದಾಯಗಳನ್ನು ತುಳಿಯುವಂತಹ ಕೆಲಸ ಮಾಡುತ್ತಿದೆ. ಸರಕಾರದ ಈ ನಡೆಯಿಂದ ಸಂವಿಧಾನ ಉಲ್ಲಂಘನೆಯಾಗಿದೆ.

ಕೂಡಲೇ ಸರಕಾರ ತನ್ನ ತಪ್ಪನ್ನು ತಿದ್ದಿಕೊಂಡು ತಳವಾರ, ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರ ನೀಡಬೇಕು. ಇಲ್ಲದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇಂದು ಸರತಿ ಉಪವಾಸ ಸತ್ಯಾಗ್ರಹ ಸರತಿಯಲ್ಲಿ ಡಾ.ಸರದಾರ ರಾಯಪ್ಪ, ರಾಜೇಂದ್ರ ರಾಜವಾಳ್, ದಿಗಂಬರ ಡಾಂಗೆ,  ಸುನಿತಾ ಮಹಾಂತೇಶ ತಳವಾರ, ಶೀಲಾ ಚಂದ್ರಶೇಖರ ಜಮಾದಾರ ಇದ್ದಾರೆ.

ಈ ಸಂದರ್ಭದಲ್ಲಿಡಾ.ಸದಾ೯ರ ರಾಯಪ್ಪ , ರಾಜೇಂದ್ರ ರಾಜವಾಳ, ದೇವೇಂದ್ರ ಚಿಗರಳ್ಳಿ , ಚಂದ್ರಶೇಖರ ಜಮಾದಾರ ವಕೀಲರು , ಶರಣು ಕೋಳಿ, ಉಮೇಶ ಮುದ್ನಾಳ ಶುಭಾಷ್ ಕಟ್ಟಿಮನಿ ಸುಭಾಷ್ ಮುಕ ದಿಗಂಬರ ಡಾಂಗೆ, ಚಂದ್ರಕಾಂತ್ ಗಂವ್ಹಾರ ,ಅನಿಲ ಕಾಮಣ್ಣ ವಚ್ಚಾ, ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here