ಕೆ.ಎಚ್.ಬಿ ಗ್ರೀನ್ ಪಾರ್ಕನಲ್ಲಿ ನವರಾತ್ರಿ ಉತ್ಸವ ಆರಂಭ

0
110

ಕಲಬುರಗಿ: ನಗರದ ಸಂತೋಷ ಕಾಲೋನಿಯ ಕೆ.ಎಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ನವರಾತ್ರಿ ಉತ್ಸವದ ಆಚರಣೆಯ ಉದ್ಘಾಟನೆ ಮಾಡಿ ಮಾತನಾಡಿದ ಕೆ.ಎಚ್.ಬಿ ಗ್ರೀನ್ ಪಾರ್ಕ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅದ್ಯಕ್ಷ ‌ಸಂಜೀವಕುಮಾರ ಶೆಟ್ಟಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ನವರಾತ್ರಿಯನ್ನು ಒಂಬತ್ತು ದಿನಗಳವರೆಗೆ ಆಚರಿಸಲಾಗುತ್ತದೆ.

ಈ ಒಂಬತ್ತು ದಿನವನ್ನು ದುರ್ಗಾ ದೇವಿಯ ವಿಭಿನ್ನ ಅವತಾರಕ್ಕೆ ಸಮರ್ಪಿಸಲಾಗಿದೆ. ನವರಾತ್ರಿ ಎಂದರೆ ಭಕ್ತಿ ಮತ್ತು ಸಂತೋಷದ ಹಬ್ಬ. ದುರ್ಗಾ ದೇವಿಯ ಒಂಬತ್ತು ರೂಪಕ್ಕೆ ವಿಶೇಷ ಅಲಂಕಾರ ಹಾಗೂ ಆರಾಧನೆಯ ಮೂಲಕ ಹಬ್ಬದ ಸಂಭ್ರಮವನ್ನು ಮೆರೆಯಲಾಗುವುದು. ಒಂಬತ್ತು ದಿನಗಳ ಕಾಲ ಉಪವಾಸ ವ್ರತ ಪೂಜೆಯನ್ನು ಮಾಡಲಾಗುವುದು. ಒಂಬತ್ತು ದಿನಗಳ ಕಾಲ ದಾಂಡಿಯಾ ಮತ್ತು ಗರ್ಬಾ ನೃತ್ಯ ಪ್ರಕಾರಗಳಿಂದ ದೇವಿಗೆ ಸೇವೆ ಸಲ್ಲಿಸಲಾಗುವುದು ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ನಾಗೆಂದ್ರಪ್ಪ‌ ದಂಡೋತಿಕರ, ಸಂಗಮೇಶ ಸರಡಗಿ, ಕೆ.ಎಮ್ ಲೊಕಯ್ಯ, ರಾಜೇಶ ನಾಗಬುಜಂಗೆ, ಶ್ರೀನಿವಾಸ ಬುಜ್ಜಿ, ಡಿ.ವಿ ಕುಲಕರ್ಣಿ, ಶಿವಕಾಂತ ಚಿಮ್ಮಾ, ಶಂಬುಲಿಂಗ ವಾಡಿ, ಸಂತೋಷ ಮಠ, ಚಂದ್ರಕಾಂತ ತಳವಾರ, ರಮೇಶ ಕಟ್ಕೆ, ಸೂರ್ಯಕಾಂತ ಸಾವಳಗಿ, ವಿರೇಶ ಬೋಳಶೆಟ್ಟಿ, ರವೀಂದ್ರ ಗುತ್ತೆದಾರ, ರೇವಣಸಿದ್ದಪ್ಪ ರುದ್ರವಾಡಿ, ಮಶಾಕ ಸಾಬ, ಶರಣಬಸಪ್ಪ ದೇಶಟ್ಟಿ, ಮಲ್ಲಣ್ಣ ಮಲ್ಲೆಡ, ದಿಲೀಪ ಬಕರೆ, ಬಸವರಾಜ ಹೆಳವರ ಯಾಳಗಿ, ರಮೇಶ ಬಸ್ಕಾವರೆ ಹಾಗೂ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here