ಅಂಧ ಬಾಲಕರ ಶಾಲೆಯಲ್ಲಿ ವಿಶ್ವ ದೃಷ್ಟಿ ದಿನಾಚರಣೆ

0
42

ಕಲಬುರಗಿ: ಸರಕಾರಿ ಅಂಧ ಬಾಲಕರ ಪ್ರೌಢ ಶಾಲೆ ಯಲ್ಲಿ “ವಿಶ್ವದೃಷ್ಟಿ ದಿನ” ಆಚರಣೆ ಕಾರ್ಯಕ್ರಮ ದಲ್ಲಿ ವಚನೊತ್ಸವ ಪ್ರತಿಷ್ಠಾನ ಯುವ ಘಟಕ ಅದ್ಯಕ್ಷ  ನ್ಯಾಯವಾದಿ ಶಿವರಾಜ ಅಂಡಗಿ ಮಾಸ್ಕ ವಿತರಿಸಿದರು.

ಈ ವೇಳೆಯಲ್ಲಿ ಕಣ್ಣಿನ ವಿಷಯ ದಲ್ಲಿ ನಿಷ್ಕ ಕಾಳಜಿ ಬೇಡ  ದೇಹದ ವಿವಿಧ ಅಂಗಗಳಲ್ಲಿ ಕಣ್ಣು ಪ್ರಮುಖ ವಾದ ಅಂಗ ಮುಂಜಾಗ್ರತೆ ಅಗತ್ ಏಕೆಂದರೆ ಆನ್ ಲೈನ್ ತರಗತಿಯಲ್ಲಿ‌ ಮಕ್ಕಳು ಮೊಬೈಲ್, ವಾಟ್ಸಪ, ಕಂಪೂಟರ ಬಳಕೆಯಲ್ಲಿ ಕಣ್ಣಿನ ಮೇಲೆ ಒತ್ತಡ ಬಿಳುವ ಕಾರಣ ಕಾಲ ಕಾಲಕ್ಕೆ ಕಣ್ಣಿನ ಪರೀಕ್ಷೆ ಮಾಡಿಸುವುದು ಅತಿ ಅವಶ್ಯಕ ಎಂಬ ಚೌಡೇಶ್ವರಿ ಸೇವೆ ಪ್ರತಿಷ್ಠಾನ ಕಾರ್ಯದರ್ಶಿ‌ ನ್ಯಾಯವಾದಿ ವಿನೋದ ಜೆನವೇರಿ ಮಾತನಾಡಿದರು.

Contact Your\'s Advertisement; 9902492681

ಹುಬ್ಬಳ್ಳಿಯ ವಿರ್ಗಾಡ ಕಂಪನಿಯ ಮ್ಯಾನೇಜರ್ ಪ್ರಕಾಶ ರಾಠೇೂಡ ತಮ್ಮ ಕಂಪನಿಯಿಂದ ತಯಾರಿಸಿದ ಸುಮಾರು 150 ಮಾಸ್ಕ‌ ಕೇೂರಿಯರ್ ನಿಂದ ಕಳುಹಿಸಿದ ಪ್ರಯುಕ್ತ ಇಂದು ಇಲ್ಲಿ ಅವರ ಹೆಸರಿನಲ್ಲಿ ವಿತರಿಸಲಾಯಿತು ಎಂದು ವಿನೋದ ಜೆನವೇರಿ ತಿಳಿಸಿದ್ದಾರೆ

ಅಂಧ ಶಿಕ್ಷಕರಾದ ಶಾಂತಪ್ಪ,ಶ್ರೀ ಕಾಂತ, ಜಗದೀಶ್, ಪ್ರಕಾಶ, ಹಾಗೂ ಶಾಲೆಯ ಸಿಬ್ಬಂದಿ ಗಳಾದ ನೀಲಾಂಬಿಕಾ, ಸಿತ್ಮಾ,ಜ್ಯೊತಿ,ಜಾಫರ,ಹಾಗೂ ವಚ್ಚಾ ಗ್ರಾಮದ ನಾಗರಿಕ ಮರೆಪ್ಪ ಉಪಸ್ಥಿತರಿದ್ದರು.

ನಂತರ ಅಪ್ಪನ ಗುಡಿಗೆ ಹೋಗಿ ಪ್ರೊ. ಶಿವರಾಜ ಶಾಸ್ತ್ರಿ ಅವರನ್ನು ಕಂಡು “ಮಡಿಕೆ  ಮುಕ್ಕಾದರೂ ಹಾಲು ಮುಕ್ಕಲ್ಲ” ಎಂಬಂತೆ ಶಾಸ್ತ್ರಿ ಅವರ ಅಂಧತ್ವವು ಅವರ ಕಾರ್ಯ ಸಾಧನೆಗೆ ಅಡ್ಡಿ ಆಗಿಲ್ಲ ಎನುತ್ತಾ ಕಣ್ಣುಗಳು ಇರದೇ ಇದ್ದರೂ ಕಲಬುರಗಿ ಜನ ಕಣ್ಣೆತ್ತಿ  ತನ್ನ ಕಡೆ ನೋಡುವಂತೆ  ಶ್ರೀ ಶರಣಬಸವೇಶ್ವರ ಪುರಾಣ ಪ್ರವಚನ ಮಾಡುತ್ತಾ ಹಾಗೂ ಶ್ರೀ ಶರಣಬಸವೇಶ್ವರ ಸಂಸ್ಥೆಯ ಅಂತರವಾಣಿ ನಿರ್ದೇಶಕ ರಾಗಿ ಜನ ಕಿವಿ ಆಲಿಸಿ ಕೇಳುವಂತಾಹ  ಕಾರ್ಯಕ್ರಮ ನಡೆಸುತ್ತಿರುವ ಪ್ರೊ. ಶಿವರಾಜ ಶಾಸ್ತ್ರಿ ಹೇರೂರ ಅವರಿಗೂ ಹಾಗೂ ಅವರ ಕುಟುಂಬದ ಸದಸ್ಯರಿಗೂ ಮಾಸ್ಕ ವಿತರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here