ಕಾರ್ಮಿಕರ ಭವಿಷ್ಯ ನಿಧಿ ಕಾರ್ಯಾಲಯದಲ್ಲಿ ಆಯುಧ ‌ಪೂಜೆ ಆಚರಣೆ

0
101

ಕಲಬುರಗಿ: ಶರನ್ನವರಾತ್ರಿ 9ನೇ‌ ದಿನ ನಾಡಿನೆಲ್ಲಡೆ ಆಯುಧ ಪೂಜೆಯನ್ನು ಬಹಳ ಸಂಭ್ರಮ ಹಾಗೂ ಸಡಗರದಿಂದ ನೆರವೆರಿಸಲಾಗುವುದು. ನಗರದ ಆಳಂದ ರಸ್ತೆಯಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ ಕಾರ್ಯಾಲಯದಲ್ಲಿ ಆಯುಧ ಪೂಜೆ ಕಾರ್ಯಕ್ರಮವು ಸರಳವಾಗಿ ನೇರವೆರಿಸಲಾಯಿತು.

ಆಯುಧ ಪೂಜೆಗೆ ಐತಿಹಾಸಿಕ ಕಥೆವಿದೆ. ದುರ್ಗಾದೇವಿಯು ಚಾಮುಂಡೇಶ್ವರಿಯ ರೂಪ ತಾಳಿ ಮಹಿಷಾಸುರನನ್ನು ಸಂಹರಿಸಿದ ಸಂದರ್ಭದಲ್ಲಿ ದೇವಿ ಉಪಯೋಗಿಸಿದ ಆಯುಧಗಳನ್ನು ಮತ್ತೆ ಬಳಸದೆ ಬಿಸಾಡಿದಳು. ಆ ಆಯುಧಗಳನ್ನು ನಂತರ ಪೂಜಿಸಲಾಯಿತು. ಹಾಗಾಗಿಯೇ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ ಎಂಬ ಕಥೆ ಪುರಾಣಗಳಲ್ಲಿ ಉಲ್ಲೇಖವಾಗಿದೆ.

Contact Your\'s Advertisement; 9902492681

ಇದಲ್ಲದೇ ಹಿಂದೂ ಸಂಸ್ಕೃತಿಯ ಪ್ರಕಾರ ಯಂತ್ರಗಳಿಗೂ ದೈವಿಕ ಶಕ್ತಿ ಇದೆ ಎಂಬುವುದು ಹಲವರ ನಂಬಿಕೆಯಾಗಿದ್ದು, ಇದರಿಂದಾಗಿ ಆಯುಧ ಪೂಜೆಯಂದು ನಾಡಿನ ಎಲ್ಲಾ ಕಛೇರಿಗಳಲ್ಲಿರುವ ಕಂಪ್ಯೂಟರ ಹಾಗೂ ವಿವಿಧ ರೀತಿಯ ಯಂತ್ರಗಳಿಗೆ ಪೂಜೆ ಸಲ್ಲಿಸಿದರೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ ಮತ್ತು ಕಾರ್ಯಾಲಯದ ಕೆಲಸ ಕಾರ್ಯಗಳು ಸುಲಲಿತವಾಗಿ ನಡೆಯುತ್ತವೆ ಎನ್ನಲಾಗುತ್ತದೆ.

ಕಾರ್ಯಕ್ರಮದಲ್ಲಿ ವಿಠ್ಠಲ ಮರಗುತ್ತಿ, ಭವಿಷ್ಯ ನಿಧಿ ನೌಕರರ ಸಂಘದ ಕಾರ್ಯದರ್ಶಿ ಬಸವರಾಜ ಹೆಳವರ ಯಾಳಗಿ, ಪಾಂಡೆ ರಾಜಕುಮಾರ, ಶಿವಶರಣಪ್ಪ‌ ಶಿವಕೇರಿ, ಕಾಂತಪ್ಪ, ನರಸಿಂಗ, ಚಿತ್ರಾಬಾಯಿ, ಸುಗಳಾಬಾಯಿ, ರಮೇಶ ಹಾಗೂ ಇನ್ನಿತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here