ಸುರಪುರ: ಇಂದು ಕೊರೊನಾ ಹೆಚ್ಚಾಗಲು ಜನರ ನಿರ್ಲಕ್ಷ್ಯವೇ ಮುಖ್ಯ ಕಾರಣವಾಗಿದೆ.ಆದ್ದರಿಂದ ಎಲ್ಲರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸುರಪುರ ಉಪ ವಿಭಾಗದ ಡಿವೈಎಸ್ಪಿ ವೆಂಕಟೇಶ ಹುಗಿಬಂದಿ ತಿಳಿಸಿದರು.
ಪೊಲೀಸ್ ಇಲಾಖೆ ಹಾಗು ಗೃಹ ರಕ್ಷಕ ದಳದಿಂದ ಹಮ್ಮಿಕೊಳ್ಳಲಾದ ಕೊರೊನಾ ಜಾಗೃತಿ ಹಾಗು ಉಚಿತ ಮಾಸ್ಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಕೊರೊನಾ ಸೊಂಕಿಗೆ ಯಾವುದೇ ಮದ್ದು ಇಲ್ಲ ಆದರೆ ಎಲ್ಲರು ನಿತ್ಯವು ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಹಾಗು ಆಗಾಗ ಕೈಗಳನ್ನು ಸಾಬೂನಿನಿಂದ ತೊಳೆಯುತ್ತಿದ್ದರೆ ಕೊರೊನ ಹರಡುವುದನ್ನು ತಡೆಯಲು ಸಾಧ್ಯವಿದೆ ಎಂದರು.
ಪೊಲೀಸ್ ಇನಸ್ಪೆಕ್ಟರ್ ಎಸ್.ಎಮ್.ಪಾಟೀಲ್ ಮಾತನಾಡಿ,ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮಾಸ್ಕ್ ಧರಿಸದೆ ಹೊರಗಡೆ ಬಂದವರಿಗೆ ದಂಡ ವಿಧಿಸಲಾಗುವದು.ಆದ್ದರಿಂದ ಎಲ್ಲರು ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ರೂಢಿಸಿಕೊಳ್ಳುವಂತೆ ಕರೆ ನೀಡಿದರು.
ಗೃಹರಕ್ಷಕ ದಳದ ಕಂಪನಿ ಕಮಾಂಡರ್ ಯಲ್ಲಪ್ಪ ಹುಲಕಲ್ ಮಾತನಾಡಿ,ಇಂದು ಸರಕಾರದ ನಿಯಮದಂತೆ ಕೊರೊನಾ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ.ಸಾರ್ವಜನಿಕರು ಇಲಾಖೆಗಳ ಶ್ರಮವನ್ನು ಅರ್ಥ ಮಾಡಿಕೊಂಡು ಕೋವಿಡ್ ನಿಯಮಗಳನ್ನು ಪಾಲಿಸಿದಲ್ಲಿ ಕೊರೊನಾ ಮುಕ್ತ ಸಮಾಜ ನಿರ್ಮಾಣವಾಗಲಿದೆ.ಸಾರ್ವಜನಿಕರು ಇದನ್ನು ಅರಿತುಕೊಳ್ಳಬೇಕೆಂದರು.ಇದೇ ಸಂದರ್ಭದಲ್ಲಿ ರಾಜು ಪುಲ್ಸೆ ಇತರರು ಮಾತನಾಡಿದರು.
ಇದೇ ಸಂದರ್ಭದಲ್ಲಿ ನಗರದಲ್ಲಿ ಜಾಗೃತಿ ಜಾಥಾ ನಡೆಸಿ ಜನರಿಗೆ ಉಚಿತವಾಗಿ ಮಾಸ್ಕ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪಿಎಸ್‌ಐ ಶರಣಪ್ಪ ಎಎಸ್‌ಐ ಸುರೇಶ ಕುಮಾರ ಹುಣಸಗಿ ಗೃಹರಕ್ಷಕ ದಳದ ಅಧಿಕಾರಿ ಆಶಿಕ್ ಅಲಿ ರಮೇಶ ಅಂಬುರೆ ಮುಖ್ಯ ಪೇದೆ ಮನೋಹರ ರಾಠೋಡ ಮಂಜುನಾಥ ಹಿರೇಮಠ ಭೀಮರಾಯ ಸಗರ ಸೇರಿದಂತೆ ಅನೇಕ ಭಾಗವಹಿಸಿದ್ದರು.