ಕೂಡಲೇ ಪಿಯು ಉಪನ್ಯಾಸಕರಿಗೆ ನೇಮಕಾತಿ ಪತ್ರ ನೀಡಿ: ರೋಮಿ ಭಾಟಿ ಆಗ್ರಹ

0
105

ಬೆಂಗಳೂರು: ಪರೀಕ್ಷೆ ನಡೆಸಿ ನೇಮಕಾತಿ ಆದೇಶ ನೀಡದೆ ಸುಮಾರು 6 ವರ್ಷಗಳಿಂದ ಸತಾಯಿಸುತ್ತಿರುವ ಭ್ರಷ್ಟ ಅಧಿಕಾರಿಗಳ ಹಾಗೂ ಸರ್ಕಾರದ ನಡೆ ತೀರ ಅಮಾನವೀಯ. ಸೋಮವಾರದ ಹೊತ್ತಿಗೆ ಆದೇಶ ಪ್ರತಿ ಕೈಗೆ ನೀಡದಿದ್ದರೇ ಉಪನ್ಯಾಸಕರ ಜತೆ ಸೇರಿ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ ಕರ್ನಾಟಕ ಉಸ್ತುವಾರಿ ರೋಮಿ ಭಾಟಿ ಎಚ್ಚರಿಕೆ ನೀಡಿದರು.

ಕೊರೋನಾ ಇರುವ ಕಾರಣ ಯಾವುದೇ ಶಾಲಾ ಕಾಲೇಜುಗಳು ಇಲ್ಲದ ಕಾರಣ ಸಾಕಷ್ಟು ಜನ ಉಪನ್ಯಾಸಕರು ದುಡಿಮೆ ಇಲ್ಲದೆ ಕಂಗಾಲಾಗಿದ್ದಾರೆ, ಆದ ಕಾರಣ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೇಮಕಾತಿ ಆದೇಶದ ಪ್ರತಿ ನೀಡಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಈ ಕೂಡಲೇ ಮಧ್ಯ ಪ್ರಭೇದ ಹೊತ್ತನಳದಈ ಕೂಡಲೇ 1203 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಬೇಕು ಎಂದು ಹೇಳಿದರು.ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಸರಿಯಾದ ಉಪನ್ಯಾಸಕರಿಲ್ಲದೇ ವರ್ಷದಿಂದ ವರ್ಷಕ್ಕೆ ಫಲಿತಾಂಶ ಕುಸಿಯುತ್ತಲೇ ಇದೆ.

ಈ ಕೂಡಲೇ ಕ್ಷುಲ್ಲಕ ಕಾರಣಗಳನ್ನೆಲ್ಲ ಬದಿಗೊತ್ತಿ ಪಿಯು ಉಪನ್ಯಾಸಕರ ನೇಮಕಾತಿ ಪತ್ರ ಪ್ರತಿಭಟನಾ ಸ್ಥಳಕ್ಕೆ ಬಂದು ನೀಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಉಪಾಧ್ಯಕ್ಷ ಸುರೇಶ್ ರಾಥೋಡ್, ಮುಖ್ಯ ವಕ್ತಾರ ಶರತ್ ಖಾದ್ರಿ, ಮಲ್ಲೇಶ್ವರಂ ವಿಧಾನ ಸಭೆ ಕ್ಷೇತ್ರ, ಸುಬ್ರಹ್ಮಣ್ಯ ನಗರ ವಾರ್ಡ್ ಅಧ್ಯಕ್ಷರಾದ ಸುಮನ್ ಪ್ರಶಾಂತ್ ಹಾಗೂ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಮಹಿಳಾ ಮುಖಂಡರುಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here