Monday, July 15, 2024
ಮನೆಬಿಸಿ ಬಿಸಿ ಸುದ್ದಿಶೀಘ್ರ ಗ್ರಾಮ ಪಂಚಾಯತ್ ಚುನಾವಣೆಗೆ ಯಳಸಂಗಿ ಆಗ್ರಹ

ಶೀಘ್ರ ಗ್ರಾಮ ಪಂಚಾಯತ್ ಚುನಾವಣೆಗೆ ಯಳಸಂಗಿ ಆಗ್ರಹ

ಆಳಂದ: ರಾಜ್ಯದಲ್ಲಿ ವಿಧಾನ ಪರಿಷತ್ ಮತ್ತು ಉಪ ಚುನಾವಣೆಗಳನ್ನು ನಡೆಸುವ ಸರ್ಕಾರ, ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ಹಿಂದೇಟು ಹಾಕುವುದು ಸರಿಯಲ್ಲ. ಆದಷ್ಟು ಬೇಗ ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ನಿಂಬರ್ಗಾ ವಲಯ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಬಸವರಾಜ ಯಳಸಂಗಿ ಆಗ್ರಹಿಸಿದ್ದಾರೆ.

5,800 ಗ್ರಾಮ ಪಂಚಾಯತ್ ಅವಧಿ ಮುಗಿದು ಒಂದು ವರ್ಷ ಕಳೆದಿದೆ.ಇದರಿಂದ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ನಿಂತುಹೋಗಿದೆ.ಮಳೆಗಾಲದ ಕಾರಣ ಸೇತುವೆ, ರಸ್ತೆಗಳು ಕಿತ್ತು ಹೋಗಿವೆ. ಹೊಲಗಳಿಗೆ ಹೋಗಲು ರಸ್ತೆಗಲಿಲ್ಲ.ನೀರು ಹರಿದು ಹೋಗದೆ ಗ್ರಾಮಗಳಲ್ಲಿ ಮಡುಗಟ್ಟಿ ರೋಗದ ಭೀತಿ ಹರಡಿದೆ.ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಗ್ರಾಮ ಪಂಚಾಯತ್ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ.

ಸಮಸ್ಯೆಗಳನ್ನು ಬಗೆಹರಿಸಲು ಆಡಳಿತಾಧಿಕಾರಿಗಳನ್ನು ಕೇಳಿದರೆ ಸರ್ಕಾರದ ಕಡೆ ಬೊಟ್ಟು ಮಾಡುತ್ತಾರೆ. ಹೀಗಿದ್ದರೆ ಜನರ ಗತಿ ಏನು ಎಂದು ಅವರು ಪ್ರಶ್ನಿಸಿದ್ದಾರೆ.ಚುನಾವಣಾ ಆಯೋಗ ಚುನಾವಣೆ ನಡೆಸಲು ಸಜ್ಜಾಗಿದ್ದರೂ, ಸರ್ಕಾರ ಮಾತ್ರ ಮಿನಮೇಷ ಎನಿಸುತ್ತಿದೆ.ಹಾಗಾಗಿ, ಕೂಡಲೇ ಸರ್ಕಾರ ಚುನಾವಣೆಗಳನ್ನು ನಿಗದಿಯಂತೆ ನಡೆಸಬೇಕು ಎಂದು  ತಿಳಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular