ಕಲಬುರಗಿಯಲ್ಲಿ ಕೃಷಿ ಮಸೂದೆ ವಿರುದ್ಧ ಜನಾಕ್ರೋಶ: ಡಿಸಿ ಕಚೇರಿ ಮುಂದೆ ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ

0
143

ಕಲಬುರಗಿ: ಕೃಷಿ ಮಸೂದೆ ವಿರೋಧಿಸಿ ಇಂದು ಕರ್ನಾಟಕದ್ಯಂತ ಹಲವು ರೈತ ಸಂಘಟನೆಗಳು ಬಂದ್ ಕರೆ ನೀಡಿದ ಹಿನ್ನೆಯಲ್ಲಿ ಕಲಬುರಗಿ ಜಿಲ್ಲೆಯ ರೈತ ಪರ, ಕನ್ನಡ ಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಟೈಯರ್ ಗೆ ಬೆಂಕಿ ಹಚ್ಚಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ. ಈ ಸಂದರ್ಭದಲ್ಲಿ ಬೆಂಕಿ ಹಚ್ಚಿದ ಟೈಯರ್ ಗೆ ನೀರು ಹಾಕುವ ಮೂಲಕ ನಂದಿಸುವ ಕೆಲಸ ಸ್ಥಳೀಯ ಪೊಲೀಸ್ ಸಿಬ್ಬಂದಿ ಒರ್ವರು ಮಾಡುವ ಮೂಲಕ ಪ್ರತಿಭಟನಾ ಕಾರರ ಮನವೊಲಿಸಿ ಶಾಂತಿಯುತ ಪ್ರತಿಭಟನೆಗೆ ಅನುಮಾಡಿಕೊಟ್ಟಿದರು.

Contact Your\'s Advertisement; 9902492681

ಇನ್ನೊಂದೆಡೆ ಕನ್ನಡ ಪರ ಸಂಘಟನೆಗಳು ಟ್ರ್ಯಾಕ್ಟರ್ ನಲ್ಲಿ ಏರಿ ನೂತನ ಸುಗ್ರೀವಾಜ್ಞೆ ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.

ಇದೇ ರೀತಿ ಇಂದು ಬೆಳಿಗ್ಗೆಯಿಂದ ಸಿಪಿಐಎಂ ಮುಖಂಡರು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದು, ಸಾರಿಗೆ ಬಸ್ ಸಂಚಾರ ಪೂರ್ಣವಾಗಿ ಸ್ತಬ್ಧವಾಗಿತ್ತು. ಅಲ್ಲದೇ ಜಿಲ್ಲಾ ಪೊಲೀಸ್ ಇಲಾಖೆ ಕೇಂದ್ರ ಬಸ್ ನಿಲ್ದಾಣ ಸೂಕ್ತ ಬಂದೋಬಸ್ತ್ ವಹಿಸಿದ್ದು, ಬ್ಯಾರಿಕೇಡ್ ಹಾಕಿ ಮುನ್ನೆಚರಿಕೆ ಕ್ರಮ ಕೈಗೊಳಲಾಗಿದೆ.

ಅಪರಹ್ನ ವೇಳೆಯಲ್ಲಿ ರೈತರ ಪ್ರತಿಭಟನೆ ಜಿಲ್ಲಾ ಪೊಲೀಸ್ ಇಲಾಖೆ ಎಲ್ಲಕಡೆಗೆ ಬಂದೋಬಸ್ತ್ ಕಾರ್ಯಕೈಗೊಳಲಾಗಿದೆ.

  • ಫೋಟೋ : ಮಂಜುನಾಥ್ ಜಮಾದಾರ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here