ಭ್ರಷ್ಟಾಚಾರದಲ್ಲಿ ಭಾಗಿಯಾದ ಪಂಚಾಯತ್ ಸದಸ್ಯರ ಸದಸ್ಯತ್ವ ರದ್ದು ಗೊಳಿಸಲು ಆಗ್ರಹ

0
91

ಕವಿತಾಳ: ಪಟ್ಟಣ ಪಂಚಾಯತಿ ವ್ಯಾಪ್ತಿಯ ಸ್ವಚ್ಚ್ ಭಾರತ್ ಮಿಷನ್, ಸೇರಿ ಇತರೆ ಯೋಜನೆಗಳಡಿಯಲ್ಲಿ ಸಾರ್ವಜನಿಕ ಅನುಕೂಲಕ್ಕಾಗಿ ಮಂಜೂರಾಗಿದ್ದ ವೈಯಕ್ತಿಕ ಶೌಚಾಲಯಗಳನ್ನು ಪಟ್ಟಣ ಪಂಚಾಯತ್ ಸದಸ್ಯರು ತಾವೆ ಫಲಾನುಭವಿಗಳಾಗಿ ಮತ್ತು ತಮ್ಮ ಸಂಬಧಿಕರನ್ನು ಫಲಾನುಭವಿಗಳನ್ನಾಗಿ ಮಾಡಿ ಹಾಗೂ ನಾಲ್ಕೈದು ವರ್ಷಗಳ ಹಿಂದೆ ನಿರ್ಮಿಸಿದ ಹಳೆಯ ಶೌಚಾಲಯಗಳಿಗೆ ಹೊಸದಾಗಿ ನಿರ್ಮಿಸಿದ್ದೇವೆಂದು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಸುಮಾರು 48 ಕ್ಕೂ ಹೆಚ್ಚಿನ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಂಡು ಏಳು ಲಕ್ಷಕ್ಕೂ ಅಧಿಕ ಹಣವನ್ನು ಲೂಟಿ ಮಾಡಿದ್ದಾರುವಂತಹ ಅಧಿಕಾರಿ ಹಾಗೂ ಪಂಚಾಯತ್ ಸದಸ್ಯರ ಸದಸ್ಯತ್ವ ರದ್ದು ಗೊಳಿಸಬೇಕೆಂದು ಶಿವಕುಮಾರ ಮ್ಯಾಗಳಮನಿ ಆಗ್ರಹಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ತಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಇಲ್ಲವಾದಲ್ಲಿ ಉಗ್ರ ಸ್ವರೂಪದ ಹೋರಾಟ ಸೇರಿ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂದು SFI ರಾಜ್ಯ ಉಪಾಧ್ಯಕ್ಷರು ಹಾಗೂ ಕವಿತಾಳ ನವ ನಿರ್ಮಾಣ ವೇದಿಕೆಯ ಅಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಈಗಾಗಲೇ ವರದಿ ಬಂದರು ಜಿಲ್ಲಾಧಿಕಾರಿ, ಜಿಲ್ಲಾ ಯೋಜನಾ ನಿರ್ದೇಶನಾಧಿಕಾರಿ, ತಹಶಿಲ್ದಾರರು ಸೇರಿ ಇತರ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದನ್ನು ಗಮನಿಸಿದರೆ ಇವರು ಭ್ರಷ್ಟರೊಂದಿಗೆ ಶಾಮೀಲಾಗಿದ್ದಾರೆ ಅನ್ನುವ ಅನುಮಾನಗಳು ಕಾಡುತ್ತಿವೆ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕರ ಸಮಸ್ಯೆ ಗಳನ್ನು ಪರಿಹರಿಸಲು ವಿಫಲವಾದ ಮುಖ್ಯಾಧಿಕಾರಿ ಯ ಮೇಲೆ ಕ್ರಮ ಜರುಗಿಸಿ ಪಟ್ಟಣದ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಶೇಷ ಗಮನ ಹರಿಸಬೇಕು ಎಂದರು.

ಈ ಸಂದರ್ಭದಲ್ಲಿ SFI ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್, DYFI ಕವಿತಾಳ ಘಟಕದ ಅಧ್ಯಕ್ಷ ಮಹಮ್ಮದ್ ರಫೀ, SFI ಅಧ್ಯಕ್ಷರಾದ ಮೌನೇಶ ಬುಳ್ಳಾಪುರ, ಜೈ ಭಾರತ ಸಂಘಟನೆ ಯ ಜಾವೀದ್ ಎಂ.ಎಸ್. ಸಂಘಟನೆ ಮುಖಂಡರಾದ ಮಹಾದೇವ ಬುಳ್ಳಾಪುರ, ವೆಂಕಟೇಶ, ನಾಗಮೋಹನ್ ಸಿಂಗ್, ಮಲ್ಲಿಕಾರ್ಜುನ, ಸುರೇಶ್, ಯಲ್ಲಪ್ಪ ಎಮ್. ನಾಗರಾಜ, ಕುಪ್ಪಣ್ಣ ಸೇರಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here