ಸಾಮರಸ್ಯದಿಂದ ಬದುಕಿಗೆ ನೆಮ್ಮದಿ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು

0
16

ಭಾಲ್ಕಿ: ನಾಗೂರು(ಬಿ) ಮಂಡಲ ಕಂಗಟಿ ಗಡಿ ರಾಜ್ಯ ತೆಲಂಗಾಣದಲ್ಲಿ ಜರುಗಿದ ಸರ್ವಶಿವಶರಣೆಯರ ಸ್ಮರಣೊತ್ಸವ ಮತ್ತು ಮಾತೆ ಭಾಗಿರಥಿ ತಾಯಿಯವರ 29 ನೆಯ ಸ್ಮರಣೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಪರಮಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಜೀವನ ಸರಳಕರಿಸಿಕೊಂಡು ಶರಣರು ಒಮ್ಮವ ಹಾಗೆ ಬಾಳಿ ನಮ್ಮ ಬಾಳ ಯಾತ್ರೆ ಮುಗಿಸಬೇಕಾಗಿರುವುದರಿಂದ ಎಲ್ಲರೊಂದಿಗೆ ಕೂಡಿ ಬಾಳ್ವೆ ನಡೆಸಿ, ಅಹುದು ಅಹುದು ಎನ್ನುವ ಶರಣವಾಣಿಯಂತೆ ಬದುಕಬೇಕೆಂದು ಆಶೀರ್ವದಿಸಿದರು.

ಸಮ್ಮುಖ ವಹಿಸಿದ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು, ಕಲುಷಿತವಾದ ಇಂದಿನ ಪ್ರಸ್ತುತ ಸಂದರ್ಭದಲ್ಲಿ ಜಾಗತೀಕರಣ, ಖಾಸಗೀಕರಣ, ಔದ್ಯೋಗಿಕರಣಗಳ ಮಧ್ಯ ಜಗತ್ತು ಅಂಗೈಯೊಳಗಾಗಿದ್ದು, ಪ್ರೀತಿ, ವಿಶ್ವಾಸ, ನಂಬಿಗೆ, ಸಹಬಾಳ್ವೆ, ಸಾಮರಸ್ಯ ಮಾಯವಾಗಿ ಪರಸ್ಪರ ದ್ವೇಷ, ಅಸೂಯೆಗಳಿಂದ ಸಂಬಂಧಗಳಿಗೆ ಮನ್ನಣೆ ನೀಡದೆ ಮಾನವೀಯ ಮೌಲ್ಯ ಮರೆತು ಬದುಕುತ್ತಿರುವ ಈ ಸಂದರ್ಭದಲ್ಲಿ ಬದುಕು ಹಸನಾಗಿಬೇಕಾದರೆ, ಸಮಾಜದಲ್ಲಿ ಶಾಂತಿ, ನೆಮ್ಮದಿ ಮೂಡಬೇಕಾದರೆ, ಸಾಮರಸ್ಯದಿಂದ ಮಾತ್ರ ಬದುಕಿಗೆ ನೆಮ್ಮದಿ ಎಂದು ನುಡಿದರು.

Contact Your\'s Advertisement; 9902492681

ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಶಾಸಕ ಜೈಪಾಲರಡ್ಡಿ ಮಾತನಾಡಿ ಈ ಭಾಗದಲ್ಲಿ ಜನರಲ್ಲಿ ಧಾರ್ಮಿಕ, ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಿ ನಮ್ಮೆಲ್ಲರಿಗೂ ಮಾರ್ಗದರ್ಶಕರಾದ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಕಾರ್ಯ ಶ್ಲಾಘನೀಯವೆಂದು ನುಡಿದರು. ಮುಖ್ಯ ಅತಿಥಿಗಳಾಗಿ ತೆಲಂಗಾಣ ಬಿಜೆಪಿ ರಾಜ್ಯ ಪತ್ರಕರ್ತರಾದ ಸಂಗಪ್ಪ ಜನವಾಡೆ ಮಾತನಾಡಿ ನನ್ನ ಬದುಕಿಗೆ ಸಂಸ್ಕಾರ ನೀಡಿ ನನ್ನ ಬದುಕಿನ ದಿಕ್ಕು ಬದಲಿಸಿ ಶರಣ ಸಂಸ್ಕøತಿ ಅಳವಡಿಸಿಕೊಂಡು ಬದುಕಲು ಭಾಲ್ಕಿ ಹಿರೇಮಠ ಕಾರಣವೆಂದು ಬಣ್ಣಿಸಿದರು. ಇದೇ ಸಂದರ್ಭದಲ್ಲಿ ಶ್ರೀಮಠದ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ 2023 ನೇ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.

ವೇದಿಕೆಯ ಮೇಲೆ ರೋಷನ್ ರೆಡ್ಡಿ, ಎಂ.ರಾಜಕುಮಾರ ಪಾಟೀಲ, ಸರಪಂಚ, ಶಿವಕುಮಾರ ಘಾಟೆ, ತಾ.ಪಂ.ಇ.ಓ. ಶರಣಪ್ಪ ನಾಗಲಗಿದ್ದೆ, ಪಿ.ಡಿ.ಓ., ಮುಂತಾದವರು ಉಪಸ್ಥಿತರಿದ್ದರು. ಡಾ.ಸಂಜುಕುಮಾರ ಜುಮ್ಮಾ ಹಾಗೂ ನಾಗಯ್ಯ ಸ್ವಾಮಿ ಅವರನ್ನು ಸತ್ಕರಿಸಲಾಯಿತು. ವಚನಾ ಕಾಡೋದೆ ಸ್ವಾಗತಿಸಿದರು. ಡಾ.ಸಂಜುಕುಮಾರ ಜುಮ್ಮಾ ನಿರೂಪಿಸಿದರು. ಪ್ರಾಸ್ತಾವಿಕವಾಗಿ ಸಂಗಪ್ಪ ಕಾಡೋದೆ ಮಾತನಾಡಿದರು. ರಚಿತಾ, ರುದ್ರಾಕ್ಷಿ, ಶ್ರಾವ್ಯ ಮಕ್ಕಳಿಂದ ವಚನ ಪಾರಾಯಣ ಜರುಗಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here