ಬೋಧನೆ ನಿರಾಕರಿಸಿ ಶಿಕ್ಷಕರ ಪ್ರತಿಭಟನೆ

0
76

ಕಲಬುರಗಿ: ಚಿಂಚೋಳಿ ಪ್ರಾಥಮಿಕ ಶಾಲೆಯ ಪದವಿಧರ ಶಿಕ್ಷಕರು 1ನೇ ತರಗತಿಯಿಂದ ೮ನೇ ತರಗತಿಯವಗಿನ ಮಕ್ಕಳಿಗೆ ಬೋದನೆ ಮಾಡುತ್ತಿದ್ದರು ಸರಕಾರ 1 ರಿಂದ 5 ನೇ ತರಗತಿಯ ವರೆಗೆ ಭೊದನೆ ಮಾಡುವ ಶಿಕ್ಷರು ಎಂದು ಪರಿಗಣಿಸಿ ಹಿಂಬಡ್ತಿ ಮಾಡಿರುವುದರಿಂದ ಪ್ರಾಥಮಿಕ ಶಾಲಾ ಪದವಿಧರ ಶಿಕ್ಷಕರು ೬ರಿಂದ ೮ನೇ ತರಗತಿ ವಿದ್ಯಾರ್ಥಿಗಳಿಗೆ ಬೋದನೆ ಮಾಡುವುದಿಲ್ಲ ಎಂದು ಎಚ್ಚರಿಸಲು ರಾಜ್ಯದ್ಯಾಂತ ಪ್ರತಿಭಟನೆ ನಡೆಸುತ್ತಿದ್ದೆವೆ ಎಂದು ಸರಕಾರಿ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಸುರೇಶ ಕೊರವಿ ತಿಳಿಸಿದರು.

ಇಲ್ಲಿಯ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಎದುರುಗಡೆ ಪ್ರಾಥಮಿಕ ಶಾಲಾ ಪಧವಿಧರ ಶಿಕ್ಷಕರ ಸಂಘದಿಂದ ಜರುಗಿದ ಪ್ರತಿಭಟನೆ ನೇತೃತ್ವ ವಹಸಿ ಮಾತನಾಡಿದ ಅವರು, 1ನೇ ತರಗತಿಯಿಂದ ೭ನೇ ತರಗತಿಯ ವರೆಗೆ ಭೋದನೆ ಮಾಡಲು ನೇಮಕಗೊಂಡಿದ್ದರೂ ಸರಕಾರ 2005 ರಲ್ಲಿ 1ರಿಂದ 8ನೇ ತರಗತಿಯ ಮಕ್ಕಳಿಗೆ ಭೋದನೆ ಮಾಡುವಂತೆ ನಿರ್ದೇಶಿಸಿದ ಆದೇಶ ಯಾವುದೇ ನಿರಿಕ್ಷೆ ಇಲ್ಲದೇ ಸುಮಾರು 14 ವರ್ಷ ಸೇವೆ ಸಲ್ಲಿಸಿದ್ದೇವೆ. ಆದರೆ ಸರಕಾರ ಎಕಾಎಕಿ ೧ರಿಂದ ೫ ನೇ ತರಗತಿಗೆ ಮಾತ್ರ ಭೋದನೆ ಮಾಡುವ ಶಿಕ್ಷರು ಎಂದು ಪರಿಗಣಿಸಿ ಹಿಂಬಡ್ತಿ ಮಾಡಿರುವುದು ಪದವಿಧರ ಶಿಕ್ಷಕರಿಗೆ ಅನ್ಯಾಯವಾಗಿದೆ. ಕಾರಣ ಕೂಡಲೆ ಸರಕಾರ ಈ ಆದೇಶವನ್ನು ಹಿಂಪಡೆದು ೧ರಿಂದ ೮ನೇ ತರಗತಿಗಳಿಗೆ ಭೋದನೆ ಮಾಡುವ ಶಿಕ್ಷರು ಎಂದು ಪರಿಗಣಿಸಿ ಮುಂಬಡ್ತಿ ಮಾಡದೇ ಇದ್ದಲ್ಲಿ ರಾಜ್ಯದ್ಯಾಂತ ಬಿಎ, ಬಿಎಸ್ಸಿ, ಬಿಇಡಿ, ಎಂಎ, ಎಸ್ಸಿ ಹಾಗೂ ಪಿಎಚ್‌ಡಿ ಹೊಂದಿರುವ ಸುಮಾರು ೮೨ ಸಾವಿರಕ್ಕೂ ಹೆಚ್ಚು ಪದವಿಧರ ಶಿಕ್ಷರು ಸೇವೆ ಸಲ್ಲಿಸುತ್ತಿದ್ದ ಶಿಕ್ಷಕರು ಜುಲೈ 1 ರಿಂದ 6ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ಭೋದನೆ ಮಾಡುವುದಿಲ್ಲ ಎಂದು ಕಡಕ್ ಸಂದೇಶ ನೀಡಿದರು.

Contact Your\'s Advertisement; 9902492681

ಪ್ರಾಥಮಿಕ ಶಾಲಾ ಪಅದವಿಧರ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಮಖ್ಸೂದಲಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಪಲಾಮೂರ, ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶ್ರೀನಿವಾಸ ಪಾಟೀಲ, ಶ್ರೀಶೈಲ್ ನಾಗಾವಿ, ಬಸವರಾಜ ಐನೊಳ್ಳಿ, ಪುಂಡಲಿಕ್ ಸನಾದಿ, ಈರಣ್ಣ ಸುಗಂದಿ, ಉತ್ತಮ ಗೌಡಪಗೌಡಿ, ಶಿವಪ್ರಸಾದ, ಶಿವಶರಣಪ್ಪ ಮೆಳಕುಂದಿ, ನಾಗೇಂದ್ರ ಯರನಾಳ, ಸಂಗ್ರಾಮ ಪಾಟೀಲ, ಮಲ್ಲಿಕಾರ್ಜುನ ಮುರುಲಿ, ವೀರಶೇಟ್ಟಿ ಚಂದ್ರಂಪಳ್ಳಿ, ನಿರಂಜಪ್ಪ ಪಟ್ಟಪಳ್ಳಿ, ಕೈಲಾಸಜ್ಯೋತಿ, ರಾಮಾನುಜಯ ಕುಂಚವರಾಮ, ಶಿವರಾಯ, ಬಸವರಾಜ ಸೇರಿದಂತೆ ಅನೇಕ ಪದವಿಧರ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು, ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here