ರೈತ ,ದಲಿತ ,ಮತ್ತು ಕಾರ್ಮಿಕ ವಿರೋಧಿ ನೀತಿ ಜಾರಿಗೊಳಿಸುವುದನ್ನು ಖಂಡಿಸಿ ಪ್ರತಿಭಟನೆ

0
85

ರಾಯಚೂರು: ಕರೋನಾ ವೈರಸ್ ನಿಂದ ಇಡೀ ಸಮಾಜ ಮತ್ತು ರೈತರು ಆತಂಕದಲ್ಲಿ ಇರುವಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ , ದಲಿತ , ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿದರು.

ನಗರದ ಟಿಪ್ಪುಸುಲ್ತಾನ ಉದ್ಯಾ‌ನದಲ್ಲಿ ಪ್ರತಿಭಟನೆ ಧರಣಿ ನಡೆಸಿ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಪರಿಹಾರ ಕೈಗೊಳ್ಳಬೇಕು, ಇದುವರೆಗೆ ಪ್ರಧಾನಮಂತ್ರಿ ಫಸಲು ಭೀಮಾ ಯೋಜನೆಯಲ್ಲಿ ಪ್ರೀಮಿ ಯಮ್ ಹಣ ತುಂಬಿದ ಎಲ್ಲಾ ರೈತರಿಗೆ ಪರಿಹಾರದ ಹಣ ರೈತರ ಖಾತೆಗೆ ಜಮಾ ಮಾಡಬೇಕು. ಜಿಲ್ಲೆಯಾದ್ಯಂತ ವಿದ್ಯುತ್ ವಿತರಣೆ ಹದಗೆಟ್ಟಿದ್ದು ಕೂಡಲೇ ಸರ್ಕಾರ ನಿಗದಿ ಪಡಿಸಿದ ಕೃಷಿ ಪಂಪಸೆಟ್ಟಗಳಿಗೆ 7 ತಾಸು ಬದಲಿಗೆ 10 ತಾಸು ವಿದ್ಯುತ್ ಪೂರೈಸಬೇಕು ಎಂದರು.

Contact Your\'s Advertisement; 9902492681

ಜಿಲ್ಲೆಯಲ್ಲಿ ಮುಂಗಾರು ಬೆಳೆಗಳಾದ ಸಜ್ಜೆ ಹಾಗೂ ಇನ್ನಿತರ ಬೆಳೆಗಳು ಕಟಾವಿಗೆ ಬಂದಿದ್ದು ಮುಕ್ತ ಮಾರುಕಟ್ಟೆಯಲ್ಲಿ ತೀರ್ವ ಧರ ಕುಸಿದಿದೆ, ಕೂಡಲೇ ಬೆಂಬಲ ಬೆಲೆಗೆ ಖರೀದಿಸಲು ಖರೀದಿ ಕೇಂದ್ರಗಳನ್ನು ತೆರೆಯಬೇಕು. ಇತ್ತೀಚೆಗೆ ಬಿದ್ದ ಮುಂಗಾರು ಮಳೆಯಿಂದ ಜಿಲ್ಲೆಯ ಬಹುತೇಕ ರಸ್ತೆಗಳು ಹಾಳಾಗಿದ್ದು ಕೂಡಲೇ ದುರಸ್ತಿ ಗೊಳಿಬೇಕು. ಸಿರವಾರ ತಾಲೂಕಿನ ವಡವಟ್ಟಿ ಕ್ರಾಸ್ ನಿಂದ ಕಸಂದೊಡ್ಡಿ ಮತ್ತು ಗೊಲ್ಲದಿನ್ನಿ ಕ್ರಾಸನಿಂದ ಹಿರೇಬಾದರದಿನ್ನಿವರೆಗೆ ಹಾಗೂ ಮಾನ್ವಿ ತಾಲೂಕಿನ ಜಾನೇಕಲ್ ನಿಂದ ಆರ್.ಜಿ. ರೋಡವರಗೆ ರಸ್ತೆ ದೂರ ಹದಗೆಟ್ಟಿದ್ದು ಕೂಡಲೇ ವ್ಯವಸ್ಥೆ ಕೈಗೊಳ್ಳಬೇಕು ಎಂದು ತಿಳಿಸಿದರು.

ನಾರಾಯಣಪುರ ಬಲದಂಡೆ ನಾಲೆಯ 9 ಎ ಕಾಲುವೆ ನಿರ್ಮಾಣಕ್ಕಾಗಿ ಕುರುಕುಂದಿ ಮತ್ತು ಇನ್ನಿತರ ಗ್ರಾಮಗಳ ಸ್ವಾಧೀನಪಡಿಸಿಕೊಂಡ ಭೂಮಿಗಳಿಗೆ ಪರಿಹಾರ ಹಣ ಕೂಡಲೇ ನೀಡಬೇಕು. ಹಟ್ಟಿ ಗ್ರಾಮಕ್ಕೆ ರೈತ ಸಂಪರ್ಕ ಕೇಂದ್ರ ಸ್ಥಾಪಿಸಬೇಕು. ಹಿಂಗಾರು ಹಂಗಾಮಿಗೆ ಬೇಕಾದ ಎಲ್ಲಾ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡಬೇಕು, ಮಾನ್ವಿ ತಾಲೂಕಿನಲ್ಲಿ 32 ಸಾವಿರ ಹೆಕ್ಟೇರ್ ಹತ್ತಿ ಪ್ರದೇಶವಿದ್ದು ಸಿ.ಸಿ.ಟಿ. ಹತ್ತಿ ಖರೀದಿ ಕೇಂದ್ರವನ್ನು ಸ್ಥಾಪಿಸಬೇಕು. ನೆರೆ ಹಾವಳಿಯಿಂದ ಹೋದ ವರ್ಷ ಮತ್ತು ಈ ವರ್ಷ ಹಾನಿಗೊಳ ಗಾದ ರೈತರಿಗೆ ಪರಿಹಾರ ಹಣ ನೀಡಬೇಕು. ಮಾನ್ವಿ ಸಿರವಾರ ತಾಲೂಕಗಳ ತುಂಗಭದ್ರಾ ಎಡದಂಡೆ ನಾಲೆಯ ಕೊನೆಭಾಗದವರೆಗೆ ಸಮರ್ಪಕವಾಗಿ ನೀರನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸೂಗುರಯ್ಯ ಆರ್.ಎಸ್.ಮಠ,ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್, ಯಂಕಪ್ಪ ಕಾರಬಾರಿ, ದೊಡ್ಡಬಸನಗೌಡ ಬಲ್ಲಟಗಿ, ಬಸವರಾಜ ಮಲ್ಲಿನಮಡು, ಲಿಂಗಾರೆಡ್ಡಿ ಪಾಟೀಲ್, ನರಸಪ್ಪ ಯಾದವ್, ವೀರೇಶ ಕಂಬಳಿ, ಪ್ರಭಾಕರ, ಬೆಂದಾವಲಿ ಸಾಬ್,ಕುಪ್ಪಣ್ಣ ಗೋನಟ್ಟಿ, ಮಲ್ಲನಗೌಡ ದಿದ್ದಿ,ಹುಸೇನ್ ಸಾಬ್ ರಾಮನಗೌಡ ಗಣೇಕಲ್, ಜಯಕುಮಾರ, ಹುಲಿಗಯ್ಯ, ದೊಡ್ಡಬಸವ ನಾಯಕ, ಭೀಮೇಶ್ವರ ರಾವ್, ವೆಂಕಟರೆಡ್ಡಿ ರಾಜಲಬಂಡಾ, ಶಂಕ್ರಪ್ಪ ಗೌಡ ದೇವತಗಲ್, ಮಲ್ಲನಗೌಡ ದೇವತಗಲ್, ಬೂದಯ್ಯಸ್ವಾಮಿ ಹುಚ್ಚರೆಡ್ಡಿ ಸೇರಿದಂತೆ ಅನೇಕರು ಇದ್ದರು.

ವರದಿ: ಮುತ್ತಣ್ಣ ರಾಯಚೂರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here