ಕೋವಿಡ್ ಭೀತಿ: ಮತ್ತೊಂದು ಜಾತ್ರೆ ರದ್ದು

0
97

ಕಲಬುರಗಿ: ಪ್ರತಿವರ್ಷ ಲಕ್ಷಾಂತರ ಜನರು ಭಾಗವಹಿಸಿ ಭಕ್ತಿ ಹಾಗೂ ಶ್ರದ್ಧೆಗಳಿಂದ ನಡೆಸಲಾಗುತ್ತಿರುವ ಜೇವರ್ಗಿಯ ಆದಿಶಕ್ತಿ ಎಂದೇ ಹೆಸರು ಪಡೆದಿರುವ ಮಹಾಲಕ್ಷ್ಮಿ ದೇವಿಯ( ಕಲ್ಕತ್ತಾ ದೇವಿ) ಜಾತ್ರೆಯನ್ನು ಈ ಬಾರಿ ಕರೋನ ಹರಡುವ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ.

ಜೇವರ್ಗಿಯ ಮಹಾಲಕ್ಷ್ಮಿ ಟ್ರಸ್ಟ್ ಕಮಿಟಿಯ ಅಧ್ಯಕ್ಷರು ಬಸವರಾಜ್ ಸಾಹುಕಾರ ಗೋಗಿ ಸಭೆ ಸೇರಿ ಪತ್ರಿಕಾ ಪ್ರಕಟಣೆ ನೀಡುವ ಮೂಲಕ ಈ ವಿಷಯವನ್ನು ತಿಳಿಸಿದ್ದಾರೆ. ಈ ವರ್ಷ ದೇವಿಯ ಭಕ್ತರು ತಮ್ಮ ತಮ್ಮ ಮನೆಯಲ್ಲಿ ಭಾವಚಿತ್ರಕ್ಕೆ ಸರಳವಾಗಿ ಪೂಜೆ ನೆರವೇರಿಸುವ ಮೂಲಕ ಆಚರಿಸಬೇಕೆಂದು ವಿನಂತಿಸಿದ್ದಾರೆ.

Contact Your\'s Advertisement; 9902492681

ಈ ವರ್ಷ ಜಾತ್ರೆಯನ್ನು ರದ್ದು ಪಡಿಸಲಾಗಿದ್ದು ಜನರು ಅನವಶ್ಯಕವಾಗಿ ಸೇರುವುದು ಹಾಗೂ   ಇತರ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ನಡೆಸಿ ಪೂಜಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಭಕ್ತರು ಈ ಬಾರಿಯ ಜಾತ್ರೆಯನ್ನು ರದ್ದು ಗೊಳಿಸಿದ್ದಕ್ಕೆ ಸಹಕಾರ ನೀಡಬೇಕು ಹಾಗೂ ಕರೋನವೈರಸ್ ಹರಡದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಪತ್ರಿಕಾ ಪ್ರಕಟಣೆಯ ಮೂಲಕ ನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here