ಸುರಪುರ: ತಾಲೂಕಿನ ಚಂದ್ಲಾಪುರ ಬೇವಿನಾಳ ಮತ್ತಿತರೆ ಕಡೆಗಳಿಗೆ ನೀರು ಹರಿಯುವ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಗಳಿಗೆ ಶಾಸಕ ರಾಜುಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಮೊದಲು ಕವಡಿಮಟ್ಟಿ ಗ್ರಾಮದಲ್ಲಿನ ಮಳೆ ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಣೆ ಮಾಡಿ ನಂತರ ನೀರಾವರಿ ಕಾಲುವೆಗಳು ಹೊಡೆದು ಅಪರಾ ಪ್ರಮಾಣದ ನೀರು ರೈತರ ಜಮೀನುಗಳಿಗೆ ನುಗ್ಗಿ ದೊಡ್ಡ ಪ್ರಮಾಣದಲ್ಲಿ ಬೆಳೆ ನಷ್ಟವುಂಟಾದ ಜಮೀನುಗಳಿಗೆ ಭೇಟಿ ನೀಡಿ ಶೀಘ್ರದಲ್ಲಿ ಸರ್ವೆ ಕಾರ್ಯ ಮುಗಿಸಿ ಬೆಳೆ ಪರಿಹಾರಕ್ಕೆ ವರದಿ ಸಲ್ಲಿಸುವಂತೆ ತಹಸೀಲ್ದಾರರಿಗೆ ತಿಳಿಸುವುದಾಗಿ ಹೇಳಿದರು.
ಅಲ್ಲದೆ ಮಳೆಯಿಂದ ಹಾನಿಯಾಗಿರುವ ಕಾಲುವೆಗಳನ್ನು ದುರಸ್ಥಿ ಮಾಡಿಸುವುದಾಗಿ ಭರವಸೆ ನೀಡಿ,ಸ್ಥಳದಲ್ಲಿ ಹಾಜರಿದ್ದ ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಕಾರಿಗಳಿಗೆ ದುರಸ್ಥಿಗಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ಯಲ್ಲಪ್ಪ ಕುರಕುಂದಿ ಸಿದ್ದನಗೌಡ ಕರಿಬಾವಿ ಹೆಚ್.ಸಿ ಪಾಟೀಲ್ ಮಲ್ಲಿಕಾರ್ಜುನರಡ್ಡಿ ಅಮ್ಮಾಪುರ ತಿಗಳಪ್ಪ ಕವಡಿಮಟ್ಟಿ ಕೃಷ್ಣಾರಡ್ಡಿ ಸೇರಿದಂತೆ ಅನೇಕರಿದ್ದರು.