ಭೂಮಾಪಕರನ್ನು ನಿಯೋಜಿಸದಿರುವುದಕ್ಕೆ ಒತ್ತಾಯಿಸಿ ಸಂಘದಿಂದ ಮನವಿ

0
355

ಕಲಬುರಗಿ: ಸ್ವಾಮಿತ್ವ ಯೋಜನೆಯಡಿಯಲ್ಲಿ ಪರವಾನಗಿ ಭೂಮಾಪಕರನ್ನು ಅಳತೆಗೆ ನಿಯೋಜಿಸದಿರುವುದಕ್ಕೆ ಹೈದ್ರಾಬಾದ್ ಕರ್ನಾಟಕ ಪರವಾನಗಿ ಭೂಮಾಪಕರ ಸಂಘವು ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

ಭೂಮಾಪನ ಇಲಾಖೆಯಲ್ಲಿ ೨೦೦೦ನೇ ಇಸ್ವಿಯಿಂದ ಪರವಾನಗಿ ಭೂಮಾಪಕರಾಗಿ ಕೆಲಸ ನಿರ್ವಹಿಸುತ್ತಾ ಬಂದಿರುತ್ತೇವೆ. ಮೇಲಾಧಿಕಾರಿಗಳು ಕಾಲ ಕಾಲಕ್ಕೆ ಆದೇಶ ಮಾಡಿದಂತೆ, ಆವರ ನಿರ್ದೇಶನದಂತೆ ತಾವುಗಳು ನೀಡಿದ ಎಲ್ಲಾ ತರಹದ ಕೆಲಸಗಳನ್ನು ಮಾಡುತ್ತಲೇ ಬಂದಿದ್ದು, ನಮಗೆ ಸರ್ಕಾರದಿಂದಾಗಲಿ ಹಾಗೂ ಇಲಾಖೆ ಯಿಂದಾಗಲಿ ಯಾವುದೇ ಸೇವಾ ಭದ್ರತೆ ನೀಡಿರುವುದಿಲ್ಲ ಇದರ ಬಗ್ಗೆ ಸರ್ಕಾರಕ್ಕೆ ಹಾಗೂ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸುತ್ತಾ ಬಂದ್ದರು ಕೂಡ ಪ್ರಯೋಜನವಾಗಿಲ್ಲವೆಂದ ಮನವಿಯಲ್ಲಿ ನಮೋದಿಸಲಾಗಿದೆ.

Contact Your\'s Advertisement; 9902492681

ಈಗ ಏಕಾಏಕಿ ಕೇಂದ್ರ ಸರ್ಕಾರದ ಸ್ವಮಿತ್ವ ಯೋಜನೆಗೂ ಸಹ ಪರವಾನಗಿ ಭೂಮಾಪಕರ ನಿಯೋಜನೆ ಮಾಡಿ ಆದೇಶ ಮಾಡಿರುತ್ತಿರಿ ಮತ್ತು ಸದರಿ ಕೆಲಸ ಪ್ರತಿ ದಿನಕ್ಕೆ ೫೦ ಆಸ್ತಿಗಳಿಗೆ ೮೦೦ ರೂ. ಗಳನ್ನು ನೀಡುವದನ್ನು ತಿಳಿಸಿರುತ್ತೀರಿ, ಸದ್ಯದ ಪರಿಸ್ಥಿತಿಯನ್ನು ತಾವುಗಳು ನೀಡುವ ಸಂಭಾವನೆ ಹಣಕ್ಕೆ ಅಳತೆ ಮಾಡಲು ಕಷ್ಟದಾಯಕವಾಗುತ್ತಿದ್ದೆ ಎಂದು ಸಂಘದ ಅಧ್ಯಕ್ಷ ಶ್ರೀಕಾಂತ ಎ. ನಿಂಬೂರ ಅವರು ಗೋಳನ್ನು ಮನವಿಯ ರೂಪದಲ್ಲಿ ತೋಡಿಕೊಂಡಿದ್ದಾರೆ.

ಈ ಹಿಂದೆ ಪೋಡಿ ಮುಕ್ತ ಯೋಜನೆ ಅಭಿಯಾನದಲ್ಲಿಯೂ ಸಹ ಪರವಾನಗಿ ಭೂಮಾಪಕರಾದ ನಾವುಗಳು ಅಳತೆ ಮಾಡಿ ದಾಖಲೆಗಳನ್ನು ತಯಾರಿಸಿ ದುರಸ್ತಿ ಪಡಿಸಿ ಸಕಾಲದಲ್ಲಿ ಕಛೇರಿಗೆ ಸಲ್ಲಿಸಿ ಹಲವಾರು ತಿಂಗಳು ಕಳೆದರೂ ಸಹ ಸಂಭಾವನೆ ಹಣವನ್ನು ಬಿಡುಗಡೆ ಮಾಡಿರುದಿಲ್ಲ, ಆದ್ದರಿಂದ ಕೇಂದ್ರ ಸರ್ಕಾರದ ಈ ಸ್ವಮಿತ್ವ ಯೋಜನೆಯಿಂದ ಬಡಪಾಯಿ ಪರವಾನಗಿ ಭೂಮಾಪಕರನ್ನು ನಿಯೋಜನೆ ಮಾಡಬಾರದು ಎಂದು ಮನವಿ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶರಣಬಸಪ್ಪ ಮಂಠಾಳೆ, ಮಲ್ಲಿನಾಥ ಬೊಧನ, ರಮೇಶ ಎನ್.ಎಸ್. ಚಂದ್ರಶೇಖರ ಎಚ್.ಆರ್.,ಸೋಮಶೇಖರಪ್ಪ, ಅಜೀತಕುಮಾರ ದುದಗಿ, ದಯಾನಂದ ವಡಗೇರಿ, ಶ್ರೀಕಾಂತ ನಾಟೀಕಾರ, ರಾಜೇಶ ಜೋಶಿ, ರಮೇಶ ಬಸ್ತೆ, ಮಹೇಶ ಸುರ್ವೆ, ಶಿವಕುಮಾರ ಅಂಗಡಿ, ಗೀರಿಶಕುಮಾರ, ರವಿಂದ್ರ, ಸುಭಾಷ ರಾಠೋಡ, ವಿನೋಧಕುಮಾರ, ಶಿವಕುಮಾರ ಡೊಂಗರಗಾಂವ, ಮಲ್ಲಿಕಾರ್ಜುನ ಗಡ್ಡದ, ರಾಜು ಭವಾನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here