ತಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ -ಅಕ್ಟೋಬರ್ 17ರಂದು ಚುನಾವಣೆ ನಿಗದಿ

0
311

ಶಹಾಬಾದ: ರಾಜ್ಯದಲ್ಲಿಯೇ ಅತ್ಯಂತ ಚಿಕ್ಕದಾದ ತಾಲೂಕು ಶಹಾಬಾದನ ತಾಪಂಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸರಕಾರ ಮೀಸಲಾತಿ ಪಟ್ಟಿ ಪ್ರಟಿಸಿದ್ದು, ಇದೇ ಅಕ್ಟೋಬರ್ 17 ರಂದು ಚುನಾವಣೆ ನಿಗದಿಪಡಿಸಲಾಗಿದೆ. ಮೀಸಲಾತಿ ಪ್ರಕಟಿಸುತ್ತಿದ್ದಂತೆ ಆಕಾಂಕ್ಷಿಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಇಲ್ಲಿನ ತಾಪಂ ಅಧ್ಯಕ್ಷ ಸ್ಥಾನ- ಪ್ರವರ್ಗ-ಎ ಮಹಿಳೆ, ಉಪಾಧ್ಯಕ್ಷ ಸ್ಥಾನ- ಅನುಸೂಚಿತ ಜಾತಿ ಮಹಿಳೆಗೆ ಮೀಸಲಾಗಿದೆ.ಇದರಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೂ ಯಾವುದೇ ಅಧಿಕಾರಿವಿಲ್ಲದೇ, ಕೈಕಟ್ಟಿ ಕುಳಿತ್ತಿದ್ದ ಸದಸ್ಯರಲ್ಲಿ ರಾಜಕೀಯ ಚಟುವಟಿಕೆಗಳು ಚುರುಕಾಗಿದೆ.ಇಲ್ಲಿನ ತಾಪಂಯಲ್ಲಿ ಕೇವಲ 3 ಸ್ಥಾನಗಳನ್ನು ಹೊಂದಿದ್ದು, ಅದರಲ್ಲಿ 2 ಕಾಂಗ್ರೆಸ್, 1 ಬಿಜೆಪಿ ಸದಸ್ಯ ಹೊಂದಿದೆ.

Contact Your\'s Advertisement; 9902492681

ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ : ಅಧ್ಯಕ್ಷ ಸ್ಥಾನವು ಪ್ರವರ್ಗ-ಎ ಮಹಿಳೆಗೆ ಮೀಸಲಾಗಿರುವುದರಿಂದ ಕಾಂಗ್ರೆಸ್ನ ಇಬ್ಬರು ಸದಸ್ಯರು ಪ್ರವರ್ಗ-ಎ ಸೇರಿದವರಾಗಿದ್ದಾರೆ. ಹೊನಗುಂಟಾ ತಾಪಂ ಸದಸ್ಯೆ ಸಂಗೀತಾ ದೇವೆಂದ್ರ ಕಾರೊಳ್ಳಿ, ಮರತೂರ ತಾಪಂ ಸದಸ್ಯೆ ಮೇರಜಾಬೇಗಂ ಶೇರ್ ಅಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿದ್ದು, ಕೇವಲ 4 ತಿಂಗಳ ಅವಧಿಗಾಗಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸನ ಇವರಿಬ್ಬರಲ್ಲಿಯೇ ತೀವ್ರ ಪ್ರಯತ್ನ ಆರಂಭವಾಗಿದೆ.ಆದರೆ ಅಧ್ಯಕ್ಷ ಸ್ಥಾನ ಒಲಿಯಬೇಕಾದರೆ ಶಾಸಕ ಪ್ರಿಯಾಂಕ್ ಖರ್ಗೆ ಅವರ ಆಶೀರ್ವಾದ, ಅಲ್ಲದೇ ಮುಖಂಡ ವಿಜಯಕುಮಾರ ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಶೀದ್ ಮರ್ಚಂಟ್, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮರತೂರ ಅವರ ಸಹಕಾರದಿಂದ ಸಾಧ್ಯ. ಈಗಾಗಲೇ ಎಪಿಎಂಸಿ ಅಧ್ಯಕ್ಷ ಸ್ಥಾನವನ್ನು ಮರತೂರ ಗ್ರಾಮದ ಸಿದ್ದುಗೌಡ ಅಫಜಲಪೂರಕರ್ ಅವರನ್ನು ನೇಮಕ ಮಾಡಲಾಗಿದ್ದು, ಅದೇ ಗ್ರಾಮದ ಇನ್ನೊಬ್ಬರಿಗೆ ಸ್ಥಾನ ನೀಡದೇ, ಹೊನಗುಂಟಾದ ತಾಪಂ ಸದಸ್ಯೆಗೆ ಅಧ್ಯಕ್ಷ ಸ್ಥಾನ ನೀಡಲಿದ್ದಾರೆ ಎಂದು ಕೇಳಿ ಬರುತ್ತಿದೆ.ಅಲ್ಲದೇ ಶಹಾಬಾದ ಕಲಬುರಗಿ ಗ್ರಾಮೀಣ ಮತಕ್ಷೇತ್ರಕ್ಕೆ ಬರುವುದರಿಂದ ಶಹಾಬಾದನ ಗ್ರಾಮೀಣ ತಾಪಂ ಸದಸ್ಯರೆಂದರೇ ಮರತೂರಿನ  ಮೇರಜಾಬೇಗಂ ಒಬ್ಬರೇ.ಅವರಿಗೆ ಅಧ್ಯಕ್ಷ ಸ್ಥಾನ ಒಲಿಯುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ರಾಜಕೀಯ ಚದುರಂಗದಾಟದ ಲೆಕ್ಕಾಚಾರದಲ್ಲಿ ಅದಲಿ-ಬದಲಿಯೂ ಆಗಬಹುದು.ಅದಕ್ಕೆ ಕಾದು ನೋಡಬೇಕಷ್ಟೇ ?

ಉಪಾಧ್ಯಕ್ಷ ಸ್ಥಾನ ಅವಿರೋಧ ಆಯ್ಕೆ: ಕೇವಲ ಮೂರು ಸದಸ್ಯ ಬಲ ಹೊಂದಿರುವ ತಾಪಂಯಲ್ಲಿ ಇಬ್ಬರು ಪ್ರವರ್ಗ-ಎ ಗೆ ಸೇರಿದವರಾಗಿದ್ದು, ಅವರು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದರೇ, ಉಪಾಧ್ಯಕ್ಷ ಸ್ಥಾನ ಅನುಸೂಚಿತ ಜಾತಿ ಮಹಿಳೆಗೆ ಮೀಸಲಾಗಿರುವುದರಿಂದ ಉಳಿದಿರುವ ಒಬ್ಬರೇ ಸದಸ್ಯೆ ಭಂಕೂರಿನ ತಾಪಂ ಸದಸ್ಯೆ ವಿಜಯಲಕ್ಷ್ಮಿ ಸುರೇಶ ಚವ್ಹಾಣ ಪೈಪೋಟಿ ಇಲ್ಲದೇ ಅವಿರೋಧವಾಗಿ ಆಯ್ಕೆಯಾಗುವುದು ಮಾತ್ರ ಖಚಿತವಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಗಿಳಿದ ಸದಸ್ಯರಲ್ಲಿ ಅಧ್ಯಕ್ಷ ಸ್ಥಾನ ಕಳೆದುಕೊಂಡರೂ, ಸ್ಥಾಯಿ ಸಮಿತಿ ಅಧ್ಯಕ್ಷರಾಗುವುದು ಮಾತ್ರ ಶತಸಿದ್ಧ. ಒಟ್ಟು ಮೂರು ಸದಸ್ಯರು ಒಂದೊಂದು ಸ್ಥಾನವನ್ನು ಪಡೆಯುವುದು ಮಾತ್ರ ಗ್ಯಾರಂಟಿ. ತಾಪಂಯ ಮೂರು ಸ್ಥಾನಗಳು ಮಹಿಳೆಯರೇ ಹೊಂದಿದ್ದು, ಇವರಲ್ಲಿಯೇ ಚುನಾವಣೆ ನಡೆಯುತ್ತಿರುವುದು ಮಾತ್ರ ಸಾರ್ವಜನಿಕರ ನಗುವಿಗೆ ಕಾರಣವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here