ಜಲಮೂಲ, ಪರಿಸರ ಸಂರಕ್ಷಣೆಯತ್ತ ಯುವಜನತೆ ಸಕ್ರಿಯರಾಗಲಿ: ಹುಲಿಕುಂಟೆ ಮೂರ್ತಿ

0
86

ಬೆಂಗಳೂರು: ಯುವಜನತೆ ನದಿಮೂಲಗಳು ಹಾಗೂ ಪರಿಸರ ಸಂರಕ್ಷಣೆಯ ಅಭಿಯಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮೈಗೂಡಿಸಿಕೊಳ್ಳಬೇಕೆಂದು ಲೇಖಕ ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಹುಲಿಕುಂಟೆ ಮೂರ್ತಿ ತಿಳಿಸಿದ್ದಾರೆ.

ಯುವಮುನ್ನಡೆ ವತಿಯಿಂದ ನಗರದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವೃಷಭಾವತಿ ನದಿ ಉಳಿವಿಗಾಗಿ ಹಾಗೂ ಪರಿಸರ ನ್ಯಾಯಕ್ಕಾಗಿ ಯುವಧ್ವನಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ವೃಷಭಾವತಿ ನದಿಯ ದಡದಲ್ಲಿ ಬೆಂಗಳೂರು ನಿರ್ಮಾಣವಾಗಿದೆ. ವೃಷಭಾವತಿಯು ಅರ್ಕಾವತಿ ನದಿಯ ಉಪನದಿಯಾಗಿದೆ. ಆದರೆ, ಈ ವಿಚಾರ ಎಷ್ಟು ಮಂದಿಗೆ ಗೊತ್ತಿರಲು ಸಾಧ್ಯ. ಇಂದು ಆಧುನಿಕತೆ ಹಾಗೂ ಜಾಗತೀಕರಣಕ್ಕೆ ತುತ್ತಾಗಿರುವ ಬೆಂಗಳೂರಿನಲ್ಲಿ ನದಿಮೂಲಗಳು ಕಾಣೆಯಾಗಿವೆ. ಇದಿರಂದಾಗಿ ಬೆಂಗಳೂರಿನಲ್ಲಿ ನೀರಿಗೆ, ಪರಿಸರಕ್ಕೆ ಸಂಬಂಧಿಸಿದಂತೆ ಏನೆಲ್ಲ ಸಮಸ್ಯೆಗಳಾಗುತ್ತಿವೆ ಎಂಬುದರ ಕುರಿತು ನಿಧಾನವಾಗಿ ಅರಿವಿಗೆ ಬರುತ್ತದೆ. ಈ ವಿಚಾರವನ್ನು ಯುವಜನತೆಗೆ ತಲುಪಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ನದಿಗಳಿಗೆ, ಪರಿಸರಕ್ಕೆ ಪರ್ಯಾಯವನ್ನು ಹುಡುಕಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಜಲಮೂಲಗಳು ಹಾಗೂ ಪರಿಸರ ಸಂರಕ್ಷಣೆ ನಮ್ಮ ಮೊದಲ ಆದ್ಯತೆಯಾಗಬೇಕು. ಈ ಬಗ್ಗೆ ಯುವಮುನ್ನಡೆಯ ಕಾರ್ಯಕರ್ತರು, ವೃಷಭಾವತಿ ನದಿ ಉಳಿವಿಗಾಗಿ ಅಭಿಯಾನವನ್ನು ಆರಂಭಿಸಿರುವುದು ಶ್ಲಾಘನೀಯ ವಿಚಾರವಾಗಿದೆ. ಈ ಅಭಿಯಾನಕ್ಕೆ ಬೆಂಗಳೂರಿನ ಎಲ್ಲ ಕಾಲೇಜು ವಿದ್ಯಾರ್ಥಿಗಳು ಕೈ ಜೋಡಿಸಬೇಕೆಂದು ಅವರು ಆಶಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಾತಲಿಂಗಪ್ಪ, ಸಂವಾದ ಸಂಸ್ಥೆಯ ಇಳಂಗೊ ಸ್ಟಾನಿಸ್ಲಾಸ್ ಹಾಗೂ ಯುವಮುನ್ನಡೆ ಕಾರ್ಯಕರ್ತರಾದ ಉದಯ್‌ಕಿರಣ್, ಶ್ರೀನಿವಾಸ್, ಅರ್ಪಿತಾ, ಮರಿಯಮ್ಮ, ಯೋಗೇಶ್, ಆಶಾ, ಬೀರಪ್ಪ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here