ರೇಲ್ವೆ ಖಾಸಗೀಕರಣ ವಿರೋಧಿಸಿ ಎಸಯುಸಿಐ(ಸಿ) ಪ್ರತಿಭಟನೆ

0
99

ಶಹಾಬಾದ:ಭಾರತಿಯ ರೇಲ್ವೆ ಜನಗಳ ಬೆವರಿಂದ ಕಟ್ಟಿದ್ದು ಜನಗಳ ಆಸ್ತಿಯಾಗಿದ್ದು, ಇದನ್ನು ಸರಕಾರ ಖಾಸಗೀಕರಣ ಮಾಡಬಾರದೆಂದು ಎಸಯುಸಿಐ(ಸಿ) ಪಕ್ಷದ ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ.ಎಸ್.ಇಬ್ರಾಹಿಂಪುರ ಹೇಳಿದರು.

ಅವರು ಸೋಮವಾರ ನಗರದ ರೈಲ್ವೆ ನಿಲ್ದಾಣದ ರೇಲ್ವೆ ಖಾಸಗೀಕರಣ ವಿರೋಧಿಸಿ ಎಸಯುಸಿಐ(ಸಿ) ಪಕ್ಷದ ವತಿಯಿಂದ ಆಯೋಜಿಸಲಾದ ಪ್ರತಿಭಟನೆಯಲ್ಲಿ ಮಾತನಾಡಿದರು. ರೇಲ್ವೆ ಸರಕಾರದ ದೊಡ್ಡ ಸಂಸ್ಥೆಯಾಗಿದ್ದು, ನೂರಾರು ಕೋಟಿ ರೂಪಾಯಿ ಆದಾಯ ಸರಕಾರಕ್ಕೆ ಬರುತ್ತಿದೆ.  ಆದರೆ ಸರಕಾರವು ಬಂಡವಾಳಶಾಹಿಯ ಹಿತಾಶಕ್ತಿಯ ಅನುಗುಣವಾಗಿ ಖಾಸಗೀಕರಣ ಮಾಡುತ್ತಿದೆ. ಕೂಡಲೇ ಸರಕಾರ ಈ ನೀತಿಯನ್ನು ಕೈ ಬಿಟ್ಟು ಜನರ ಜ್ವಾಲಂತ ಸಮಸ್ಯೆಗಳಾದ ನೀರುದ್ಯೋಗ, ಬಡತನದಂತಹ ಸಮಸ್ಯೆಗಳ ಕಡೆಗೆ ಗಮನ ಹರಿಸಿ ಪರಿಹರಿಸಬೇಕೆಂದರು.

Contact Your\'s Advertisement; 9902492681

ಎಸಯುಸಿಐ(ಸಿ) ಪಕ್ಷದ ಶಹಾಬಾದ ಕಾರ್ಯದರ್ಶಿ ಗಣಪತರಾವ.ಕೆ.ಮಾನೆ ಮಾತನಾಡಿ, 1992 ರಲ್ಲಿ ಗ್ಯಾಟ್ ಒಪ್ಪಂದ ಮಾಡಿಕೊಂಡು ಅಧಿಕಾರಕ್ಕೆ ಬಂದ ಎಲ್ಲಾ ರಾಜಕೀಯ ಪಕ್ಷಗಳು ಖಾಸಗೀಕರಣ,ಉದಾರೀಕರಣ ನೀತಿಗಳನ್ನು ಅನುಸರಿಸುತ್ತ ಎಲ್ಲಾ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿ ಮಾಲಿಕತ್ವಕ್ಕೆ ವಹಿಸುತ್ತಿದ್ದಾರೆ. ಕೋವಿಡ್ 19 ಸಂಕಷ್ಟದ ಪರಿಸ್ಥಿತಿಯಲ್ಲಿ ಬಡ ಜನರ ಬಗ್ಗೆ ಗಮನ ಕೊಡುವುದರ ಬದಲು ರೇಲ್ವೆ ಖಾಸಗೀಕರಣ, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ, ರೈತ ವಿರೋಧಿ ಕೃಷಿ ಉತ್ಪನ್ನ ಮಸೂದೆಗಳಂತ ನೀತಿಗಳು ಜಾರಿ ಮಾಡುತ್ತಿರುವುದು ದುರಂತ. ಇದರ ವಿರುದ್ದ ಸಂಘಟಿತ ಹೋರಾಟ ಕಟ್ಟಬೇಕೆಂದು ಹೇಳಿದರು.

ಎಸಯುಸಿಐ(ಸಿ) ಪಕ್ಷದ ಸದಸ್ಯ ಜಗನ್ನಾಥ.ಎಸ್.ಹೆಚ್ ಅವರು ರೇಲ್ವೆ ಬಹುದೊಡ್ಡ ಸಂಸ್ಥೆಯಾಗಿ ಆಸ್ಪತ್ರೆ, ಶಾಲೆ ಒಳಗೊಂಡಿದೆ. ಇಂತಹ ಸಂಸ್ಥೆ ಖಾಸಗೀಕರಣ ಮಾಡುವುದನ್ನು ಸರಕಾರ ನಿಲ್ಲಿಸಬೇಕೆಂದರು.

ನಂತರ ರೈಲ್ವೆ ಸ್ಟೇಷನ್ ಮಾಸ್ಟರ್ ಮುಖಾಂತರ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪಕ್ಷದ ಸದಸ್ಯೆ ಗುಂಡಮ್ಮ ಮಡಿವಾಳ, ರಾಜೆಂದ್ರ ಅತೂನೂರ, ಸಿದ್ದು ಚೌಧರಿ, ತಿಮ್ಮಯ್ಯಾ.ಬಿ.ಮಾನೆ, ನೀಲಕಂಠ.ಎಮ್.ಹುಲಿ,ತುಳಜರಾಮ.ಎನ್.ಕೆ, ಮಾಹಾದೇವಿ ಮಾನೆ, ರಾಧಿಕಾ ಚೌಧರಿ, ಶಿಲ್ಪಾ ಹುಲಿ, ರಮೇಶ ದೇವಕರ್,ಪ್ರವೀಣ್ ಬಣಿಮಿಕರ್,ರಘು.ಜಿ.ಮಾನೆ, ರಘು ಪವರ್, ವಿಶ್ವನಾಥ ಸಿಂಘೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here