ಕಲಬುರಗಿ: ಸರಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ಕೆಲ ಅಧಿಕಾರಿಗಳು ಲಂಚ ಪಡೆಯದೆ ಕೆಲಸವೇ ಮಾಡುವೂದಿಲ್ಲ. ಪರಿಣಾಮ ಸಾರ್ವಜನಿಕ ಕ್ಷೇತ್ರಗಳಲ್ಲಿ ಪ್ರಾಮಾಣಿಕ ಕೆಲಸ ಆಗುತ್ತಿಲ್ಲ. ಆದ್ದರಿಂದ ಲಂಚದ ಬೆನ್ನು ಹತ್ತುವುದು ಬಿಡಿ ಎಂದು ಆಂದೋಲಾ ಕರುಣೇಶ್ವರ ಮಠದ ಸಿದ್ದಲಿಂಗ ಮಹಾಸ್ವಮಿ ಅಧಿಕಾರಿ ವರ್ಗಕ್ಕೆ ಕಿವಿ ಮಾತು ಹೇಳಿದರು.
ನರಗದ ವಿಶ್ವೇಶ್ವರಯ್ಯ ಭವನದಲ್ಲಿ ಜಯ ಕರ್ನಾಟಕ ಸಂಘಟನೆ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರದ ಸಾಧಕರು, ಕೊರೊನಾ ವಾರಿಯರ್ಸ್‌ಗೆಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಶಿಕ್ಚಣ ಕ್ಚೇತ್ರದಲ್ಲಂತೂ ಲಂಚದ್ದೆಹೆಚ್ಚುಗಾರಿಕೆ ಎಂದರು. ಸಂಘಟನೆಯ ರಾಜ್ಯಾಧ್ಯಕ್ಷ ಬಿ. ಎನ್. ಜಗದೀಶ ಮಾತನಾಡಿ, ಸಂಘಟನೆಯ ಕಲಬುರಗಿ ಘಟಕ ರಾಜ್ಯಕ್ಕೆ ಮಾದರಿ ಯಾಗಿ ಕೆಲಸ ಮಾಡುತ್ತಿದೆ ಎಂದರು.
ಸಣ್ಣ ನೀರಾವರಿ ಇಲಾಖೆಯ ಅಧೀಕ್ಷಕ ಸುರೇಶ ಶರ್ಮಾ ಉದ್ಘಾಟಿಸಿದರು. ಉದ್ದೆಮಿ ಶ್ರೀಶೈಲ್ ಕೆ. ಬಿರಾದಾರ ಪ್ರಶಸ್ತಿ ವಿತರಣೆ ಮಾಡಿದರು. ಕೋವಿಡ್ ತಡೆಯಲು ಶ್ರಮಿಸಿದ ಪೊಲೀಸ್ ಅಧಿಕಾರಿಗಳು, ವೈದ್ಯರು, ಆಶಾ ಕಾರ್ಯಕರ್ತೆ ಯರು, ಪೌರ ಕಾರ್ಮಿಕರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಅಲ್ಲದೆ, ಮೆಟ್ರಿಕ್ ಮತ್ತು ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘಟನೆಯ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಹೆಚ್. ರಾಮಚಂದ್ರಯ್ಯ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ಸೋಮಶೇಖರ, ಮೇಘರಾಜ್ ಆರ್, ರಾಕೇಶ ಕಲ್ಲೂರ, ಸುನೀಲ ಸಕ್ಪಾಲ, ನಟರಾಜ ಕಟ್ಟಿಮನಿ, ಕೃಷ್ಣಪ್ಪ, ಗಣೇಶ ಪುಲಾರೆ, ಕಿರಣ ಹುಂಪಳಿ, ಸಿದ್ದಲಿಂಗ ಆರ್.ರಾಠೋಡ, ಕಿಶೋರ ಗಾಯಕವಾಡ, ಆನಂದ ಚವ್ಹಾಣ, ರಾಜು ಸಾರವಾಡ, ವಿನಾಯಕ ಸೇರಿದಂತೆ ಅನೇಕರು ಇದ್ದರು.