ರಾಯಚೂರು: ಬಾಬರಿ ಮಸ್ಜಿದ್ ಧ್ವಂಸ ಆರೋಪಿಗಳ ಖುಲಾಸೆ ಮಾಡಿ, ಹೊರಡಿಸಿದ ತೀರ್ಪು ವಿರೋಧಿಸಿ ಗಂಗಾವತಿಯಲ್ಲಿ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿಗಳಿಂದ ನಿನ್ನೆ ರಾತ್ರಿ 7:30 ಗೆ ಪ್ರತಿಭಟನೆ ನಡೆಯಿತ್ತು.
ಈ ವೇಳೆ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ವಾಗ್ವಾದ ಸಂಭವಿಸಿ, ಪೊಲೀಸರು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಬಂಧಿಸಿ, ರಾತ್ರಿ 10 ಗಂಟೆಗೆ ಬಿಡುಗಡೆ ಮಾಡಿದ್ದಾರೆ.
ಈ ಪ್ರತಿಭಟನೆಯಲ್ಲಿ ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾಧ್ಯಕ್ಷರಾದ ಚಾಂದ್ ಸಲ್ಮಾನ್, ರಾಜ್ಯ ಸಮಿತಿ ಸದಸ್ಯರಾದ ಸೈಯದ್ ಸರ್ಫ್ರಾಜ್ ಮತ್ತು ಕಾರ್ಯಕರ್ತರಾದ ಇರ್ಫಾನ್, ಮೌಲ ಹುಸೇನ್, ಜಮಾಲ್, ಸದ್ದಾಂ, ಗೌಸ್ ಉಪಸ್ಥಿತರಿದ್ದರು.