ಕಲಬುರಗಿ: ನಿನ್ನೆ ಮಧ್ಯರಾತ್ರಿಯಲ್ಲಿ ಜೇವರ್ಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಾಂಜಾ ಹಾಗೂ ನಾಡ ಪಿಸ್ತೂಲ್ ಗನ್ನು ಸಾಗಿಸುತ್ತಿದ್ದು ವಾಹನ ಸಮೇತವಾಗಿ ವಶಕ್ಕೆ ಪಡೆದಿದ್ದಾರೆ.
ಆಂದೋಲ ಗ್ರಾಮದ ಲಾಲ್ ಅಹಮದ್ ಚಕರಿ ಹಾಗೂ ಬೆಂಗಳೂರು ದೊಡ್ಡಬಳ್ಳಾಪುರ ತಿರುಮಲ ಗೊಂಡ ಗ್ರಾಮದ ಚಂದ್ರಶೇಖರ್ ಈರಪ್ಪ ಎನ್ನುವ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 10 ಸಾವಿರ ರೂಪಾಯಿ ಮೌಲ್ಯದ ಗಾಂಜಾ ಹಾಗೂ 27 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. 2 ಲಕ್ಷ ಮೌಲ್ಯದ ಶಿಫ್ಟ್ ಕಾರ್ ಹಾಗೂ ತೂಕದ ಯಂತ್ರ ಸೇರಿ ಆರೋಪಿಗಳು ಬಳಸುತ್ತಿದ್ದ ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾ ಸೀಮಿ ಮರಿಯಮ್ಮ ಜಾರ್ಜ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಗ್ರಾಮೀಣ ಡಿವೈಎಸ್ಪಿ ತಾಯಪ್ಪ ದೊಡ್ಡಮನಿ, ಹಾಗೂ ಸಿಪಿಐ ರಮೇಶ್ ರೊಟ್ಟಿ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ, ಜೇವರ್ಗಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಹೂಗಾರ್ ಹಾಗೂ ಅಪರಾಧ ವಿಭಾಗದ ಸಂಗಮೇಶ ಅಂಗಡಿ ಸೇರಿದಂತೆ ಪೊಲೀಸ್ ಪೇದೆಗಳಾದ ಪರಮೇಶ್ವರ್, ಕೆಂಚ ಬಸವ ಹಾಗೂ ಶರಣಪ್ಪ ಇವರ ತಂಡ ದಾಳಿ ನಡೆಸಿ ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ವಸ್ತುಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿಲಾಗಿದೆ.
ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.