ಆಲ್ದಾಳ ಗ್ರಾಮದಲ್ಲಿನ ಮತದಾನ ಕೇಂದ್ರ ಸ್ಥಳ ಬದಲಿಸಿದರೆ ಉಗ್ರ ಹೋರಾಟ: ರಮೇಶ ದೊರೆ

0
39

ಸುರಪುರ: ತಾಲೂಕಿನ ಆಲ್ದಾಳ ಗ್ರಾಮದಲ್ಲಿನ ಮತದಾನ ಕೇಂದ್ರ ೪೮ರ ಸ್ಥಳ ಬದಲಾವಣೆಯನ್ನು ಚುನಾವಣಾ ಆಯೋಗ ಕೈಬಿಡಬೇಕೆಂದು ಆಗ್ರಹಿಸಿ ಆಲ್ದಾಳ ಗ್ರಾಮಸ್ಥರು ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ವಿಭಾಗದ ಪ್ರಧಾನ ಕಾರ್ಯದರ್ಶಿ ರಮೇಶ ದೊರೆ ಮಾತನಾಡಿ,ಕಳೆದ ನಾಲ್ಕು ದಶಕದಿಂದ ಆಲ್ದಾಳ ಗ್ರಾಮದಲ್ಲಿನ ಮತದಾನ ಬೂತ್ ಸಂಖ್ಯೆ ೪೮ನ್ನು ಗ್ರಾಮದ ವಾರ್ಡ ಸಂಖ್ಯೆ ೨ರ ಅಂಗನವಾಡಿ ಕೇಂದ್ರದಲ್ಲಿಯೆ ತೆರೆಯಲಾಗುತ್ತದೆ,ಆದರೆ ಈಗ ಬೂತ್ ಸಂಖ್ಯೆ ೪೮ನ್ನು ಬೇರೆಡೆಗೆ ಸ್ಥಳಾಂತರಿಸುತ್ತಿರುವುದಾಗಿ ತಿಳಿದುಬಂದಿದೆ.ಇದರಿಂದ ಗ್ರಾಮದಲ್ಲಿನ ಎರಡೂ ಬೂತ್‌ಗಳನ್ನು ಒಂದೆಕಡೆಗೆ ತೆರೆದಲ್ಲಿ ಗ್ರಾಮದಲ್ಲಿನ ಮತದಾರರು ಮತದಾನಕ್ಕೆ ಒಂದೇ ಕಡೆ ಹೋಗಲು ತೊಂದರೆಯಾಗಲಿದೆ.ಅಲ್ಲದೆ ಎರಡೂ ಬೂತ್‌ಗಳನ್ನು ಒಂದೇಕಡೆಗೆ ತೆರೆದಲ್ಲಿ ಜನಜಂಗುಳಿ ಸೇರಿ ಸಮಸ್ಯೆಯಾಗುತ್ತದೆ.

Contact Your\'s Advertisement; 9902492681

ಅಲ್ಲದೆ ಸದ್ಯ ಕೊರೊನಾ ಸಂದರ್ಭವಿರುವುದರಿಂದ ಜನರು ಸಾಮಾಜಿಕ ಅಂತರವನ್ನು ಕಾಪಾಡುವುದು ಮುಖ್ಯವಾಗಿದೆ,ಹೀಗಿರುವಾಗ ಸದ್ಯ ಇರುವ ಸ್ಥಳವನ್ನು ಬೇರೆಡೆಗೆ ಸ್ಥಳಾಂತರ ಮಾಡುವುದರ ಹಿಂದೆ ಏನಾದರು ಹುನ್ನಾರ ಇರಬಹುದೆಂದು ಅನುಮಾನ ಮೂಡುತ್ತಿದೆ.ಆದ್ದರಿಂದ ಯಾವುದೇ ಕಾರಣಕ್ಕು ಬೂತ್ ೪೮ನ್ನು ಸದ್ಯ ಇರುವ ವಾರ್ಡ ಸಂಖ್ಯೆ ೨ರ ಹೊಸ ಅಂಗನವಾಡಿ ಕೇಂದ್ರದಲ್ಲಿಯೇ ಮುಂದು ವರೆಸಬೇಕು ಬದಲಾಯಿಸಿದಲ್ಲಿ ಹೋರಾಟವನ್ನು ತೀವ್ರಗೊಳಿಸುವ ಜೊತೆಗೆ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದರು.

ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ಅವರ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವೈಜನಾಥ ಸಾಹುಕಾರ ಅಯ್ಯಣ್ಣಗೌಡ ಕಿಲ್ಲೆದಾರ ಸಿದ್ದಪ್ಪ ಪೂಜಾರಿ ತಿರುಪತಿ ಹುದ್ದಾರ ತಿಪ್ಪಣ್ಣ ಹುಲ್ಕಲ್ ದುರ್ಗಪ್ಪ ಹುಲ್ಕಲ್ ಬಸವರಾಜ ಸಕ್ರೆಪರ್ ಮಂಜುನಾಥ ಹುದ್ದಾರ ಗೋವಿಂದರಾಜ ಹುದ್ದಾರ ಶರಣಪ್ಪ ಹುದ್ದಾರ ನಾಗರಾಜ ಹುದ್ದಾರ ಶಂಕ್ರಪ್ಪ ಹುಲ್ಕಲ್ ಮಲ್ಲಪ್ಪ ಹುದ್ದಾರ ಸೋಮಣ್ಣ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here