ಮಳೆಯಿಂದ ಹಾನಿಗೀಡಾದ ರಸ್ತೆಗಳ ವೀಕ್ಷಣೆ ನಡೆಸಿದ ತಹಸೀಲ್ದಾರ ನಿಂಗಣ್ಣ ಬಿರಾದಾರ್

0
25

ಸುರಪುರ: ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿದು ದೊಡ್ಡ ಪ್ರಮಾಣದಲ್ಲಿ ನಷ್ಟವುಂಟು ಮಾಡಿದೆ.ತಾಲೂಕಿನಲ್ಲಿ ಸುರಿದ ಮಳೆಗೆ ಅನೇಕ ಮನೆಗಳು ಬಿದ್ದಿದ್ದು,ರಸ್ತೆಗಳು ಕೊಚ್ಚಿಕೊಂಡು ಹೋಗಿವೆ ಅಲ್ಲದೆ ನೂರಾರು ಎಕರೆ ರೈತರ ಬೆಳೆಗಳು ಹಾಳಾಗಿವೆ.ಈ ಎಲ್ಲವುಗಳನ್ನು ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಅವರು ಭೇಟಿ ನೀಡಿ ವೀಕ್ಷಿಸಿದರು.

ತಾಲೂಕಿನ ಸಿದ್ದಾಪುರ ಮಾರ್ಗವಾಗಿ ಗೋಗಿ ಶಹಾಪುರಕ್ಕೆ ತಲುಪುವ ರಸ್ತೆಯು ಮಳೆಯಿಂದ ಹಾಳಾಗಿರುವುದನ್ನು ವೀಕ್ಷಣೆ ನಡೆಸಿದರು.ಸಿದ್ದಾಪುರ ಬಳಿಯಲ್ಲಿನ ಹಳ್ಳವು ನೀರಿನ ರಭಸಕ್ಕೆ ಕಿತ್ತುಕೊಂಡು ಹೋಗಿದ್ದು ರಸ್ತೆ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗಿದೆ.ಈ ಎಲ್ಲವನ್ನು ವೀಕ್ಷಿಸಿದ ತಹಸೀಲ್ದಾರ್‌ವರು ತಾಲೂಕಿನಲ್ಲಿ ಹಾನಿಗೀಡಾದ ಎಲ್ಲವನ್ನು ವರದಿ ಮಾಡಿ ಸರಕಾರಕ್ಕೆ ಕಳುಹಿಸಿಕೊಡುವುದಾಗಿ ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಗುರುಬಸಪ್ಪ ಗ್ರಾಮಲೆಕ್ಕಿಗರಾದ ಪ್ರದೀಪ ನಾಲ್ವಡೆ ಸಿದ್ದಯ್ಯಸ್ವಾಮಿ ದುಶ್ಯಂತ ಹಾಗು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಶ್ರೀನಿವಾಸ ಡಿ.ನಾಯಕ ಮಲ್ಲಿಕಾರ್ಜು ಕುರಿ ಶರಣಪ್ಪ ಹೆಮ್ಮಡಗಿ ಮಹಾರಾಜ ಹೆಮ್ಮಡಗಿ ಮಹಾಂತೇಶ ಸವಳಪಟ್ಟಿ ನಿಂಗಪ್ಪ ಕುರಿ ಬಲಭೀಮ ನಾಯ್ಕೋಡಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here