ಶಹಾಬಾದ:ಇತ್ತಿಚ್ಚಿಗೆ ಸುರಿದ ಮಳೆಯಿಂದ ನಗರದ ಹಳೆಶಹಾಬಾದಿಂದ ರಾಮಘಡ ಆಶ್ರಯ ಕಾಲೋನಿಗೆ ಸಂಪರ್ಕ ಕಲ್ಪಿಸುವ ಸೇತುವೆ ಬಳಿ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ.ಅದನ್ನು ಮತ್ತೆ ನಿರ್ಮಾಣ ಮಾಡಬೇಕೆಂದು ಬಿಜೆಪಿ ಮುಖಂಡ ಶಿವುಗೌಡ ಹಾಗೂ ಕಸಾಪ ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಸತತವಾಗಿ ಸುರಿದ ಮಳೆಯಿಂದ ಸೇತುವೆಗೆ ಸಂಪರ್ಕ ಹೊಂದಿರುವ ರಸ್ತೆ ಸಂಪೂರ್ಣ ಕೊಚ್ಚಕೊಂಡು ಹೋಗಿದ್ದರಿಂದ ಸಾರ್ವಜನಿಕರು ಪ್ರಯಾಣ ಮಾಡಲು ಪರದಾಡುವಂತಾಗಿದೆ.ರಾಮಘಡ ಆಶ್ರಯ ಕಾಲೋನಿಗೆ ಹೋಗಲು ಎರಡು ಮಾರ್ಗಗಳಿದ್ದು, ಒಂದು ಶಾಂತನಗರಿದಂದ ಹೋಗಬೇಕಾದರೆ ರಸ್ತೆಯಿಲ್ಲ. ಹಳೆಶಹಾಬಾದ ಮೂಲಕ ತೆರಳಲು ಡಾಂಬರೀಕರಣ ರಸ್ತೆ ಇದೆ.ಇದೀಗ ರಸ್ತೆ ಮಳೆಗೆ ಕೊಚ್ಚಿ ಹೋಗಿದ್ದರಿಂದ ಏನು ಮಾಡಬೇಕು ಎಂಬುದು ಇಲ್ಲಿನ ಜನರಿಗೆ ತಿಳಿಯದಂತಾಗಿದೆ.
ಕಳೆದ ಎರಡು ದಿನಗಳಿಂದ ಮತ್ತೆ ಮಳೆಯಾಗುತ್ತಿದೆ.ಈ ರಸ್ತೆ ಕಿತ್ತು ಹೋಗಿದೆ. ಸೇತುವೆಯ ಪಕ್ಕದಲ್ಲಿಯೂ ಮಣ್ಣಿನ ಸವಕಳಿಯಾಗಿದ್ದು, ಸೇತುವೆಗೆ ದಕ್ಕೆಯಾಗಲಿದೆ.ಕಂಕರ್ಗಳು ಮೇಲೆ ತೇಲಿವೆ.ಅಲ್ಲದೇ ಹಳ್ಳದ ಸಮೀಪದಲ್ಲಿ ರಸ್ತೆ ಹಾಳಾಗದಂತೆ ಫಿಲಿಂಗ್ ಮಾಡಿದ ಕಲ್ಲುಗಳು ನೀರಿನ ರಭಸಕ್ಕೆ ಕಳಚಿ ಹೋಗಿದ್ದು ರಸ್ತೆ ಬಿರುಕಿ ಮೂಡಿ ಹಾಳಾಗಿ ಹೋಗಲಿದೆ.ಆದ್ದರಿಂದ ಲೋಕೋಪಯೋಗಿ ಇಲಾಖೆಯ ಧಿಕಾರಿಗಳು ಆದಷ್ಟು ಬೇಗನೆ ದುರಸ್ಥಿ ಮಾಡಲು ಮುಂದಾಗಬೇಕಿದೆ.ಇಲ್ಲದಿದ್ದರೇ ಸಾರ್ವಜನಿಕರಿಗೆ ಅನಾನುಕೂವಾಗುತ್ತದೆ.ಕೂಡಲೇ ಗುಣಮಟ್ಟದ ಕಾಮಗಾರಿ ಕೈಗೊಂಡು ರಸ್ತೆ ದುರಸ್ತಿ ಮಾಡಬೇಕೆಂದು ಶಿವುಗೌಡ ಹಾಗೂ ಮಲ್ಲಿಕಾರ್ಜುನ್ ಪೂಜಾರಿ ಆಗ್ರಹಿಸಿದ್ದಾರೆ.