ಪ್ರವಾಹಕ್ಕೆ ಸಿಲುಕಿದ 7 ಜನರಿಗೆ ಈಜಿ ದಡಮುಟ್ಟಿಸಿದ ಯುವಕ 

0
217

ಕಲಬುರಗಿ: ಕಳೆದೊಂದು ವಾರದಿಂದ ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಈ ನಡುವೆ ಗುರುವಾರ ಬೆಳಗಿನ ಜಾವ ಮತ್ತಷ್ಟು ಸುರಿದ ರಬಸದ ಮಳೆಯಿಂದ ಒಟ್ಟು 35 ಕೆರೆ ಸೇರಿ ಅಮರ್ಜಾ ಅಣೆಕಟ್ಟು ಪೂರ್ಣ ಭರ್ತಿಯಾಗಿ ವೇಷ್ಟವೇರನಿಂದ ನೀರು ಹೊರಕ್ಕೆ ಬಿಟ್ಟರುವ ಕುರಿತು ವರದಿಯಾಗಿದೆ.

ಒಂದಡೆ ಮಳೆಯಿಂದ ಅಂತರ್ಜಲ ಭರ್ತಿಯಾದ ಸಂತಸದ ನಡುವೆ ಬೆಳೆಗಳು ಕೈಕೊಡುತ್ತಿರುವ ಆತಂಕ ಮತ್ತು ರಾಶಿಗೆ ಬಂದ ಹೆಸರು, ಉದ್ದು ಹಾಗೂ ಸೋಯಾಭಿನ್ ಇನ್ನಿತರ ಬೆಳೆ ನಷ್ಟವಾಗುತ್ತಿರುವುದು ರೈತ ಸಮುದಾಯದ ಗಾಯದ ಮೇಲೆ ಬರೆ ಎಳೆದುಕೊಂಡಿದೆ. ಮಳೆಯಿಂದಾಗಿ ವಾರದಿಂದ ಕೃಷಿ ಚಟುವಟಕೆ ಸೇರಿ ಕಟ್ಟಡ ನಿರ್ಮಾಣದಂತ ಕೆಲಸಗಳು ಸ್ಥಗಿತಗೊಂಡು ತೊಂದರೆಗೀಡಾಗಿದೆ.

Contact Your\'s Advertisement; 9902492681

ಅಮರ್ಜಾ ಅಣೆಕಟ್ಟೆಯಿಂದ ಗೇಟ್ ಮೂಲಕ ನೀರು ಹೊರಕ್ಕೆ ಹರಿಬಿಡಲಾಗಿದೆ ಎಂದು ಇಂಜಿನಿಯರ್ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.

ಮಳೆಯ ನೀರಿನ ರಬಸಕ್ಕೆ ಸಾಲೇಗಾಂವ, ಆಳಂದ ಧಬೆ, ಧಬೆ ಡಿಗ್ರಿ ಕಾಲೇಜು ಸೇತುವೆ. ಯಳಸಂಗಿ, ನಿಂಬಾಳ, ಕೆರೂರ, ಮಾದನಹಿಪ್ಪರಗಾ, ಝಳಕಿ ಕೆ. ಝಳಕಿ ಬಿ ಮದಗುಣಕಿ ಅಲ್ಲಿಲ್ಲಿನ ಪ್ರಮುಖ ಹಳ್ಳ ನದಿಗಳು ಉಕ್ಕಿ ಹರಿದು ರಸ್ತೆ ಸೇತುವೆಗಳ ಮೇಲೆ ನೀರು ಹರಿದ ಸಂಚಾರಕ್ಕೆ ಅಡ್ಡಿಯಾಗಿದ್ದು, ಇದರಿಂದಾಗಿ ದ್ವಿಚಕ್ರವಾಹನ ಸೇರಿ ಇನ್ನಿತರ ಸಾರಿಗೆ ಬಸ್, ಖಾಸಗಿ ವಾಹನ ಜನ ಸಂಚಾರಕ್ಕೆ ಕೆಲಕಾಲ ಅಡಿಯಾಗಿದ್ದು, ನೀರಿನ ಪ್ರವಾಹ ಇಳಿಕೆಯಾದ ಮೇಲೆ ಮತ್ತೆ ಸಂಚಾರ ಶುರುವಾಗಿದೆ. ಮುಂಜಾಗೃತ ಕ್ರಮವಾಗಿ ಝಳಕಿ, ಆಳಂದ ಧಬೆ, ಧಬೆ ಇನಿತರೆ ಕಡೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

ಸಾಲೇಗಾಂವ ಮೇಲ್ಭಾಗದ ಕೆರೆ ಪೂರ್ಣ ಭರ್ತಿಯಾಗಿದ್ದು ವೇಷ್ಟವೇರನಿಂದ ನೀರು ಹರಿಯತೊಡಗಿದೆ. ಕೆರೆ ನೀರು ಹಾಗೂ ಅಡ್ಡಾಳ ಹಳ್ಳದ ನೀರು ಸೇರಿ ಗ್ರಾಮದ ಮಧ್ಯಭಾಗದಿಂದ ಹಾದುಹೋಗಿರುವ ದೊಡ್ಡ ಹಳ್ಳಕ್ಕೆ ನೀರು ಒಟ್ಟಿಗೆ ಹರಿದ ಪರಿಣಾಮ ಏಕಕಾಲಕ್ಕೆ ನೀರಿನ ಪ್ರವಾಹ ಉಂಟಾಗಿದ್ದು, ಈ ವೇಳೆ ಗ್ರಾಮದಿಂದ ಹೊರಟ್ಟಿದ್ದ ಟ್ರ್ಯಾಕ್ಟರ ನೀರಿನ ಪ್ರವಾಹದಲ್ಲಿ ಸುಲುಕಿ ಪಲ್ಟಿಹೊಡೆದು ಒಳಗಿದ್ದ ಏಳು ಜನರು ಮುಳುಗಿ ಸಂಕಷ್ಟಕ್ಕೆ ಸುಲುಕಿದ ವೇಳೆ ಖಂಡರಾವ ರಾಜೇಂದ್ರ ವಡಗಾಂವ (22), ಎಂಬಾತ ಯುವಕ ತನ್ನ ಪ್ರಾಣದ ಹಂಗು ತೋರೆದು ಪ್ರವಾಹಕ್ಕೆ ಜೀಗಿದು ಎಲ್ಲರನ್ನು ದಡಮುಟ್ಟಿಸಿ ಮಾನವೀತೆ ಮೆರೆದಿದ್ದು, ಗ್ರಾಮಸ್ಥರ ಮೆಚ್ಚಿಗೆಗೆ ಪಾತ್ರನಾಗಿದ್ದಾನೆ.

ಪ್ರವಾಹಕ್ಕೆ ಸಿಲುಕಿದ ಬಸವರಾಜ ಮಲ್ಲಪ್ಪ (38), ಶರಣಪ್ಪ ಹರಳ್ಳಯ್ಯ (36), ಕೋಟೇಶ ಕುಂಬಾರ (36), ಸಿದ್ಧಪ್ಪ ಲಕುಳೆ (29), ಗುಂಡಪ್ಪ ಪೂಜಾರಿ (40), ಸೇರಿ ಎಳು ಜನರು ಪ್ರಾಣಾಪಾಯದಿಂದ ಯುವಕ ರಕ್ಷಿಸಿದ್ದಾನೆ.

ಇವರು ನೀರಿನಲ್ಲಿ ಪಲ್ಪಿಹೊಡದ ಟ್ರ್ಯಾಕ್ಟರ್‍ನ ಅವಶೇಷಗಳ ಹಿಡಿದು ಸುಮಾರು ಒಂದುಗಂಟೆಗಳ ಕಾಲ ಪ್ರವಾಹದ ಮಧ್ಯದಲ್ಲಿ ಸಿಲುಕಿ ಪರದಾಡಿದ್ದಾರೆ. ಆದರೆ ಟ್ಯ್ರಾಕ್ಟರ್ ಹಿಂಬಾಲಿಸುತ್ತಿದ್ದ ನಾಯಿವೊಂದು ಕೊಚ್ಚಿಕೊಂಡು ಹೋಗಿದೆ ಎಂದು ಗ್ರಾಮದ ಪ್ರತ್ಯೇಕ್ಷದರ್ಶಿಗಳು ಹೇಳಿಕೊಂಡಿದ್ದಾರೆ. ದಿನವೀಡಿ ನೀರಿನ ಹರಿವು ಇದ್ದ ಕಾರಣ ಸಂಚಾರಕ್ಕಾಗಿ ಗ್ರಾಮದ ಜನ ಜಾನುವಾರು ಸೇರಿ ವಾಹನಗಳ ಸಂಚಾರ ನಡೆಯದೆ ಪರದಾಡಿದ್ದಾರೆ. ಬಹುದಿನಗಳ ಬೇಡಿಕೆಯಾಗಿದ್ದ ಸೇತುವೆ ಇಲ್ಲದ ನಿತ್ಯ ಮಳೆಗಾಲದಲ್ಲಿ ಸಂಚಾರಕ್ಕೆ ಗ್ರಾಮಸ್ಥರ ಪರದಾಟ ಮುಂದುವರೆದಿದೆ.

ಅತಿಯಾದ ಮಳೆಯಿಂದ ನಿಂಬರಗಾ ವಲಯದ 4 ಮನೆಗಳಿಗೆ ಹಾನಿಯಾಗಿದ್ದು ಬಿಟ್ಟರೆ ಯಾವುದೇ ಜೀವಹಾನಿಯಾಗಿಲ್ಲ. ಪಟ್ಟಣ ಸೇರಿ ಗ್ರಾಮೀಣ ರಸ್ತೆ ಸಂಪರ್ಕಕ್ಕೆ ನೀರಿನ ಪ್ರವಾಹ ಅಡ್ಡಿಯಾದ ಹಿನ್ನೆಲೆಯಲ್ಲಿ ಸುರಕ್ಷಿತ ಕ್ರಮವಾಗಿ ಪೊಲೀಸ್‍ರನ್ನು ನಿಯೋಜಿಸಲಾಗಿದೆ.
ದಯಾನಂದ ಪಾಟೀಲ ತಹಸೀಲ್ದಾರರು ಆಳಂದ.

ಸಣ್ಣ ನೀರಾವರಿ ಇಲಾಖಾಯ 35 ಕೆರೆಗಳು ಶೇ 90ರಷ್ಟು ಭರ್ತಿಯಾಗಿ ವೇಷ್ಟವೇರನಿಂದ ನೀರು ಹರಿಯತೊಡಗಿವೆ. ಸಾಲೇಗಾಂವ, ವೈಜಾಪೂರ, ಝಳಕಿ ಬಿ. ಝಳಕಿ ಕೆ. ಮಾದನಹಿಪ್ಪರಗಾ, ನಿಂಬಾಳ, ಶುಕ್ರವಾಡಿ, ಹೊನ್ನಳ್ಳಿ, ಆಳಂದ, ತಡಕಲ್ ಮೂರು ಕರೆ ಸೇರಿ ಎಲ್ಲವೂ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಹರಿಯುತ್ತಿವೆ. ಕೆರೆಗಳು ಸುರಕ್ಷಿತವಾಗಿದ್ದು, ಯಾವುದೇ ಅಪಾಯದ ಮನ್ಸೂಚನೆ ಇಲ್ಲ. ಇಷ್ಟಾಗಿಯೂ ನೀರಿನ ಪ್ರವಾಹ ಹೆಚ್ಚಾಗಿ ಅಪಾಯವಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜನ ಜಾನುವಾರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಶಾಂತಪ್ಪ ಜಾಧವ ಸಣ್ಣ ನೀರಾವರಿ ಇಲಾಖೆಯ ಎಇಇ.

ಮಧ್ಯಮ ನೀರಾವರಿಗಳಲ್ಲಿ ಒಂದಾಗಿರುವ ಅಮರ್ಜಾ ಅಣೆಕಟ್ಟೆಗೆ ಒಳ ಹರಿವು 1600 ಕ್ಯೂಸೆಕ್ಸ್ ಹೊರ ಹರಿವು 1600 ಕ್ಯೂಸೆಕ್ಸ್ ಗೇಟ ಮೂಲಕ ಬಿಡಲಾಗಿದೆ. ಯಾವು ಕ್ಷಣದಲ್ಲಿ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆ ಇದ್ದು, ಕೆಳಭಾಗದ ನದಿಯ ಸಾರ್ವಜನಿಕರು ಮುಂಜಾಗೃತ ಕ್ರಮವಾಗಿ ಎಚ್ಚರ ವಹಿಸಬೇಕು.
ಮಲ್ಲಿಕಾರ್ಜುನ ಮಧ್ಯಮ ನೀರಾವರಿ ಇಲಾಖೆಯ ಅಧಿಕಾರಿಗಳು.

ಪುನರ ವಸತಿ ಕಲ್ಪಿಸಿ: ನರೋಣಾ ಗ್ರಾಮದಲ್ಲಿ ಪ್ರತಿಸಲ ಮಳೆ ಬಂದರೆ ಸುಮಾರು 30ಇಂದ 40 ಮನೆಗಳಿಗೆ ನೀರು ನುಗ್ಗಿ ಹಾನಿಮಾಡುತ್ತಿದೆ. ಗುರುವಾರದ ಮಳೆಯ ನೀರಿಗೂ ಜನ ಸಂಕಷ್ಟ ಪಡುತ್ತಿದ್ದಾರೆ. ಸಂಬಂಧಿತ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಕ್ರಮ ಕೈಗೊಳ್ಳದೆ ಇರುವುದು ನಾಚಿಗೇಡಿನ ಸಂಗತಿಯಾಗಿದೆ. ಕೂಡಲೇ ಈ ಸಂತ್ರಸ್ತರಿಗೆ ಪುನರವಸತಿ ಕಲ್ಪಿಸಬೇಕು.

ಸುಧಾಮ ಧನ್ನಿ, ಪಾಂಡುರಂಗ ಮಾವೀನಕರ್ ರೈತ ಹೋರಾಟಗಾರರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here