ನವದೆಹಲಿ: ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಯುಎನ್ ಅಧಿಕಾರಿಯೊಬ್ಬರು ಇತ್ತೀಚೆಗೆ ನೀಡಿರುವ ಹೇಳಿಕೆಯನ್ನು ವಿದೇಶಾಂಗ ಸಚಿವಾಲಯ ಟೀಕಿಸಿ, ತನಿಖಾ ಪ್ರಕ್ರಿಯೆ ನಡೆಯುತ್ತಿದ್ದು,’ಯಾವುದೇ ಹೊರಗಿನ ಏಜೆನ್ಸಿಯಿಂದ ಅನಗತ್ಯ ಹೇಳಿಕೆ ಯಿಂದ ದೂರ ಇರಬೇಕೆಂದು ತಿಳಿಸಿದೆ.
ದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಮಾತನಾಡಿ, ಯುಎನ್ ನಿವಾಸ ಸಂಯೋಜಕರು ಕೆಲವು ಅನುಚಿತ ಹೇಳಿಕೆಗಳನ್ನು ನೀಡಿದ್ದಾರೆ. ಪ್ರಜಾಪ್ರಭುತ್ವವಾಗಿ, ಸಮಾಜದ ಪ್ರತಿಯೊಂದು ವರ್ಗಕ್ಕೂ ನ್ಯಾಯ ದೊರಕಿಸಿಕೊಡುವ ಸಮಯ ಪರೀಕ್ಷಿತ ದಾಖಲೆ ನಮ್ಮಲ್ಲಿದೆ.
ಉತ್ತರ ಪ್ರದೇಶದ ಹತ್ರಾಸ್ ಮತ್ತು ಬಲರಾಂಪುರದಲ್ಲಿ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೋಮವಾರ ಭಾರತದ ಯುಎನ್ ಘಟಕವು, “ಹತ್ರಾಸ್ ಮತ್ತು ಬಲರಾಂಪುರದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು ಹಿಂದುಳಿದ ಸಾಮಾಜಿಕ ಗುಂಪುಗಳ ಹುಡುಗಿಯರು ಲಿಂಗ ಆಧಾರಿತ ಹಿಂಸಾಚಾರಕ್ಕೆ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆಂದು ಮತ್ತೆ ನಮಗೆ ನೆನಪಿಸುತ್ತದೆ” ಎಂದು
ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಪತ್ರಿಭಟನೆಗಳು ನಡೆಸಿ, ಆರೋಪಿಗಳಿಗೆ ಶಿಕ್ಷೆ ವಿಧಿಸಲು ಒತ್ತಾಯಿಸಲಾಗುತ್ತಿದೆ.