ಶರಣಬಸವೇಶ್ವರ ಸಮಸ್ಥಾನದಿಂದ ಪ್ರವಾಹ ಪೀಡಿತ ಗ್ರಾಮಗಳಿಗೆ 20 ಲಕ್ಷ ಮೌಲ್ಯದ ಪರಿಹಾರ ಸಾಮಾಗ್ರಿ ವಿತರಣೆ

0
110

ಕಲಬುರಗಿ; ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ ಸ್ಥಾಪಿಸಿದ ಪರಿಹಾರ ಕೇಂದ್ರಗಳಿಗೆ ಹಾಗೂ ಭೀಮಾ ನದಿಯದಡದಲ್ಲಿರುವ ಪ್ರವಾಹ ಪೀಡಿತ ಹಳ್ಳಿಗಳಿಗೆ ಶರಣಬಸವೇಶ್ವರ ಸಂಸ್ಥಾನದ ವತಿಯಿಂದರೂ.೨೦ ಲಕ್ಷ ಮೌಲ್ಯದ ಪರಿಹಾರ ಸಾಮಾಗ್ರಿ ವಿತರಣೆಯನ್ನುಪ್ರಾರಂಭಿಸಿದೆ.

ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದಕುಲಾಧಿಪತಿಯಾಗಿರುವ ಮಹಾದಾಸೋಹಿ ಪೂಜ್ಯಡಾ.ಶರಣಬಸವಪ್ಪಅಪ್ಪಾರವರುಇನ್ನೂಚಾಲ್ತಿಯಲ್ಲಿರುವ ಸಾಂಕ್ರಾಮಿಕ ರೋಗದ ಪರಿಸ್ಥಿತಿಯ ದೃಷ್ಟಿಯಿಂದ ಹಾಗೂ ಸಂಕಷ್ಟ ಪೀಡಿತಜನರಿಗೆತಮ್ಮ ಬೆಂಬಲಸೂಚಿಸಿದ್ದಾರೆ.

Contact Your\'s Advertisement; 9902492681

ಪೂಜ್ಯಅಪ್ಪಾಜಿಯವರು, ನವೆಂಬರ್ ೧೪ರಂದು ನಡೆಯಬೇಕಿದ್ದತಮ್ಮಜನ್ಮದಿನವನ್ನು ಆಚರಿಸಿಕೊಳ್ಳುವದಿಲ್ಲ ಹಾಗೂ ನವೆಂಬರ್ ೧ರಂದು ಸಂಸ್ಥಾನದ ೯ನೇ ಪೀಠಾಧಿಪತಿಯಾದಚಿರಂಜೀವಿ ದೊಡ್ಡಪ್ಪಅಪ್ಪಾರವರಜನ್ಮ ದಿನವನ್ನುಆಚರಿಸಲಾಗುವುದಿಲ್ಲ ಎಂದು ಘೋಷಿಸಿದರು.

ರಾಜ್ಯದ ವಿವಿಧ ಭಾಗಗಳಲ್ಲಿನ ಪ್ರವಾಹ ಪೀಡಿತಜನಸಂಖ್ಯೆಯ ಸಂಕ? ಹಾಗೂ ಸಾಂಕ್ರಾಮಿಕ ಪರಿಸ್ಥಿತಿಯನ್ನುಗಮನದಲ್ಲಿಟ್ಟುಕೊಂಡುಶರಣಬಸವೇಶ್ವರ ವಿದ್ಯಾವರ್ಧಕ ಸಂಘದಚೇರ್‌ಪರ್ಸನ್‌ರಾದಪೂಜ್ಯಡಾ. ದಾಕ್ಷಾಯಿಣಿಅವ್ವನವರು, ನವೆಂಬರ್ ೨೨ ರಂದುಜರುಗಬೇಕಿದ್ದಅವರಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುವದಿಲ್ಲ ಎಂದು ಹೇಳಿದ್ದಾರೆ.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜದೇಶಮುಖ, ಪ್ರತ್ಯೇಕ ಚೀಲಗಳಲ್ಲಿ ಪ್ಯಾಕ್ ಮಾಡಲಾದ ವಸ್ತುಗಳನ್ನು ಹಾನಿಗೊಳಗಾದ ಪ್ರದೇಶಗಳಾದ ಚಿಂಚೋಳಿ, ಜೇವರ್ಗಿ, ಚಿತ್ತಾಪೂರ, ಅಫ್ಜಲಪೂರ ತಾಲ್ಲೂಕು ಹಾಗೂ ಕಲಬುರಗಿ ನಗರದ ಪೀಡಿತ ಪ್ರದೇಶಗಳಲ್ಲಿನ ಜನರಿಗೆಕಂಬಳಿ, ಜೋಳದ ರೊಟ್ಟಿ, ಅಕ್ಕಿ, ಸಿಹಿತಿಂಡಿತರಕಾರಿ ಮತ್ತುಇತರೆಅಗತ್ಯ ವಸ್ತುಗಳನ್ನು ಒಳಗೊಂಡಂತೆ ಪರಿಹಾರ ಸಾಮಗ್ರಿಗಳನ್ನು ವಾಹನಗಳ ಮೂಲಕ ಸಾಗಿಸಿ ವಿತರಿಸಲಾಗುವುದಾಗಿ ಶನಿವಾರ ಪತ್ರಕರ್ತರಿಗೆ ತಿಳಿಸಿದ್ದರು.

ಸಂಕಷ್ಟ ಪೀಡಿತ ಪ್ರದೇಶಗಳಿಂದ ಬೇಡಿಕೆ ಹೆಚ್ಚಿದರೆ, ಪರಿಹಾರ ಸಾಮಗ್ರಿಗಳ ಸಂಗ್ರಹಕ್ಕಾಗಿ ಹೆಚ್ಚುವರಿ ಹಣವನ್ನು ಬಿಡುಗಡೆಮಾಡುವ ಮೂಲಕ ಪೀಡಿತಪ್ರದೇಶದಜನರಬೇಡಿಕೆಯನ್ನು ಸಂಸ್ಥಾನವು ಪೂರೈಸುತದೆ ಎಂದು ಬಸವರಾಜ ದೇಶಮುಖ ತಿಳಿಸಿದರು.

ಶರಣಬಸವ ವಿಶ್ವವಿದ್ಯಾಲಯದ ಕುಲಪತಿಡಾ. ನಿರಂಜನ್ ವಿ.ನಿಷ್ಠಿ, ಸಮ ಕುಲಪತಿಡಾ. ವಿ.ಡಿ. ಮೈತ್ರಿ, ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ, ಡೀನ್‌ಡಾ. ಲಕ್ಷ್ಮಿ ಪಾಟೀಲ ಮಾಕಾ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಮತ್ತು ಶರಣಬಸವ ವಿಶ್ವವಿದ್ಯಾಲಯದ ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here