ಕಲಬುರಗಿ: ರಾಜ್ಯ ಸರಕಾರ ಕರ್ನಾಟಕ ಉರ್ದು ಅಕಾಡೆಮಿಯ ಸದಸ್ಯ ಮಂಡಳಿ ರದ್ದಾಗಿ ಒಂದು ವರೆ ವರ್ಷಕ್ಕೂ ಅಧಿಕ ಕಾಲ ಕಳೆದಿದ್ದು, ರಾಜ್ಯ ಸರಕಾರ ಇದುವರೆಗೆ ಕರ್ನಾಟಕ ಉರ್ದು ಅಡಮಿಗೆ ನೂತನ ಸದಸ್ಯರ ಮಂಡಳಿ ರಚಿಸದಿರುವುದು ಖಂಡನೀಯ, ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯಸರಕಾರಕ್ಕೆ ಉರ್ದು ಅಕಡಮಿಯ ಕಾಳಜಿ ಇಲ್ಲದಿರುವುದು ತೊರಿಸುವಂತಹದಾಗಿದೆ ಎಂದು ಹೈದಾರಾಬಾದ್ ಸೋಷಿಯಲ್ ಜಾಗೃತಿ ಫೋರಂ ಅಧ್ಯಕ್ಷರಾದ ಸಾಜಿದ್ ಅಲಿ ರಂಜೋಳ್ವಿ ಆರೋಪಿಸಿದರು.
ಇತ್ತೀಚಿಕೆ ಕಲ್ಯಾಣ ಕರ್ನಾಟಕ ವಿಮೋಚನ ದಿನದ ಆಂಗವಾಗಿ ಕಲಬುರಗಿಗೆ ಆಮಿಸಿದ ಮುಖ್ಯಮಂತ್ರಿಗಳಿಗೆ ಈ ಕುರಿತು ಮನವರಿಗೆ ಮಾಡಿಕೊಡಲಾಗಿತು, ಆದರೂ ಸಹ ಸರಕಾರದಿಂದ ಈ ಕುರಿತುಯಾವುದೇ ಸಕರಾತ್ಮಕ ಸ್ಪಂದನೆ ಸಿಗುತ್ತಿಲ್ಲ. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಪತ್ರ ಸಲ್ಲಿಸಿದೇವೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಸಹ ಮಾಡಲಾಗಿದೆ ಎಂದು ತಿಳಿಸಿದರು.
ಐತಿಹಾಸಿಕ ಹಿನ್ನೆಲೆಹೊಂದಿರುವ ಉರ್ದು ಭಾಷೆಯನ್ನು ಕಲ್ಯಾಣ ಕರ್ನಾಟಕದಲ್ಲಿ ಎರಡನೇ ದರ್ಜೆಯ ಭಾಷೆಯಾಗಿದೆ. ಇಂತಹ ಮಂಡಳಿಗೆ ಕಳೆದ ಒಂದು ವರ್ಷದಿಂದ ನೂತನ ಸಮಿತಿ ರಚಿಸದಿರುವುದು ಸರಕಾರದ ಈ ನಡೆ ಉರ್ದು ಸಾಹಿತಿ, ಲೇಖಕರು, ಕವಿಗಳು, ಶಿಕ್ಷಕರು ಹಾಗೂ ಭಾಷ ಪ್ರೀಯರಿಗೆ ಭಾರಿ ನೋವು ಉಂಟು ಮಾಡಿದೆ ಎಂದು ಅಸಮಧಾನ ವ್ಯಕ್ತಪಡಿಸಿರು.
ತತಕ್ಷಣ ಉರ್ದು ಅಕಾಡೆಮಿಗೆ ನೂತನ ಸಮಿತಿ ರಚಿಸಿ ಕುಂಠಿತ ವಾಗಿರುವ ಚಟುವಟಿಕೆಗಳನ್ನು ಸರಕಾರ ಮುವರ್ಜಿವಹಿಸಿ ಹೆಚ್ಚು ಒತ್ತು ನೀಡಬೇಕು. ಈ ಕುರಿತು ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಬೀದಿಗೆ ಇಳಿದು ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಅಮಜ್ ಜಾವೀದ್, ಫೈಮೊದ್ದೀನ್ ಪೀರಜಾದ, ಸೈಯದ್ ತೌಫೀಕ್ ದೇಸಾಯಿ, ವಹೀದ್ ಅಂಜುಮ್, ಡಾ. ಚಂದಾ ಹುಸೇನಿ, ಶಕೀಲ್ ಸರಡಗಿ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.