ಶಹಾಬಾದ:ನಗರದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ, ನಗರ ಆರೋಗ್ಯ ಕೇಂದ್ರ ಶಹಾಬಾದ ಹಾಗೂ ನಗರಸಭೆ ವತಿಯಿಂದ ಪೌರ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತ ಡಾ. ಕೆ.ಗುರಲಿಂಗಪ್ಪ ಮಾತನಾಡಿ, ಪೌರ ಕಾರ್ಮಿಕರು ಒಂದು ರೀತಿ ವೈದ್ಯರಿದ್ದಂತೆ, ಸಾಮನ್ಯವಾಗಿ ವೈದ್ಯರು ರೋಗ ಬಂದ ಮೇಲೆ ಚಿಕಿತ್ಸೆ ನೀಡುತ್ತಾರೆ.ಆದರೆ ಪೌರಕಾರ್ಮಿಕರು ನಗರವನ್ನು ಸ್ವಚ್ಛವಾಗಿಡುವ ಮೂಲಕ ಜನರ ಆರೋಗ್ಯವನ್ನು ಕಾಪಾಡುತ್ತಾರೆ.ಪೌರ ಕಾರ್ಮಿಕರು ಮಳೆ,ಚಳಿ,ಬಿಸಿಲು,ಧೂಳು, ಗಬ್ಬು ವಾಸನೆ ಲೆಕ್ಕಿಸದೇ ನಗರವನ್ನು ಸ್ವಚ್ಛವಾಗಿಡುವಲ್ಲಿ ಕಾರ್ಯನಿರತರಾಗಿರುತ್ತಾರೆ.ಅಂತವರಿಗೆ ಆಗಾಗ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳುವುದು ನಮ್ಮೆಲ್ಲರ ಕರ್ತವ್ಯ.ಅವರು ಆರೋಗ್ಯವಾಗಿದ್ದಾಗ ಮಾತ್ರ ನಗರದ ಜನರು ಆರೋಗ್ಯದಿಂದಿರಲು ಸಾಧ್ಯ.
ಅಲ್ಲದೇ ಪೌರಕಾಮರ್ಿಕರು ಕುಡಿತಕ್ಕೆ, ತಂಬಾಕು ಸೇವನೆಗೆ ಒಳಗಾಗದಿರಿ.ಒಂದು ವೇಳೆ ಈ ಚಟ ಹೊಂದಿದ್ದರೇ ಈಗಲೇ ಬಿಟ್ಟುಬಿಡಿ.ಇದರಿಂದ ಅನೇಕ ಕಾಯಿಲೆಗಳು ಬಂದು ನಿಮ್ಮ ಆರೋಗ್ಯ ಕೆಡುವುದಲ್ಲದೇ, ನಿಮ್ಮ ಕುಟುಂಬವನ್ನು ಸಂಕಷ್ಟಕ್ಕೆ ದೂಡುತ್ತದೆ.ಎಲ್ಲಾ ಪೌರಕಾರ್ಮಿಕರು ತಮ್ಮ ಆರೋಗ್ಯ ತಪಾಸಣೆ ಮಾಡಿಕೊಳ್ಳತಕ್ಕದ್ದು ಎಂದು ಹೇಳಿದರು.
ತಹಸೀಲ್ದಾರ ಸುರೇಶ ವರ್ಮಾ ಮಾತನಾಡಿ, ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗವನ್ನು ಪ್ರತಿಯೊಬ್ಬ ಪೌರ ಕಾರ್ಮಿಕರು ಪಡೆದುಕೊಳ್ಳಬೇಕೆಂದು ಹೇಳಿದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಂಕರ ರಾಠೋಡ,ಡಾ.ದಶರಥ ಜಿಂಗಾಡೆ, ಡಾ.ಸವಿತಾ ಜಿಂಗಾಡೆ, ಆರೋಗ್ಯ ಸಹಾಯಕ ಯೂಸುಫ್ ನಾಕೇದಾರ, ಸಂಧ್ಯಾರಾಣಿ, ಶಂಕರ ವಾಲೀಕಾರ,ಜಯಶ್ರೀ, ಸಂತೋಷ, ಆಪ್ತ ಸಮಾಲೋಚಕ ಅಮರೇಶ ಇಟಗಿಕರ್ ಸೃಎಇದಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಇದ್ದರು.