ಬಾಬಾ ಸಾಹೇಬರು ದೇಶದ ಬಹುದೊಡ್ಡ ಮಹಾನಾಯಕ: ಮಲ್ಲನಗೌಡ ಹೊಸಮನಿ

0
61

ಸುರಪುರ: ತಾಲ್ಲೂಕಿನ ಮುನೀರ ಬೊಮ್ಮನಹಳ್ಳಿ ಗ್ರಾಮದಲ್ಲಿ ಡಾ.ಬಿ ಆರ್. ಅಂಬೇಡ್ಕರ್ ಅವರ ಜೀವನ ಆಧಾರಿತವಾದ ಮಹಾನಾಯಕ ಧಾರವಾಹಿ ಬ್ಯಾನರ್ ಉದ್ಘಾಟನಾ ಕಾರ್ಯಕ್ರಮವನ್ನು ಗ್ರಾಮದ ಮುಖಂಡರಾದ ಮಲ್ಲನಗೌಡ ಹೊಸಮನಿ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಡಾ. ಬಿ. ಆರ್. ಅಂಬೇಡ್ಕರ್ ಒಂದು ಜಾತಿˌ ಸಮುದಾಯಕ್ಕೆ ಮಾತ್ರ ಸಿಮೀತವಾಗಿಲ್ಲ. ಬಾಬಾ ಸಾಹೇಬರು ದೇಶದ ಆಸ್ತಿ. ಪ್ರತಿಯೊಬ್ಬ ಭಾರತೀಯನು ಬಾಬಾ ಸಾಹೇಬರ ಮುಂದಾಲೋಚನೆಯನ್ನು ಅರಿತುಕೊಳ್ಳಬೇಕು. ದೇಶದ ಮಹಿಳೆಯರುˌ ಶೋಷಿತರ ಸಲುವಾಗಿ ತಮ್ಮ ಜೀವನವನ್ನೇ ಸವೆಸಿದ್ದಾರೆ.

Contact Your\'s Advertisement; 9902492681

ಇಡೀ ವಿಶ್ವವನ್ನು ಕೊಂಡಾಡುವಂತ ಸಂವಿಧಾನ ರಚಿಸುವುದರ ಮೂಲಕ ಬಾಬಾ ಸಾಹೇಬರು ದೇಶಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಇಂತಹ ಮಹಾನ್ ನಾಯಕ ಪಟ್ಟಿರುವ ಶ್ರಮವನ್ನು ಮತ್ತು ಅವಮಾನಗಳು ನಮಗೆ ಪಾಠವಾಗಬೇಕು. ಅವರ ಆದರ್ಶಗಳನ್ನು ಇಂದಿನ ಪೀಳಿಗೆ ಆಳವಡಿಸಿಕೊಳ್ಳಲಿ ಎಂಬ ಉದ್ದೇಶದಿಂದ ಇದನ್ನು ಜೀ ಕನ್ನಡ ವಾಹಿನಿ ಇಡೀ ವಿಶ್ವಕ್ಕೆ ತಿಳಿಸಿದೆ. ಜೀ ಕನ್ನಡ ಮುಖ್ಯಸ್ಥರು ರಾಘವೇಂದ್ರ ಹುಣಸೂರ ಹಾಗೂ ಮಹಾನಾಯಕ ಧಾರವಾಹಿ ಸೃಷ್ಟಿಕರ್ತೆ ಪ್ರಣೀತಿ ಸಿಂಧೆ ಅವರು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಸಿದ್ದು ದೊಡಮನಿ, ರಾಜು ವಡಗೇರಾ, ಮಡಿವಾಳ ದೊಡಮನಿ, ಕಾಶಿನಾಥ ನೀರಲಗಿ, ಅಮರಪ್ಪ ಅಚಕೇರಿ,ಅಮರೇಶ ನಾಟೀಕರ, ಮಾನಪ್ಪ ಬಳಗಾನೂರ, ಅಶೋಕ ಕಿರಣಗಿ, ಶ್ರೀಶೈಲ ದೊಡಮನಿ, ಲಕ್ಷ್ಮಣ್ಣ ದೊಡಮನಿ, ಅಮರೇಶ ಬೆಸೆಟ್ಯಾಳ, ಧರ್ಮರಾಜ ಅಚಕೇರಿ, ಅಮರೇಶ ಗೋಗಡಿಹಾಳ, ಅಮರೇಶ ಮುದ್ನೂರ, ಸಿದ್ದಪ್ಪ ನಾಟೀಕರ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here