ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲು ಆಗ್ರಹ

0
125

ವಾಡಿ: ಉತ್ತರ ಪ್ರದೇಶದ ದಲಿತ ಯುವತಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಆರೋಪಿಗಳನ್ನು ಸಾಮೂಹಿಕವಾಗಿ ಗಲ್ಲಿಗೇರಿಸಬೇಕು ಎಂದು ಆಗ್ರಹಸಿ ದಲಿತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ವೃತ್ತದಲ್ಲಿ ರವಿವಾರ ಮಾನವ ಸರ್ಪಳಿ ನಿರ್ಮಿಸುವ ಮೂಲಕ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಸಿದ್ಧಾರ್ಥ ತರುಣ ಸಂಘದ ಪದಾಧಿಕಾರಿಗಳು, ಬಿಜೆಪಿ ಸರಕಾರ ಕಾಮುಕರನ್ನು ಬಚಾವ್ ಮಾಡಲು ಆಡಳಿತ ಯಂತ್ರವನ್ನೇ ದುರುಪಯೋಗ ಮಾಡಿಕೊಳ್ಳುತ್ತಿದೆ.

Contact Your\'s Advertisement; 9902492681

ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ದಲಿತ ಯುವತಿಗೆ ನ್ಯಾಯ ಒದಗಿಸುವ ಬದಲಾಗಿ ಸರಕಾರ ಸಾಕ್ಷಿಗಳನ್ನು ನಾಶಪಡಿಸುತ್ತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಅಧಿತ್ಯನಾಥ, ಅತ್ಯಾಚಾರ ಪ್ರಕರಣದ ಸತ್ಯಾಸತ್ಯತೆ ಹೊರಗೆಳೆಯಲು ಮಾಧ್ಯಮಗಳಿಗೆ ಸ್ವಾತಂತ್ರ್ಯ ನೀಡುತ್ತಿಲ್ಲ. ಸರ್ವಾಧಿಕಾರ ಧೋರಣೆ ಅನುಸರಿಸುವ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಹೊರಟಿದ್ದಾರೆ ಎಂದು ಆರೋಪಿಸಿದರು. ಯಾವೂದೇ ಕಾರಣಕ್ಕೂ ಕಾಮುಕರನ್ನು ಶಿಕ್ಷೆಯಿಂದ ರಕ್ಷಿಸಬಾರದು ಎಂದು ಒತ್ತಾಯಿಸಿದರು.

ಸಿದ್ಧಾರ್ಥ ತರುಣ ಸಂಘದ ಅಧ್ಯಕ್ಷ ರಂಜೀತ ಕಾನಳ್ಳಿ, ಉಪಾಧ್ಯಕ್ಷ ಶ್ರವಣಕುಮಾರ ಮರತೂರ, ದಲಿತ ಮುಖಂಡರಾದ ಸೂರ್ಯಕಾಂತ ರದ್ದೇವಾಡಿ, ಶರಣಬಸು ಸಿರೂರಕರ, ರಮೇಶ ಬಡಿಗೇರ, ರಾಹುಲ ಮೇನಗಾರ, ಸುರೇಶ ಮಂದ್ರಾಡ, ರಾಹುಲ ಧನ್ನೇಕರ, ಚಂದ್ರಶೇಖರ ಮೈನಾಳಕರ, ಮೋಹನ ಮಾಲಗತ್ತಿ, ರಾಕೇಶ ನಿಂಬರ್ಗಾ, ಚಂದ್ರಶೇಖರ ಧನ್ನೇಕರ, ಅರೂಣ ಬರ್ಮಾ, ರವಿ ಕೋಳಕೂರ, ಮಹೇಶ ರಾಜೊಳ್ಳಿ, ಗಣೇಶ ಮುಗುಳೇಕರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನಾಕಾರರು ಪಿಎಸ್‌ಐ ವಿಜಯಕುಮಾರ ಭಾವಗಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here