ಕೊರೋನಾ‌ ನಿಯಂತ್ರಣಕ್ಕೆ‌ ಆರೋಗ್ಯ ಹಸ್ತ ಅಗತ್ಯ: ಆರ್. ಧೃವನಾರಾಯಣ್

0
41

ಕಲಬುರಗಿ: ಕರ್ನಾಟಕ ರಾಜ್ಯದಲ್ಲಿ ಏರುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ ಅಂದರೆ‌ ಪ್ರತಿನಿತ್ಯ ಹತ್ತು ಸಾವಿರ ಜನರಿಗೆ ಸೋಂಕು ತಗುಲುತ್ತಿದ್ದು ಕಾಂಗ್ರೆಸ್ ಪಕ್ಷ ಮನೆಮನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡುವ ಉದ್ದೇಶದಿಂದ ಆರೋಗ್ಯ ಹಸ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಪಕ್ಷದ ಆರೋಗ್ಯ ಹಸ್ತ ನಿರ್ವಹಣೆ ಅಧ್ಯಕ್ಷರಾದ ಹಾಗೂ‌ ಮಾಜಿ ಸಂಸದರಾದ ಆರ್ ಧೃವನಾರಾಯಣ್ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡುತ್ತ, ಪಕ್ಷದ ವತಿಯಿಂದ ಈಗಾಗಾಲೇ 15000 ಕಾಂಗ್ರೆಸ್ ಕಾರ್ಯಕರ್ತರನ್ನು ನಿಯೋಜಿಸಲಾಗಿದ್ದು ಅವರಿಗೆ ತರಬೇತಿ ನೀಡಲು ನುರಿತ ತಜ್ಞರನ್ನೂ ನೇಮಿಸಲಾಗಿದೆ. ಚಾಮರಾಜನಗರದಿಂದ ಬೀದರ್ ವರೆಗೆ ಈ ಕಾರ್ಯಕ್ರಮ ನಡೆಸಲಾಗುತ್ತಿದ್ದು 15000 ಕಾರ್ಯಕರ್ತರಿಗೆ ತಲಾ ಒಂದು ಲಕ್ಷ ರೂಪಾಯಿ ವಿಮೆಯನ್ನು ಶಾಸಕರಾದ ಹಾಗೂ ಆರೋಗ್ಯ ಹಸ್ತ ಉಸ್ತುವಾರಿಯಾದ ಅಜಯ್ ಸಿಂಗ್ ವೈಯಕ್ತಿಕವಾಗಿ ಮಾಡಿಸಿದ್ದಾರೆ. ತಲಾ ಗ್ರಾಮ ಪಂಚಾಯತಿಗೆ ಒಂದು ಕಿಟ್ ಕೊಡಲಾಗಿದ್ದು ಇದುವರೆಗೆ 8400 ಕಿಟ್ ವಿತರಿಸಲಾಗಿದ್ದು 220 ವೈದ್ಯರನ್ನು ಈ ಪ್ರಕ್ರಿಯೆಗೆ ನೇಮಿಸಲಾಗಿದೆ. ಒಟ್ಟಾರೆ ಈ ಕಾರ್ಯಕ್ರಮಕ್ಕೆ ಸುಮಾರು 6 ಕೋಟಿ ವೆಚ್ಚವಾಗಲಿದ್ದು ಈ ಹಣವನ್ನು ಕಾಂಗ್ರೆಸ್ ಪಕ್ಷದ ನಾಯಕರು ದೇಣಿಗೆ ನೀಡಿದ್ದಾರೆ ಎಂದು ಧೃವನಾರಾಯಣ್ ವಿವರಿಸಿದರು.

Contact Your\'s Advertisement; 9902492681

ಕೊರೋನಾ ನಿಯಂತ್ರಣಕ್ಕೆ ಸರಕಾರ ಕ್ರಮ ಕೈಗೊಂಡಿಲ್ಲ ಎಂದು ದೂರಿದ ಮಾಜಿ ಸಂಸದರು ಆರೋಗ್ಯ ಇಲಾಖೆ ನೋಡಿಕೊಳ್ಳುವ ಸಚಿವರು ಯಾರು ಎನ್ನುವುದೇ ತಿಳಿಯುತ್ತಿಲ್ಲ. ರಾಮುಲು, ಸುಧಾಕರ್, ಅಶೋಕ ಹಾಗೂ ಸುರೇಶ್ ಕುಮಾರ ಅವರುಗಳೆಲ್ಲ ಕೆಲ ಕಾಲ ಉಸ್ತುವಾರಿ ನೋಡಿಕೊಂಡಿದ್ದರು. ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯಕೀಯ ಉಪಕರಣಗಳ ಕೊರತೆಯಿದೆ. ಕೊರೋನಾ ನಿಯಂತ್ರಣದ ಹೆಸರಲ್ಲಿ‌ ಕೋಟಿಗಟ್ಟಲೇ ಸಾರ್ವಜನಿಕ ಹಣ ದುರುಪಯೋಗವಾಗಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಈಗಾಗಾಲೇ ಈ ಕುರಿತು ದಾಖಲೆ ಬಿಡುಗಡೆ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ರಾಜ್ಯದಿಂದ ಆಯ್ಕೆಯಾಗಿ ಹೋದ 25 ಸಂಸದರಿಗೆ ಮೋದಿ ಎದುರು ಮಾತನಾಡಿ ರಾಜ್ಯಕ್ಕೆ ಬರಬೇಕಾಗಿರುವ ಪರಿಹಾರ ಹಾಗೂ ಅನುದಾನ‌ ತರುವಲ್ಲಿ ವಿಫಲರಾಗಿದ್ದಾರೆ. ಮಹಾರಾಷ್ಟ್ರ, ಗುಜರಾತ್ ನಂತರ ಕರ್ನಾಟಕ ಅತಿಹೆಚ್ಚು ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ‌ ಕಳಿಸುವ ರಾಜ್ಯವಾಗಿದ್ದು ಅನುದಾನ ಬಿಡುಗಡೆಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ರಾಜ್ಯ ಸರಕಾರ ಆರ್ಥಿಕವಾಗಿ‌ ದಿವಾಳಿಯಾಗಿದ್ದು ಸುಮಾರು 30,000 ಕೋಟಿ ಸಾಲ ಮಾಡಲು ನಿರ್ಧರಿಸಲಾಗಿದೆ.ಈಗಾಗಲೇ ರಾಜ್ಯದ ಸಾಲ 3.68 ಲಕ್ಷ ಕೋಟಿ ಇದ್ದು ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೆ 62, 402 ರೂಪಾಯಿ ಸಾಲ ಇದೆ.ಈಗ ಮತ್ತೆ ಸಾಲ ಮಾಡಿದರೆ ಮತ್ತಷ್ಟು ಹೊರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

23.9 % ಜಿಡಿಪಿ ತಳಮಟ್ಟಕ್ಕೆ ತಲುಪಿದ್ದು ಜಗತ್ತಿನಲ್ಲಿಯೇ ಭಾರತ ಅತ್ಯಂತ ಕೆಳಮಟ್ಟದ ಜಿಡಿಪಿ ಹೊಂದಿರುವ ರಾಜ್ಯವಾಗಿದೆ. ಆರ್ಥಿಕ ಸುಸ್ತಿರತೆಗೆ ಕಾರ್ಯಕ್ರಮ ರೂಪಿಸುವಲ್ಲಿ ಕೇಂದ್ರ ವಿಫಲವಾಗಿದೆ ಎಂದ ಧೃವನಾರಾಯಣ್, ಇತ್ತೀಚಿಗೆ ಆರ್ಥಿಕ ಸಚಿವರು 20,000 ಲಕ್ಷ ಹಣ ಆತ್ಮ ನಿರ್ಭರ ಅಡಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.ಈಗಾಗಲೇ ಕುಸಿದಿರುವ ಆರ್ಥಿಕ‌ ವ್ಯವಸ್ಥೆ ಗೆ ಇದು ಯಾವುದೇ ರೀತಿ‌ ಪ್ರಯೋಜನವಾಗದೇ ಇದು ಆತ್ಮಘಾತುಕವಾಗಲಿದೆ‌ ಎಂದರು.

ಯುಪಿಎ 1-2 ಹಾಗೂ ರಾಜ್ಯದ ಸಿದ್ದರಾಮಯ್ಯ ಸರಕಾರ ಬಡವರ ಪರ ಕಾರ್ಯಕ್ರಮ ಕೈಗೊಂಡಿತ್ತು ಎಂದು ನೆನಪಿಸಿಕೊಂಡ ಮಾಜಿ‌ ಸಂಸದರು, ಕಾಂಗ್ರೆಸ್ ಪಕ್ಷ‌ ಕೊರೋನಾದ ಸಂಕಷ್ಟದಲ್ಲಿರುವ ಜನರಿಗೆ ಆಹಾರ ಧಾನ್ಯ ವಿತರಿಸಿದೆ. ಔಷಧಿ ಹಾಗೂ ಇತರೆ ಅಗತ್ಯ ವಸ್ತುಗಳನ್ನು ವಿತರಿಸುವ ಮೂಲಕ ಒಟ್ಟು 7 ಲಕ್ಷ ಜನರಿಗೆ ನೆರವಾಗಿ ಪಕ್ಷ ತನ್ನ ಸಾಮಾಜಿಕ‌ ಜವಾಬ್ದಾರಿ ಮೆರೆದಿದೆ ಎಂದರು.

ಮುಖ್ಯ ಸಚೇತಕರಾದ ಹಾಗೂ ಶಾಸಕರಾದ ಅಜಯ್ ಅಜಯ್ ಸಿಂಗ್ ಮಾತನಾಡಿ, ಸರಕಾರ ಮಾಡಬೇಕಾಗಿರುವ ಈ ಕಾರ್ಯಕ್ರಮವನ್ನು ನಾವು ಮಾಡಬೇಕು ಎನ್ನುವ ಉದ್ದೇಶ ಹೊಂದಿರುವ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ ಅವರ ಅವರ ವಿಶೇಷ ಆಸಕ್ತಿಯಿಂದಾಗಿ ರಾಜ್ಯ 7400 ಗ್ರಾಮ ಪಂಚಾಯತಿಗಳಲ್ಲಿ ಹಾಗೂ ವಾರ್ಡ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಲಿದ್ದಾರೆ.

ರಾಜ್ಯದಲ್ಲಿ ಈಗ 6.50 ಲಕ್ಷ ಸೋಂಕಿತರಿದ್ದು, ಪ್ರತಿನಿತ್ಯ ದೇಶದಲ್ಲಿ 75,000 ಕೇಸುಗಳಿದ್ದರೆ ರಾಜ್ಯದಲ್ಲಿ 10,000 ಕೇಸ್ ಗಳು ವರದಿಯಾಗುತ್ತಿವೆ. ಜನರು ಈ ಕುರಿತು ಜಾಗೃತರಾಗಬೇಕಿರಬೇಕು. ಕೇರಳ ಹಾಗೂ ದಿಲ್ಲಿಯಲ್ಲಿ ಎರಡನೆಯ ಬಾರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಸೋಂಕು ಮತ್ತಷ್ಟು ತೀವ್ರವಾಗಲಿದ್ದು ಜನರಿಗೆ ತಿಳುವಳಿಕೆ ನೀಡಲು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಯೋಚಿಸಿ ಈ ಕಾರ್ಯಕ್ರಮ ನಿರೂಪಿಸಿದೆ. ಇದು ನಮ್ಮ ಪಕ್ಷದ ಅಳಿಲು ಸೇವೆ ಎಂದು ವಿವರಿಸಿದರು.

ಕೇಂದ್ರ ಸಚಿವ ಸುರೇಶ್ ಅಂಗಡಿ, ರಾಜ್ಯ ಸಭಾ ಸದಸ್ಯರಾದ ಅಶೋಕ್ ಗಸ್ತಿ, ಶಾಸಕರಾದ ನಾರಾಯಣ್ ರಾವ್ ಅವರ ಕೊರೋನಾದಿಂದ ಮರಣಹೊಂದಿದ್ದಾರೆ. ಸೋಂಕು ಈಗಾಗಲೇ ಸಮುದಾಯ ಮಟ್ಟದಲ್ಲಿ ವ್ಯಾಪಕವಾಗಿ ಹಬ್ಬಿದೆ.ಇದು ಇನ್ನೂ ಯಾವ ಮಟ್ಟಕ್ಕೆ ಹೋಗಿ ಮುಟ್ಟಲಿದೆ ಎನ್ನುವುದು ತಿಳಿಯದಾಗಿದೆ. ಸರಕಾರ ಈ ವಿಷಯವನ್ನು ಗಂಭೀರವಾಗಿ ತೆಗದುಕೊಳ್ಳದೇ ಹಣ‌ಲೂಟಿಯಲ್ಲಿ ತೊಡಗಿದೆ ಎಂದು‌ ಆರೋಪಿಸಿದರು.

ಸರಕಾರ ಕೇವಲ ಕೊವೀಡ್ ಕೇರ್ ಸೆಂಟರ್ ಮಾಡುತ್ತೇವೆ ಎಂದು ಹೇಳಿತೆ ಹೊರತು ಯಾವುದೆ ಕ್ರಮ ಕೈಗೊಳ್ಳಲಿಲ್ಲ ಹಾಗಾಗಿ ನಾನು ಹಾಗೂ ಅಜಯ್ ಸಿಂಗ್ ಅವರು ಚಿತ್ತಾಪುರ ಹಾಗೂ ಜೇವರ್ಗಿಯಲ್ಲಿ ಕೊವೀಡ್ ಕೇರ್ ಸೆಂಟರ್ ಮಾಡಿ ಬೆಡ್ ಕೊಟ್ಟಿದ್ದೇವೆ. ಅವುಗಳನ್ನು ಬಳಸಿಕೊಳ್ಳದೇ ಜನರ ಸಂಕಷ್ಟದ ಮೇಲೆ ಬರೆ ಎಳೆಯಲಾಗಿದೆ. ಇದು ಸರಕಾರದ ನಿರ್ಧಾರವಾಗಿದೆ. ಇದನ್ನು ಸರಕಾರದ ಕಾಳಜಿ ಎಂದು ಕರೆಯಬೇಕಾ? ಈಗ ಯಾರಿಗಾದರೂ ಸೋಂಕಿದ್ದರೆ ಅದು ರಾಜ್ಯ ಸರಕಾರಕ್ಕೆ‌ ಎಂದು ಕೆಪಿಸಿಸಿ ವಕ್ತಾರರಾದ ಹಾಗೂ ಶಾಸಕರಾದ ಶ್ರೀ‌ಪ್ರಿಯಾಂಕ್ ಖರ್ಗೆ ಖಾರವಾಗಿ ನುಡಿದರು.

ಇದೇ ಸಂದರ್ಭದಲ್ಲಿ ಕೊರೋನಾ ಜಾಗ್ರತೆ‌ ಕುರಿತಂತೆ ಎರಡು ನಿಮಿಷಗಳ ಸಾಕ್ಷ್ಯ ಚಿತ್ರ, ವಾರಿಯರ್ಸ್ ಗೆ ಆರೋಗ್ಯ ವಿಮೆಯ ಬಾಂಡ್ ಹಾಗೂ ಆರೋಗ್ಯ ಹಸ್ತ ಕಿಟ್ ಗಳಲ್ಲಿ ಪ್ರದರ್ಶಿಸಲಾಯಿತು.

ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಮುಖ್ಯ ಸಚೇತಕರಾದ ಅಜಯ್ ಸಿಂಗ್, ಶಾಸಕರಾದ ಖನೀಜ್ ಫಾತಿಮಾ, ಮಾಜಿ‌ಸಚಿವರಾದ ಶರಣಪ್ರಕಾಶ್ ಪಾಟೀಲ್, ಮಧುಸೂಧನ್, ಕಿರಣ್ ದೇಶಮುಖ್ ಸೇರಿದಂತೆ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here