ಅಮರಣ್ಣ ಸಜ್ಜನ್ ಅವರ ದಾಖಲೆ ನೀಡದಿದ್ದರೆ ಸುರಪುರ ಬಂದ್‌ಗೆ ನಿರ್ಧಾರ: ಬೇಟೆಗಾರ

0
164
ನಗರದ ತಹಸೀಲ್ ಕಚೇರಿ ಮುಂದೆ ನಡೆದ ಅಮರಣ್ಣ ಸಜ್ಜನ್ ಅವರ ಧರಣಿಗೆ ಬೆಂಬಲಿಸಿ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಮುಖಂಡರು ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸುರಪುರ: ನಗರದ ರಂಗಂಪೇಟೆಯ ನಿವಾಸಿ ಅಮರಣ್ಣ ಚಂದ್ರಶೇಖರ ಸಜ್ಜನ್ ಅವರು ತಮ್ಮ ಆಸ್ತಿಯ ದಾಖಲೆಗಳನ್ನು ದೃಢಿಕರಿಸಿ ಕೊಡುವಂತೆ ಆಗ್ರಹಿಸಿ ಕಳೆದ ೧೯ ದಿನಗಳಿಂದ ತಹಸೀಲ್ ಕಚೇರಿ ಮುಂದೆ ನಡೆಸಿದ ಧರಣಿಗೆ ಇಂದು ತಾಲೂಕಿನ ವಾಲ್ಮೀಕಿ ನಾಯಕ ಸಂಘದ ಮುಖಂಡರು ಬೆಂಬಲಿಸಿ ಸಾಂಕೇತಿಕ ಧರಣಿಯಿಂದ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ಗುರುಪೀಠದ ವರದಾನೇಶ್ವರ ಸ್ವಾಮೀಜಿ ಮಾತನಾಡಿ,ನಿಮ್ಮ ಬೆಂಬಲಕ್ಕೆ ನಿಂತು ನಿಮಗೆ ನ್ಯಾಯ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಬೇಟೆಗಾರ ಮಾತನಾಡಿ,ಕಳೆದ ೧೯ ದಿನದಿಂದ ತಮ್ಮ ಬದುಕನ್ನು ಬಿಟ್ಟು ತಹಸೀಲ್ ಕಚೇರಿ ಮುಂದೆ ಮಳೆಗಾಳಿಯನ್ನು ಸಹಿಸಿ ವಯಸ್ಸಾದವರು ಕುಳಿತಿರುವುದು ನೋಡಿಯೂ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ನಡೆ ಖಂಡನಿಯವಾಗಿದೆ.ಕೂಡಲೇ ಅವರ ದಾಖಲೆಗಳನ್ನು ದೃಢಿಕರಿಸಿ ನೀಡಬೇಕು ಇಲ್ಲವಾದಲ್ಲಿ ಕೆಲವೇ ದಿನಗಳಲ್ಲಿ ಸುರಪುರ ಬಂದ್‌ಗೆ ಕರೆ ನೀಡಿ ಅಮರಣ್ಣ ಸಜ್ಜನ್ ಅವರಿಗೆ ನ್ಯಾಯ ಕೊಡಿಸಲು ಸಂಘಟನೆ ನಿರ್ಣಯ ಕೈಗೊಳ್ಳಲಿದೆ ಎಂದು ಎಚ್ಚರಿಸಿ ನಂತರ ಜಿಲ್ಲಾಧಿಕಾರಿಗಳಿಗೆ ಗ್ರೇಡ-೨ ತಹಸೀಲ್ದಾರ್ ಅವರ ಮೂಲಕ ಮನವಿ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಧರಣಿ ನಿರತರಾದ ಅಮರಣ್ಣ ಸಜ್ಜನ್ ಅಶೋಕ ಸಜ್ಜನ್ ನಗರಸಭೆ ಸದಸ್ಯ ಸೋಮನಾಥ ಡೊಣ್ಣಿಗೇರಾ ರಾಜಾ ರಾಮಪ್ಪ ನಾಯಕ ಜೇಜಿ ರಮೇಶ ದೊರೆ ಆಲ್ದಾಳ ವೆಂಕೋಬ ದೊರೆ ಚಂದ್ರಶೇಖರ ಬಿಚ್ಚಗತ್ತಿಕೇರಾ ಭೀಮಣ್ಣ ಗುಡ್ಡಕಾಯಿ ರಾಮು ನಾಯಕ ಅರಳಳ್ಳಿ ಅಯ್ಯಣ್ಣ ಹಾಲಬಾವಿ ನಾಗರಾಜ ಕಲಬುರ್ಗಿ ಹಣಮಂತ ಕಟ್ಟಿಮನಿ ಭೀಮರಾಯ ಕಡಿಮನಿ ಶಿವರಾಜ ಪಾಟೀಲ ರಂಗಣ್ಣ ದೊರೆ ಅಶೋಕ ಆಲ್ದಾಳ ದೇವಿಂದ್ರಪ್ಪ ನಾಯಕ ಪ್ರಭುಗೌಡ ಪಾಟೀಲ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here