ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕಿಟ್ ವಿತರಣೆ

0
134

ಕಲಬುರಗಿ: ಹೈ.ಕ.ಶಿ.ಸಂಸ್ಥೆಯ ಶ್ರೀಮತಿ ವಿ.ಜಿ. ಮಹಿಳಾ ಪದವಿ ಮಹಾವಿದ್ಯಾಲಯ ಹಾಗೂ ರಾ.ಸೇ.ಯೋ.ಅ ಮತ್ತು ಬ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಭೀಮಾ ನದಿಯ ಪ್ರವಾಹದಿಂದ ಮುಳುಗಡೆಗೆ ಒಳಗಾಗಿರುವ ಹಾಗರಗುಂಡಗಿ ಗ್ರಾಮದ ಸಂತ್ರಸ್ತ ಮಹಿಳೆಯರು, ವೃದ್ದರು, ಮಕ್ಕಳಿಗೆ ಸಿರೆ, ಪಂಚೆ, ಬಿಸ್ಕತ್ತು,  ಹಾಗೂ ದಿನಸಿ ಪದಾರ್ಥಗಳನ್ನು ವಿತರಿಸಲಾಯಿತು.

ಗ್ರಾಮದಲ್ಲಿ ಪ್ರವಾಹ ಪೀಡಿತ ಮನೆ ಮನೆಗಳಿಗೆ ಭೇಟಿ ನೀಡಿ ನೆರವನ್ನು ನೀಡಲಾಯಿತು,ಕಾಲೇಜಿನ ಪ್ರಾಧ್ಯಾಪಕರಾದ,ಡಾ.ಚಂದ್ರಕಲಾ ಪಾಟೀಲ ,ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿಗಳಾದ ಡಾ.ಮೋಹನರಾಜ್ ಪತ್ತಾರ,ಡಾ.ಪರವಿನ್ ರಾಜೆಸಾಬ್,ಹಾಗೂ  ಪ್ರಾಧ್ಯಾಪಕ ರಾದ.ರೇಣುಕಾ ಹಾಗರಗುಂಡಗಿ. ಡಾ.ಮಹೇಶ ಗಂವ್ಹಾರ, ಉಪನ್ಯಾಸಕರಾದ ಉಷಾ ಪಾಟೀಲ, ರೇಖಾ,ಕವಿತಾ,ವಿಜಯಲಕ್ಷ್ಮಿ, ಮನಿಷಾ ,ಶರಣಬಸವ ಬಿರಾದಾರ,ಹಳೆಯ ವಿದ್ಯಾರ್ಥಿನಿಯರಾದ ಭಾಗ್ಯ ಇನ್ನಿತರರು ಭಾಗವಹಿಸಿದ್ದರು.ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ, ಶಿವಾನಂದ ಸೋನಾರ ,ಇತರರು ಕಾಲೇಜಿನ ಸಿಬ್ಬಂದಿಯೊಂದಿಗೆ ಕೈಜೋಡಿಸಿ ವಿತರಣಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ  ಗ್ರಾಮಸ್ಥರನ್ನು  ಉದ್ದೇಶಸಿ ಮಾತನಾಡುತ್ತಾ  ನಮ್ಮ ಮಹಾವಿದ್ಯಾಲಯವು ಯಾವತ್ತೂ ಇಂತಹ ಸಂದರ್ಭಗಳಲ್ಲಿ ತಮ್ಮ ನೆರವಿಗೆ ಬರಲು ಸಿದ್ದವಿದೆ  ಎಂದು ಡಾ.ಚಂದ್ರಕಲಾ ಪಾಟೀಲ್ ಆಶ್ವಾಸನೆ ನೀಡಿದರು‌. ಗ್ರಾಮದ ಮುಖಂಡರನ್ನು ರಾ.ಸೇ.ಯೋ.ಕಾರ್ಯಕ್ರಮಾಧಿಕಾರಿ ಡಾ.ಮೋಹನರಾಜ ಪತ್ತಾರ ಸನ್ಮಾನಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here