ಶಿಕ್ಷಕರು ರಾಷ್ಟ್ರದ ಬುನಾದಿ: ಮೂಲಗೆ

0
54

ಕಲಬುರಗಿ: ದೇಶದ ಅಭಿವೃದ್ಧಿಗೆ ಹಾಗೂ ಸಾಮಾಜಿಕ ಬದಲಾವಣೆಗೆ ಶಿಕ್ಷಕರೇ ನಮಗೆ ಬನಾದಿಯಾಗಿದ್ದಾರೆ ಎಂದು ದಕ್ಷಿಣ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ನೀಲಕಂಠರಾವ್ ಮೂಲಗೆ ಅಭಿಪ್ರಾಯಪಟ್ಟರು.

ನಗರದ ಅನ್ನಪೂರ್ಣ ಕ್ರಾಸ್ ಹತ್ತಿರವಿರುವ ಕಲಾ ಮಂಡಳದಲ್ಲಿ ಬುಧವಾರ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಅಂಗವಾಗಿ ಶ್ರೇಷ್ಠ ಶಿಕ್ಷಕರ ಪುರಸ್ಕಾರ ಸಮಾರಂಭದವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನ ಧಾರೆ ಎರೆದಾಗ ಭವಿಷ್ಯದಲ್ಲಿ ವಿದ್ಯಾರ್ಥಿಗಳು ದೇಶದ ಚುಕ್ಕಾಣಿ ಹಿಡಿಯುವಲ್ಲಿ ಅಲ್ಲದೆ, ವಿವಿಧ ರೀತಿಯಲ್ಲಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ಹೀಗಾಗಿ ದೇಶದ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡವಾಗಿದೆ. ಶಿಕ್ಷಕರೂ ಕಷ್ಟಪಟ್ಟರೆ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ತರಹ ಸಾಧನೆ ಮಾಡಬಹುದು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಕೋರ ಮೆಹ್ತಾ ಮಾತನಾಡಿ, ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಉತ್ತಮ ಶಿಕ್ಷಕರನ್ನು ಗುರುತಿಸಿ, ಅವರಿಗೆ ಪ್ರೋತ್ಸಾಹ ಹಾಗೂ ಪುರಸ್ಕಾರ ನೀಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಈ ತರಹದ ನಿಸ್ವಾರ್ಥ ಸೇವೆ ಮಾಡುತ್ತಿರುವುದು ಇತರರಿಗೆ ಸಮಾಜದಲ್ಲಿ ಮಾದರಿಯಾಗಿದೆ ಎಂದು ಹೇಳಿದರು.

ಶರಣಬಸವ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಡಾ. ಲಿಂಗರಾಜ ಶಾಸ್ತ್ರಿ , ಶಿಕ್ಷಣದ ಮಹತ್ವದ ಕುರಿತು ಕಥೆಯೊಂದನ್ನು ವಿವರಿಸಿದರು. ತದನಂತರ ಮಲ್ಲಯ್ಯ ಗುತ್ತೆದಾರ ಮಾತನಾಡಿದರು. ಬಿ.ಎಸ್.ಮಾಲಿಪಾಟೀಲ್ ವೇದಿಕೆ ಮೇಲಿದ್ದರು.

ಕಾರ್ಯಕ್ರಮದಲ್ಲಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪಡೆದ ಶಿಕಹಕರನ್ನು ಪುರಸ್ಕಾರ ಪ್ರದಾನವನ್ನು ಡಾ. ಲಿಂಗರಾಜ ಶಾಸ್ತ್ರಿ ಅವರು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಕನ್ನಡ ಪ್ರಾಧಿಕಾರದ ಸದಸ್ಯರಾದ ಸುರೇಶ್ ಬಡಿಗೇರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಮಾರಂಭವನ್ನು ವಿಶ್ವನಾಥ ಮರ್ತೂರ್ ನಿರೂಪಿಸಿದರು. ಪ್ರತಿಷ್ಠಾನದ ಅಧ್ಯಕ್ಷರಾದ ಬಿ.ಎಚ್. ನಿರಗುಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾರಂಭದಲ್ಲಿ ಜಿಲ್ಲೆಯ ಹತ್ತು ಶ್ರೇಷ್ಠ ಶಿಕ್ಷಕರಾದ ಚಿತಾಪೂರ ತಾಲೂಕಿನ ಲತಾ ಡಿ.ಎನ್, ಸೇಡಂ ತಾಲೂಕಿನ ಈರಪ್ಪ ಕನಸೂರ, ಜೇವರ್ಗಿ ತಾಲೂಕಿನ ರಾಜಕುಮಾರ ಸುಂಬಡ, ಆಳಂದ ತಾಲೂಕಿನ ಧರ್ಮರಾಯ ಕೊರಳ್ಳಿ, ಚಿಂಚೋಳಿ ತಾಲೂಕಿನ ದೇವಾನಂದ ಸಾವಳಗಿ, ಅಫಜಲಪೂರದಿಂದ ಮಹಿಬೂಬ್ ಸಾಬ್ ಜಮಾದಾರ್, ಕಮಲಾಪೂರ ತಾಲೂಕಿನ ರವಿಕುಮಾರ ಹೂಗಾರ್, ಕಲಬುರ್ಗಿಯ ಡಾ. ರಾಜಕುಮಾರ್ ಪಾಟೀಲ್, ಚಂದ್ರಕಾಂತ್ ಭಾಗನ್ ಹಾಗೂ ಆರ್.ಸುಲೇಖಾ ಮಾಲಿಪಾಟೀಲ್ ಅವರನ್ನು ಪ್ರಶಸ್ತಿ ಪುರಸ್ಕಾರ ಮಾಡಿದರು. ಇದೇ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದ ಸುರೇಖಾ ಡೆಂಗಿ ಹಾಗೂ ಮುಕುಂದಪ್ಪಾ ನಂದಗಾವ್ ಅವರನ್ನು ವಿಶೇಷವಾಗಿ ಗೌರವ ಸನ್ಮಾನ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here