ಕಲಬುರಗಿ: ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ವೃತ್ತಿ ಶಿಕ್ಷಣ ಜೆಒಸಿ ಸಿಬ್ಬಂದಿಗಳು ಸೇವೆಗೆ ಸೇರಿದ ದಿನಾಂಕದಿಂದ ಸೇವಾ ಭದ್ರತೆ ಆಗದಿರುವುದರಿಂದ ಪಿಂಚಿಣಿ ಮತ್ತು ಅನುಕಂಪದ ಹುದ್ದೆಯಿಂದ ವಂಚಿತರಾಗುತ್ತಿದ್ದಾರೆ, ೨-೩ ದಶಕಗಳಿಂದ ಅತ್ಯಂತ ಕಡಿಮೆ ಸಭಾವನೆಯಲ್ಲಿ ದುಡಿದ ಈ ಸಿಬ್ಬಂದಿಗಳ ನ್ಯಾಯುಚಿತ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ವೃತ್ತಿ ಶಿಕ್ಷಣ (ಜೆಓಸಿ) ಇಲಾಖೆಯಿಂದ ವಿವಿಧ ಇಲಾಖೆಗಳಲ್ಲಿ ವಿಲಿನಗೊಂಡ ನೌಕರರ ಒಕ್ಕೂಟದ ಅಧ್ಯಕ್ಷ ಮಲ್ಲಿನಾಥ ಕಳಸ್ಕರ ಅವರು ವಿಮಾನ ನಿಲ್ದಾಣದಲ್ಲಿ ಶಿಕ್ಷಣ ಸಚಿವರಾದ ಸುರೇಶ ಕುಮಾರ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.