ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಚಾರವನ್ನು ಖಂಡಿಸಿ ಪ್ರತಿಭಟನೆ

0
61

ಶಹಾಬಾದ:ಉತ್ತರ ಪ್ರದೇಶದ ಹತ್ರಾಸನಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಚಾರವನ್ನು ಖಂಡಿಸಿ, ತಪ್ಪಿತಸ್ಥರಿಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬುಧವಾರ ನಗರ ಎಐಎಮ್ಎಸ್ಎಸ್, ಎಐಡಿಎಸ್ಒ ಹಾಗೂ ಎಐಡಿವಾಯ್ಒ ಸಂಘಟನೆಗಳ ವತಿಯಿಂದ ನೆಹರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಎಐಎಮ್ಎಸ್ಎಸ್ ಜಿಲ್ಲಾಧ್ಯಕ್ಷೆ ಗುಂಡಮ್ಮ ಮಡಿವಾಳ ಮಾತನಾಡಿ, ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಯುವತಿಯ ಮೇಲೇ ನಾಲ್ಕು ಜನ ಯುವಕರು ಅತ್ಯಾಚಾರ ವೆಸಗಿ ಅವಳ ನಾಲಿಗೆಯನ್ನು ಕತ್ತರಿಸಿದಲ್ಲದೇ, ಬೆನ್ನು ಮೂಳೆಯನ್ನು ಮುರಿದಿದ್ದಾರೆ.ನಂತರ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾಳೆ.

Contact Your\'s Advertisement; 9902492681

ನಮ್ಮ ದೇಶದಲ್ಲಿ ಮಹಿಳೆಯರ ಶೋಚನೀಯ ಮತ್ತು ವಾಸ್ತವ ಪರಿಸ್ಥಿತಿಯನ್ನು ಇಂತಹ ಘಟನೆಗಳು ತೋರಿಸುತ್ತವೆ ಎಂದು ಟೀಕಿಸಿದರು. ಹಲವಾರು ದೊಡ್ಡ ಭಾಷಣಗಳ ಮೂಲಕ ಬೇಟಿ ಬಚಾವೂ, ಬೇಟಿ ಪಡಾವೋ ಎಂದು ಹೇಳುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮತ್ತು ಅದೇ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರಕಾರ ಮಹಿಳೆಯರ ಹಾಗೂ ಮಕ್ಕಳ ಘನತೆಯನ್ನು ಕಾಪಾಡುವಲ್ಲಿ ಸೋತು ಹೋಗಿವೆ ಎಂದು ಆರೋಪಿಸಿದರು.

ಎಐಡಿಎಸ್ಒ ನಗರ ಅಧ್ಯಕ್ಷ ತುಳಜಾರಾಮ.ಎನ್.ಕೆ ಮಾತನಾಡಿ, ಭಾರತೀಯ ಸಂಸ್ಕೃತಿಯ ಬಗ್ಗೆ ಮಹಿಳೆಯರ ಬಗ್ಗೆ ಹೇಳುವ ಸರಕಾರ ಈ ದೇಶದ ಮಹಿಳೆಯರನ್ನು ರಕ್ಷಿಸುವುದರ ಕುರಿತು ಯಾವುದೇ ಕಾಳಜಿಯನ್ನು ಹೊಂದಿಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದರು.ಜನರ ರಕ್ಷಣೆ ಮಾಡಬೇಕಾದ ಪೊಲೀಸರೇ ಅಲ್ಲಿ ಅಪರಾಧಿಗಳೋಂದಿಗೆ ನಿಂತಿರುವುದು ಅತ್ಯಂತ ನೋವು ತರಿಸುವಂತದ್ದು.ಈ ಪ್ರಕರಣವನ್ನು ಫಾಸ್ಟ ಟ್ರ್ಯಾಕ್ ಕೋರ್ಟನಲ್ಲಿ ವಿಚಾರಣೆ ನಡೆಸಿ ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆಯನ್ನು ವಿಧಿಸಬೇಕೆಂದು ಆಗ್ರಹಿಸಿದರು.

ಎಐಡಿವಾಯ್ಓ ಅಧ್ಯಕ್ಷ ಸಿದ್ದು ಚೌಧರಿ ಮಾತನಾಡಿ,ದೇಶದಲ್ಲಿ ಅಶ್ಲೀಲತೆ, ಡ್ರಗ್ಸ್ ಮತ್ತು ಮದ್ಯವನ್ನು ಕೊನೆಗೊಳಿಸಬೇಕು.ತಪ್ಪಿತಸ್ಥರಿಗೆ ಕಠಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.

ಎಐಎಮ್ಎಸ್ಎಸ್ ನಗರ ಅಧ್ಯಕ್ಷೆ ಮಹಾದೇವಿ ಮಾನೆ, ಎಐಡಿಎಸ್ಒ ಸದಸ್ಯ ತೇಜಸ್ ಇಬ್ರಹಿಂಪೂರ,ರಾಧಿಕಾ ಚೌಧರಿ,ಶಿಲ್ಪಾ ಹುಲಿ,ರೇಣುಕಾ, ಎಐಡಿವಾಯ್ಒ ಕಾರ್ಯದರ್ಶಿ ಪ್ರವೀಣ ಬಣಮೀಕರ್,ಅಜಯ ಕೋರೆ, ಪವನ ಮಾನೆ,ಕಿರಣ ಮಾನೆ,ಅಜಯ, ಸಾಕ್ಷಿ ಮಾನೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here