ಆಸ್ತಿ ದಾಖಲೆ ನೀಡದೆ ಕೊಟ್ಟಿ ದಾಖಲೆ ನೀಡಿರುವ ಅಧಿಕಾರಿಗಳ ಮೇಲೆ ಕ್ರಮಕ್ಕೆ ಉಪವಾಸ ಧರಣಿ

0
175

ಸುರಪುರ: ತಮ್ಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳ ದೃಢಿಕರಣದ ನಕಲು ಪ್ರತಿಗಳನ್ನು ನೀಡುವಂತೆ ಅರ್ಜಿ ಸಲ್ಲಿಸಿದರೆ ನಕಲಿ ದಾಖಲೆಗಳನ್ನು ನೀಡುವ ಮೂಲಕ ಕರ್ತವ್ಯಲೋಪ ಎಸಗಿರುವ ತಹಸೀಲ್ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಮರಣ್ಣ ಸಜ್ಜನ್ ಕುಟುಂಬಸ್ಥರು ಸುರಪುರ ತಹಸೀಲ್ ಕಚೇರಿ ಮುಂದೆ ಅಹೋರಾತ್ರಿ ಉಪವಾಸ ಧರಣಿ ಆರಂಭಿಸಿದ್ದಾರೆ.

ನಗರದ ಹಸನಾಪುರ ಪ್ರದೇಶದ ತಮ್ಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ದೃಢಿಕರಣಗೊಳಿಸಿ ನೀಡುವಂತೆ ಅನೇಕ ವರ್ಷಗಳಿಂದ ಅರ್ಜಿ ಸಲ್ಲಿಸುತ್ತಿದ್ದರು ೧೯೯೬ರಲ್ಲಿ ಅಂದಿನ ಗ್ರಾಮಲೆಕ್ಕಾಧಿಕಾರಿ ಕೊಟ್ಟಿ ದಾಖಲೆ ನೀಡಿ ಅಧಿಕಾರಿಗಳ ನಕಲಿ ಸಹಿ ಮಾಡಿ ನಮ್ಮ ಆಸ್ತಿಯ ದಾಖಲೆ ಬೇರೆಯವರ ಹೆಸರಲ್ಲಿ ಇದೆ ಎಂದು ನೀಡಿ ವಂಚನೆ ಮಾಡಿದ್ದಾರೆ.

Contact Your\'s Advertisement; 9902492681

ಆ ಅಧಿಕಾರಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ನಾವು ಕೇಳಿರುವ ಎಲ್ಲಾ ದಾಖಲಾತಿಗಳನ್ನು ದೃಢಿಕರಣಗೊಳಿಸಿ ನೀಡಬೇಕು,ಇದನ್ನು ಕೇಳಿದರೆ ತಹಸೀಲ್ ಕಚೇರಿಯ ಸಿಬ್ಬಂದಿ ನಮ್ಮ ದಾಖಲಾತಿಗಳು ಲಭ್ಯವಿಲ್ಲ ಎಂದು ಅಂಚೆಯ ಮೂಲಕ ನಮ್ಮ ಮನೆಗೆ ಪತ್ರ ಕಳುಹಿಸಿದ್ದು ನಮ್ಮ ದಾಖಲೆಗಳ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡುವ ಸಿಬ್ಬಂದಿಗಳು ನಮಗೆ ಮಾತ್ರ ಲಭ್ಯವಿಲ್ಲ ಎಂದು ಹೇಳಿ ನಮ್ಮನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ.

ಆದ್ದರಿಂದ ನಮಗೆ ನ್ಯಾಯ ಸಿಗುವವರೆಗೆ ಉಪವಾಸ ಧರಣಿ ನಡೆಸುವುದಾಗಿ ತಿಳಿಸಿದ್ದಾರೆ.ಧರಣಿಯಲ್ಲಿ ಅಮರಣ್ಣ ಸಜ್ಜನವರ ಕುಟುಂಬಸ್ಥರಾದ ಶಿವಕುಮಾರ ಶರತ್ ಸಜ್ಜನ್ ಅವರು ಉಪವಾಸ ಧರಣಿಯಲ್ಲಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here