ಶೋಷಣಾ ಮುಕ್ತ ಸಮಾಜದ ನಿರ್ಮಾಣ ಭಗತಸಿಂಗರ ಕನಸಾಗಿತ್ತು – ಜಗನ್ನಾಥ.ಎಸ್.ಹೆಚ್

0
60

ಶಹಾಬಾದ:ವಿದ್ಯಾರ್ಥಿ-ಯುವಜನರು ಇಂದಿನ ಮುಖಂಡರ ಸ್ವಾರ್ಥ ರಾಜಕೀಯ ಮಾಡದೇ ಭಗತಸಿಂಗ ಮಾಡಿದ ಶ್ರೇಷ್ಠ ರಾಜಕೀಯ ಮಾಡಬೇಕೆಂದು ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ.ಎಸ್.ಹೆಚ್ ಹೇಳಿದರು.

ಅವರು ನಗರದ ಎ.ಐ.ಡಿ.ವೈ.ಓ ಸಂಘಟನೆಯ ಸಮಿತಿಯಿಂದ ಆಯೋಜಿಸಲಾದ ಕ್ರಾಂತಿಕಾರಿ ಶಹೀದ್ ಭಗತಸಿಂಗ ರವರ 113 ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಾಕಾರರಾಗಿ ಮಾತನಾಡುತ್ತಿದ್ದರು.

Contact Your\'s Advertisement; 9902492681

ಭಗತಸಿಂಗ ಹೋರಾಟವು ಕೇವಲ ಬ್ರೀಟಿಷರಿಂದ ಸ್ವಾತಂತ್ರ್ಯ ಪಡೆಯುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಸ್ವಾತಂತ್ರ್ಯ ಭಾರತದಲ್ಲಿ ಸ್ರ್ತೀ-ಪುರುಷ ತಾರತಮ್ಯ, ಜಾತೀಯತೆ, ಬಡವ-ಶ್ರೀಮಂತ ಎಂಬ ಅಸಮಾನತೆ ಇಲ್ಲದ ಹಾಗೂ ಎಲ್ಲರಿಗೂ ಶಿಕ್ಷಣ, ಉದ್ಯೋಗ, ರೈತ-ಕಾರ್ಮಿಕರು ನೆಮ್ಮದಿಯ ಜೀವನ ಮಾಡುವಂತಹ ಶೋಷಣಾ ಮುಕ್ತ ಸಮಾಜದ ನಿರ್ಮಾಣ ಮಾಡುವ ಕನಸು ಅವರದ್ದಾಗಿತ್ತು. ಆದರೆ ಇಂದಿನ ಸರಕಾರಗಳು ಸಹ ಜನ ವಿರೋಧಿ ಮಸೂದೆಗಳನ್ನು ಯಾವುದೇ ಪ್ರಜಾತಾಂತ್ರಿಕ ಚರ್ಚೆಯಿಲ್ಲದೇ ಜಾರಿಗೆ ತರುತ್ತಿವೆ.
ಇಂದು ಜಾತಿ, ಧರ್ಮ, ಪ್ರಾಂತ್ಯ-ಭಾಷೆಯ ಆಧಾರದ ಮೇಲೆ ಜನರ ಐಕ್ಯತೆಯನ್ನು ಮುರಿಯುತ್ತಿದ್ದಾರೆ. ಇದು ಒಂದು ಕಡೆ ಆದರೆ ಬಡತನ, ಬೆಲೆ ಏರಿಕೆ, ಆರ್ಥಿಕ ಬಿಕ್ಕಟ್ಟು ನಿರುದ್ಯೋಗದಂತಹ ಸಮಸ್ಯೆಗಳು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಭಗತಸಿಂಗ್ ಅವರ ವಿಚಾರ, ಆದರ್ಶ ಮತ್ತು ಅವರ ರಾಜಕೀಯ ದಾರಿಯನ್ನು ಆರ್ಥಮಾಡಿಕೊಂಡು ಅವರ ಕನಸನ್ನು ಇವತ್ತಿನ ಯುವಜನರು ನನಸು ಮಾಡಬೇಕಾಗಿದೆ ಎಂದರು.

ಎಐಡಿವೈಒ ಅಧ್ಯಕ್ಷರಾದ ಸಿದ್ದು ಚೌಧರಿ ಮಾತನಾಡಿ, ಶಹೀದ್ ಭಗತಸಿಂಗ ಹೋರಾಟದ ಪರಂಪರೆಯಲ್ಲಿ ಬೆಳೆದವರು. ಅವರ ಚಿಕ್ಕಪ್ಪಾ ಬ್ರಿಟಿಷರ ವಿರುದ್ದ ಹೋರಾಟದಲ್ಲಿ ಗಲ್ಲಿಗೇರಿದರು .1919 ರ ಜಲಿಯಾನ ವಾಲಾಬಾಗ್ ಘಟನೆಯಲ್ಲಿ ಬ್ರಿಟಿಷ ಅಧಿಕಾರಿ ಜನರಲ್ ಡೈಯಾರ್ ಗುಂಡಿನ ಮಳೆ ಸುರಿದ ಪರಿಣಾಮ ಸಾವಿರಾರು ಭಾರತಿಯರು ಜೀವತೆತ್ತರು. ಈ ಘಟನೆಯಿಂದ ಆಕ್ರೊಶಗೊಂಡ ಭಗತ್ ಸಿಂಗ್ ರವರು ತಮ್ಮ ಇಡಿ ಜೀವನ ಭಾರತ ವಿಮುಕ್ತಿಗೋಸ್ಕರ ಮುಡುಪಾಗಿ ಇಡುವಂತಹ ಸಂಕಲ್ಪ ಮಾಡಿದರು. ಇಂತಹ ಮಹಾನ್ ಕ್ರಾಂತಿಕಾರಿ ವಿಚಾರ ಯುವಜನರು ತಿಳಿದುಕೊಳಬೇಕೆಂದರು.

ಎಐಡಿವೈಒ ಸದಸ್ಯರಾದ ರಘು ಪವಾರ ಅಧ್ಯಕ್ಷತೆ ವಹಿಸಿದ್ದರು. ಎಐಡಿವೈಒ ಕಾರ್ಯದರ್ಶಿ ಪ್ರವೀಣ ಬಣಮಿಕರ್,ಶಿವಕುಮಾರ ,ಇ.ಕೆ, ನೀಲಕಂಠ ಎಮ್ ಹುಲಿ , ತಿಮ್ಮಾಯ ಮಾನೆ ವಿಶ್ವನಾಥ ಸಿಂಘೆ,ಪ್ರಕಾಶ ಯಲಗೋಡ ,ಮಲ್ಲು ದೊರೆ, ಅಜಯ ದೊರೆ, ತಿರುಪತಿ ಪವಾರ್, ವೆಂಕಟೇಶ ಪವಾರ್, ಹಣಮಂತ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here