ಪ್ರವಾಹ ಸಂಕಷ್ಟಕ್ಕೆ ಒಳಗಾದ ಪ್ರಾಣಿಗಳ ರಕ್ಷಣೆಗೆ ನಂದಿ ಸಂಸ್ಥೆ ಪಣ: ಕೇಶವ ಮೋಟಗಿ

0
47

ಕಲಬುರಗಿ: ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಮತ್ತು ಮಹಾರಾಷ್ಟ್ರದಿಂದ ಭೀಮಾ ನದಿಗೆ ಬಿಡಲಾದ ಹೆಚ್ಚುವರಿ ನೀರು ಈ ನೀರಿನಿಂದ ಹಲವಾರು ಗ್ರಾಮಗಳು ಜಲಾವೃತ ಗೊಂಡಿವೆ. ಈ ಗ್ರಾಮದ ಜನರಿಗೆ ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮವಾಗಿ ‌ಸ್ಥಳಾಂತರಿಸುತ್ತಿರುವುದು ಕಾರ್ಯಾ ನಡೆಸುತ್ತಿದೆ.

ಆದರೆ ಈ ಗ್ರಾಮದಲ್ಲಿನ ಪಶು ಪ್ರಾಣಿಗಳಿಗೂ ತಾತ್ಕಾಲಿಕ ಗೋ ಶಾಲೆಗಳು ಪ್ರಾರಂಭಿಸುವುದು ತುಂಬಾ ಅವಶ್ಯಕವಾಗಿದೆ ಎಂದು ನಂದಿ ಎನಿಮಲ್ ವೆಲ್ಫೇರ್ ಸೋಸೈಯಿಟಿ ಪ್ರಧಾನ ಕಾರ್ಯದರ್ಶಿ ಹುಣಚಿರಾಯ ಕೇಶವ ಮೋಟಗಿ ತಿಳಿಸಿದ್ದಾರೆ.

Contact Your\'s Advertisement; 9902492681

ತಾತ್ಕಾಲಿಕ ಗೋ ಶಾಲೆಗಳು ಪ್ರಾರಂಭಿಸುವುದು ಅವಶ್ಯಕತೆ ಇದ್ರೆ ಜಿಲ್ಲಾಧಿಕಾರಿ, ಪೋಲಿಸ್ ಇಲಾಖೆ ಹಾಗೂ ಪಶುಪಾಲನಾ ಸೂಚಿಸಿದ ಸ್ಥಳದಲ್ಲಿ ಸಂಸ್ಥೆಯಿಂದ ತಾತ್ಕಾಲಿಕ ಗೋ ಶಾಲೆಗಳು ಪ್ರಾರಂಭಿಸಿ ಉಚಿತ ಕಾರ್ಯ ನಿರ್ವಹಿಸಲು ಬದ್ಧರಾಗಿದೇವೆ ಎಂದು ತಿಳಿಸಿದ್ದಾರೆ.

ಇನ್ನೂ ಹೆಚ್ಚಿನ ರೀತಿಯಲ್ಲಿ ಅವಘಡ ಸಂಭವಿಸಿದರೆ ಮತ್ತು ಮೂಕ ಪ್ರಾಣಿಗಳ ಸೇವೆಗಾಗಿ 9611230718 ಗೆ ತಿಳಿಸಿ ತಾವು ಸೂಚಿಸುವ ಸ್ಥಳಗಳಲ್ಲಿ ಉಚಿತ ಗೋವು ಇತರೇ ಪ್ರಾಣಿಗಳ ಸೇವೆ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here