ಶ್ರೀಲಂಕಾದಲ್ಲಿ ಸರಣಿ ಬಾಂಬ್ ದಾಳಿ ರಾಜ್ಯದ 5 ಮಂದಿಸಾವು, ರಾಷ್ಟ್ರಪತಿ ಸೇರಿ ಗಣ್ಯರಿಂದ ಸಂತಾಪ

0
110

ಬೆಂಗಳೂರು:  ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸುಮಾರು 200ಕ್ಕೂ ಹೆಚ್ಚು ಮಂದಿ ಸಾವುನಪ್ಪಿದ್ದು, 380ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ರಾಜ್ಯದ 5 ಮಂದಿ ಸಾವನಪಿದ್ದಾರೆಂದು ವರದಿಯಾಗಿದ್ದು, ಕರ್ನಾಟಕದ 7 ಜನ ನಾಪತೆಯಾಗಿ ಸಂಪರ್ಕ ಕಳೆದುಕೊಂಡಿದ್ದಾರೆ ಎಂದು ಸ್ಥಳಿಯ ಮೂಲಗಳ ಮೂಲಕ ಮಾಹಿತಿ ಲಭ್ಯವಾಗುತ್ತಿದೆ.

ಶ್ರೀಲಂಕದ ರಾಜಧಾನಿ ಕೊಲಂಬೋದಲ್ಲಿ ನೀನೇ ನಡೆದ ಸರಣಿ ಬಾಂಬ್ ದಾಳಿ ಚರ್ಚ್ ಹಾಗೂ ಹೋಟೆಲ್ ಗಳ ಮೇಲೆ ದಾಳಿ ನಡೆದ ಪರಿಣಾಮ ರಾಜ್ಯದ ಏಳು ಕಾಣೆಯಾಗಿದ್ದರು, ಈ ಪೈಕಿ ನಾಲ್ಕು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಲಕ್ಷ್ಮಣ ಗೌಡ ರಮೇಶ್, ಕೆ.ಎಂ. ಲಕ್ಷ್ಮೀನಾರಾಯಣ, ಎಂ. ರಂಗಪ್ಪ, ರೀಝಿನಾ ಹಾಗೂ ಕೆ.ಜಿ. ಹನುಮಂತರಾಯಪ್ಪ ಎಂದು ಮೃತರನ್ನು ಗುರುತಿಸಲಾಗಿದೆ.

Contact Your\'s Advertisement; 9902492681

ಹೆಚ್.ಶಿವಕುಮಾರ್, ಎ. ಮಾರೇಗೌಡ ಹಾಗೂ ಹೆಚ್. ಪುಟ್ಟರಾಜು ಅವರು ಇನ್ನೂ ಪತ್ತೆಯಾಗಿಲ್ಲ. ಇವರೆಲ್ಲರೂ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಶ್ರೀಲಂಕಾ ಪ್ರವಾಸದಲ್ಲಿದ್ದರು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳ ಕಚೇರಿಯು ದೆಹಲಿ ಕರ್ನಾಟಕ ಭವನ ಹಾಗೂ ಮೃತರ ಹಾಗೂ ಕಾಣೆಯಾದವರ ಕುಟುಂಬಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

ಶ್ರೀಲಂಕದ ರಾಜಧಾನಿ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ದಾಳಿಯ ಈ ಕುರಿತು ದೇಶದ ರಾಷ್ಟ್ರಪತಿ ರಾಮ್ ನಾಥ್ ಗೊವಿಂದ್, ಪ್ರಧಾನಿ ಮೋದಿ, ವಿದೇಶಾಂಗ ಸಚಿವೆ ಶುಸ್ಮಾ ಸ್ವರಾಜ್ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಘಟನೆಯನ್ನು ಖಂಡಿಸಿ, ಸಂತಾಪ ಸೂಚಿಸಿದ್ದಾರೆ, ಅಲ್ಲದೇ ಭಾರತದ ಗಣ್ಯರು ಶ್ರೀಲಂಕದ ಪ್ರಧಾನಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ

ರಾಷ್ಟ್ರಪತಿಗಳ ಟ್ವೀಟ್ :

ಪ್ರಧಾನಿ ಮಂತ್ರಿಗಳ ಟ್ವೀಟ್:

ವಿದೇಶಾಂಗ ಸಚಿವೆ ಅವರ ಟ್ವೀಟ್:

ಕರ್ನಾಟಕದ ಮುಖ್ಯಮಂತ್ರಿ ಟ್ವೀಟ್:

.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here