ಕುರುಬ ಸಮಾಜದ ಜೊತೆಗೆ ಕ್ಷೌರಿಕರನ್ನೂ ಪರಿಶಿಷ್ಟ ಪಂಗಡ (ಎಸ್‌ಟಿ) ಗೆ ಸೇರಿಸಿ: ಎಂ ಬಿ ಶಿವಕುಮಾರ್‌ ಮನವಿ

0
32

ಬೆಂಗಳೂರು: ಕುರುಬ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ ಸೇರ್ಪಡೆ ಮಾಡಿ ಎಂದು ಪಕ್ಷಾತೀತವಾಗಿ ಹೋರಾಟ ಮಾಡುತ್ತಿರುವ ಸಚಿವರು ಹಾಗೂ ಮಖಂಡರುಗಳು ಕ್ಷೌರಿಕರನ್ನೂ ಈ ಹೋರಾಟದಲ್ಲಿ ಸೇರಿಸಿಕೊಳ್ಳಿ ಎಂದು ಕ್ಷೌರಿಕ ಮೀಸಲಾತಿ ಒಕ್ಕೂಟದ ರಾಜ್ಯಾಧ್ಯಕ್ಷ ಎಂ ಬಿ ಶಿವಕುಮಾರ್‌ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಅಪಾರ ಬೆಂಬಲವನ್ನು ಹೊಂದಿರುವ ಕುರುಬ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ ಸೇರ್ಪಡೆ ಮಾಢುವಂತೆ ಸಚಿವರಾದ ಈಶ್ವರಪ್ಪ ಮತ್ತು ಕಾಗಿನೆಲೆ ಗುರು ಪೀಠದ ಸ್ವಾಮೀಜಿಗಳ ನೇತೃತ್ವದಲ್ಲಿ ತೀರ್ಮಾನಿಸಲಾಗಿದೆ. ಇದಕ್ಕೆ ಮಾಜಿ ಮಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಕ್ಷಾತೀತವಾಗಿ ಈ ರೀತಿ ಹೋರಾಟಕ್ಕೆ ಮುಂದಾಗಿರುವುದು ಸ್ವಾಗತಾರ್ಹ ವಿಷಯವಾಗಿದೆ.

Contact Your\'s Advertisement; 9902492681

ಇದೇ ವೇಳೆ, ಹಿಂದುಳಿದ ವರ್ಗದಲ್ಲಿ ಅಪಮಾನಕ್ಕೆ, ಜಾತಿನಿಂದನೆಗೆ, ಅಪಹಾಸ್ಯಕ್ಕೆ, ಕ್ಷೌರಿಕ ಸಮಾಜಕ್ಕೆ ಧ್ವನಿ ಇಲ್ಲದೆ, ಜಾತಿಯ ಶಕ್ತಿ ಇಲ್ಲದೆ, ಶಕ್ತಿ ಹೀನವಾದ ನಿರ್ಗತಿಕ ಕ್ಷೌರಿಕ ಸಮಾಜಕ್ಕೆ ಸ್ವಾತಂತ್ರ್ಯ ಬಂದು 73 ವರ್ಷ ಕಳೆದರೂ ಕೂಡಾ ಈಗಲೂ ಹಳ್ಳೀಗಾಡಿನಲ್ಲಿ ದಲಿತರಿಗೆ ಮುಕ್ತವಾಗಿ ಕ್ಷೌರ ಸೇವೆಯನ್ನು ಮಾಡಲಿಕ್ಕೆ ಆಗುತ್ತಿಲ್ಲ ಎಂದರೆ ಸರಕಾರದಿಂದ ಸೌಲಭ್ಯ ತಗೆದುಕೊಳ್ಳೊದಕ್ಕೆ ಆಗುತ್ತೆ? ಈ ದೇಶದಲ್ಲೇ ತಿರಸ್ಕರಿಸಲ್ಪಟ್ಟ ಸಮಾಜ ಎಂದರೆ ಕ್ಷೌರಿಕ ಸಮಾಜ.

ಆದ್ದರಿಂದ ನಮ್ಮ ಈ ಸಮಾಜವನ್ನು ತಮ್ಮ ಹೋರಾಟದ ಜೊತೆಯಲ್ಲಿ ಸೇರಿಸಿಕೊಂಡು ನಮಗೂ ಕೂಡಾ ಎಸ್‌ ಟಿ ಗೆ ಸೇರಿಸಬೇಕು ಎಂದು ಮುಖ್ಯಮಂತ್ರಿಗಳಾದ ಬಿ ಎಸ್‌ ಯಡಿಯೂರಪ್ಪ, ಮಾಜಿ ಮಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾಗಿದ್ದ ಈಶ್ವರಪ್ಪ ಮತ್ತು ಕುರುಬ ಸಮುದಾಯದ ಮಾಜಿ ಮಂತ್ರಿಗಳ ಶಾಸಕರು ಹಾಗೂ ಕುರುಬ ಸಮುದಾಯದ ಎಲ್ಲರಲ್ಲೂ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ಜಾತಿಯ ಬೆಂಬಲ ಇಲ್ಲದೆ ರಾಜಕೀಯವಾಗಿ ಹಾಗೂ ಸಮಾಜಿಕವಾಗಿ ಯಾವುದೇ ಮಹತ್ವವನ್ನು ಕ್ಷೌರಿಕ ಸಮಾಜಕ್ಕೆ ನೀಡಲಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಹೂವಿನ ಜೊತೆಯಲ್ಲಿ ನಾರನ್ನೂ ಸ್ವರ್ಗಕ್ಕೆ ಸೇರಿಸಿ ಎನ್ನುವ ಗಾದೆಯಂತೆ ನಿಮ್ಮ ಹೋರಾಟದ ಜೊತೆಯಲ್ಲೇ ನಮ್ಮನ್ನೂ ಸೇರ್ಪಡೆ ಮಾಡಿಕೊಂಡು ಪರಿಶಿಷ್ಠ ಪಂಗಡಕ್ಕೆ ಸೇರ್ಪಡೆ ಮಾಡಿಸಿ ಎಂದು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here