ಕಲಬುರಗಿ: ಕೊಲೆ ಮಾಡಿದ ಆರೋಪಿಯನ್ನು ಪೊಲೀಸ್ ಘಟನಾ ಸ್ಥಳಕ್ಕೆ ತನಿಖೆಗಾಗಿ ಕರೆದುಕೊಂಡು ಹೋಗಿದ್ದ ವೇಳೆಯಲ್ಲಿ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಮೇಲೆ ಇಂದು ಬೆಳ್ಳಂಬೆಳಗ್ಗೆ ಫೈರಿಂಗ್ ನಡೆಸಿರುವ ಘಟನೆ ತಾಜ್ ಸುಲ್ತಾನಪುರ್ ರೈಲ್ವೆ ಹತ್ತಿರ ನಡೆದಿದೆ.
ನಗರದ ಮಹಬೂಬ್ ನಗರ ನಿವಾಸಿಯಾಗಿದ್ದ, ಮುಬೀನ್ (25) ಫೈರಿಂಗ್ ನಲ್ಲಿ ಗಾಯಗೊಂಡ ಆರೋಪಿ. ಇತ ವ್ಯಕ್ತಿ ಓರ್ವನ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದು, ನಿನ್ನೆ ಪೊಲೀಸ್ ರ ಬಲೆಗೆ ಬಿದಿದ್ದ, ಇಂದು ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಸೋಮಲಿಂಗ್ ಕಿರದಳಿ ಅವರ ನೇತೃತ್ವದಲ್ಲಿ ಕೊಲೆ ನಡೆದ ಸ್ಥಳ ಪರಿಶೀಲನೆಗೆಂದು ಕರೆದೊಯ್ದಿದಿದ್ದಾಗ ಆರೋಪಿ ಚಾಕುವಿನಿಂದ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ.
ಈ ವೇಳೆಯಲ್ಲಿ ಠಾಣೆಯ ಅಧೀಕ್ಷಕರಾದ ಸೋಮಲಿಂಗ್ ಕಿರದಳಿ ಅವರು ಆತ್ಮ ರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹೊಡೆದಿದ್ದಾರೆ.
ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಹವಾಲ್ದಾರ್ ಬೇಗ್ ಮತ್ತು ಅಂಬಾಜಿ ಅವರಿಗೆ ಗಾಯವಾಗಿದ್ದು ಖಾಸಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಾಯಗೊಂಡ ಆರೋಪಿಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.