ಗದುಗಿನ ಸಿದ್ದಲಿಂಗ ತೋಂಟದಾರ್ಯ ಮಹಾಸ್ವಾಮಿಗಳ ಕೊಡುಗೆ ಅನನ್ಯ: ಅಂಗಡಿ

0
28

ಸುರಪುರ: ಗದುಗಿನ ತೊಂಟಧಾರ್ಯ ಮಹಾ ಸಂಸ್ಥಾನದ ಜಗದ್ಗುರು ಪೂಜ್ಯಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಇಡೀ ತಮ್ಮ ಜೀವನದುದ್ದಕ್ಕೂ ಸಮಾಜದ ಒಳಿತನ್ನು ಬಯಸಿದವರು, ಸಮಾಜದಲ್ಲಿರುವ ಮೂಡ ನಂಭಿಕೆ, ಕಂದಾಚಾರ, ಲಿಂಗ ಸಮಾನತೆ, ಜಾತಿಯತೆ ನಿರ್ಮೂಲನೆಗಾಗಿ ನಿರಂತರವಾಗಿ ಶ್ರಮವಹಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿಕೊಡುವಲ್ಲಿ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ತಾಲೂಕ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು.

ರಂಗಂಪೇಟೆಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಸುರಪುರ ವತಿಯಿಂದ ಆಯೋಜಿಸಿದ್ದ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ದ್ವಿತೀಯ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸ್ವಾಮಿಜಿಯವರು ದೀನ ದಲಿತರು, ಶೋಷಿತರ ಸೇವೆಯೆ ದೇವರ ಪೂಜೆಯಂದು ನಂಬಿದ್ದ ಶ್ರೀಗಳು ಜನಸಾಮಾನ್ಯರ ನೊವಿಗೆ ಸ್ಪಂದಿಸಿದ ಸಕಲ ಜೀವಗಳಿಗೆ ಲೇಸನ್ನೆ ಬಯಸಿದ ಮಹಾನ್ ಸಂತ,ಅವರನ್ನು ಜನರು ಕನ್ನಡದ ಜಗದ್ಗುರು ಎಂದು ಪ್ರೀತಿಯಿಂದ ಕರೆಯುತ್ತಿದ್ದರು.ಅವರು ಸದಾಕಾಲ ಕನ್ನಡ ನಾಡು ನುಡಿಯ ಅಭಿಮಾನದಲ್ಲಿ ಮುಂಚುಣಿಯಲ್ಲಿದ್ದರು ಎಂದು ಹೇಳಿದರು.

Contact Your\'s Advertisement; 9902492681

ಕಾಲೇಜಿನ ಪ್ರಾಚಾರ್ಯ ವಿರೇಶ ಹಳಿಮನಿ, ಸಾಹಿತಿ ದೇವಿಂದ್ರಪ್ಪ ಕರಡಕಲ್, ಯುವ ಮುಖಂಡ ಪ್ರಭುಗೌಡ ಪಾಟೀಲ್ ಕರಡಕಲ್, ಪ್ರವೀಣ ಕುಮಾರ ಜಕಾತಿ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here